ಲಾಕ್ ಡೌನ್ ಎಫೆಕ್ಟ್: ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಸಾಂಕೇತಿಕ ಮಿನಿ ರಥೋತ್ಸವ- ವಿಡಿಯೋ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕಂಠೇಶ್ವರ ಸ್ವಾಮಿ ದೇವಾಲಯದ ಮಹಾರಥೋತ್ಸವ ಪ್ರತಿ ವರ್ಷ ಲಕ್ಷಾಂತರ ಜನಸಾಗರದ ನಡುವೆ ವೈಭವದಿಂದ ಜರುಗುತಿತ್ತು.
ಮಿನಿ ರಥೋತ್ಸವ
ಮಿನಿ ರಥೋತ್ಸವ

ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕಂಠೇಶ್ವರ ಸ್ವಾಮಿ ದೇವಾಲಯದ ಮಹಾರಥೋತ್ಸವ ಪ್ರತಿ ವರ್ಷ ಲಕ್ಷಾಂತರ ಜನಸಾಗರದ ನಡುವೆ ವೈಭವದಿಂದ ಜರುಗುತಿತ್ತು.

ಆದರೆ, ಈ ಬಾರಿ ಕೊರೋನಾ ವೈರಸ್ ಕಾರಣ ಲಾಕ್ ಡೌನ್ ಜಾರಿಯಲ್ಲಿರುವುದರಿಂದ  ಸಾಂಕೇತಿಕವಾಗಿ ಮಿನಿ ರಥೋತ್ಸವ  ನಡೆದಿದೆ. 

ದೇವಾಲಯ ಆಡಳಿತ ಮಂಡಳಿ ಇಂದು ಮುಂಜಾನೆ ಸಾಂಕೇತಿಕವಾಗಿ ರಥೋತ್ಸವವನ್ನು ನಡೆಸಿದರು.ಅರ್ಚಕರು ಮಂತ್ರಘೋಷಗಳೊಂದಿಗೆ ದೇವಾಲಯದ ಸುತ್ತಲೂ ಮಿನಿ ರಥವನ್ನು ಎಳೆಯುವ ಮೂಲಕ ಸಾಂಪ್ರದಾಯಿಕ ಆಚರಣೆಯನ್ನು ಪೂರ್ಣಗೊಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com