ರಾಜ್ಯದಲ್ಲಿ ಸಾಕಷ್ಟು ವೈಯಕ್ತಿಕ ಸುರಕ್ಷತಾ ಸಾಧನ- ಪಿಪಿಇ ಕಿಟ್ ಗಳಿವೆ: ಮುಖ್ಯಮಂತ್ರಿ ಯಡಿಯೂರಪ್ಪ

ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಅಗತ್ಯವಿರುವ ವೈಯಕ್ತಿಕ ಸುರಕ್ಷತಾ ಸಾಧನಗಳ ಕೊರತೆಯಿಲ್ಲ, ರಾಜ್ಯದಲ್ಲಿ  ಸಾಕಷ್ಟು  ಪಿಪಿಇ ಕಿಟ್ ಗಳು ಲಭ್ಯವಿರುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಅಗತ್ಯವಿರುವ ವೈಯಕ್ತಿಕ ಸುರಕ್ಷತಾ ಸಾಧನಗಳ ಕೊರತೆಯಿಲ್ಲ, ರಾಜ್ಯದಲ್ಲಿ  ಸಾಕಷ್ಟು  ಪಿಪಿಇ ಕಿಟ್ ಗಳು ಲಭ್ಯವಿರುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಕೋವಿಡ್-19 ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಇಂದು ನಡೆದ  ಸಮಾಲೋಚನಾ ಸಭೆಯಲ್ಲಿ ಪಿಪಿಇ ಕಿಟ್ ಗಳ ಗುಣಮಟ್ಟ ಹಾಗೂ ಕಿಟ್ ಗಳ ಕೊರತೆ ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ,  9 ಲಕ್ಷ ಪಿಪಿಇ ಕಿಟ್ ಗಳಿಗೆ ಆದೇಶ ನೀಡಲಾಗಿದೆ. ಈ ಪೈಕಿ 1 ಲಕ್ಷವನ್ನು ಈಗಾಗಲೇ ತಲುಪಿಸಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com