ಕೊರೋನಾ: ಪ್ರಾಣಪಣಕ್ಕಿಟ್ಟು ಭದ್ರತೆ ಒದಗಿಸುತ್ತಿರುವ ಪೊಲೀಸರ ನೆರವಿಗೆ ಬಂದ ಸ್ಥಳೀಯ ಯುವಕರು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ

ಕೊರೋನಾ ವೈರಸ್ ಭೀತಿಯಿಂದಾಗಿ ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡಿದ್ದರೂ, ಪ್ರಾಣಪಣಕ್ಕಿಟ್ಟು ಭದ್ರತೆ ಒದಗಿಸುತ್ತಿರುವ ಪೊಲೀಸರ ನೆರವಿಗೆ ಸ್ಥಳೀಯ ಯುವಕರು ಬಂದಿದ್ದಾರೆ. ಇದರಂತೆ ಪೊಲೀಸರ ಅನುಮತಿ ಪಡೆದಿರುವ ಯುವಕರು, ವೈರಸ್ ಕುರಿತು ಜನರಲ್ಲಿ ಜಾಗೃತಿ ಮೂಡಿರುವ ಕಾರ್ಯಗಳನ್ನು ಮಾಡುತ್ತಿದ್ದಾರೆ. 
ಕೊರೋನಾ: ಪ್ರಾಣಪಣಕ್ಕಿಟ್ಟು ಭದ್ರತೆ ಒದಗಿಸುತ್ತಿರುವ ಪೊಲೀಸರ ನೆರವಿಗೆ ಬಂದ ಸ್ಥಳೀಯ ಯುವಕರು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ
ಕೊರೋನಾ: ಪ್ರಾಣಪಣಕ್ಕಿಟ್ಟು ಭದ್ರತೆ ಒದಗಿಸುತ್ತಿರುವ ಪೊಲೀಸರ ನೆರವಿಗೆ ಬಂದ ಸ್ಥಳೀಯ ಯುವಕರು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ

ಬೆಂಗಳೂರು: ಕೊರೋನಾ ವೈರಸ್ ಭೀತಿಯಿಂದಾಗಿ ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡಿದ್ದರೂ, ಪ್ರಾಣಪಣಕ್ಕಿಟ್ಟು ಭದ್ರತೆ ಒದಗಿಸುತ್ತಿರುವ ಪೊಲೀಸರ ನೆರವಿಗೆ ಸ್ಥಳೀಯ ಯುವಕರು ಬಂದಿದ್ದಾರೆ. ಇದರಂತೆ ಪೊಲೀಸರ ಅನುಮತಿ ಪಡೆದಿರುವ ಯುವಕರು, ವೈರಸ್ ಕುರಿತು ಜನರಲ್ಲಿ ಜಾಗೃತಿ ಮೂಡಿರುವ ಕಾರ್ಯಗಳನ್ನು ಮಾಡುತ್ತಿದ್ದಾರೆ. 

ಭಾರತಿನಗರ ನಿವಾಸಿಗಳಾಗಿರುವ 10 ಮಂದಿ ಯುವಕರು ಪೊಲೀಸ್ ಇಲಾಖೆಯ ಅನುಮತಿ ಪಡೆದುಕೊಂಡು ರಸ್ತೆಗಿಳಿದಿದ್ದು, ಅನಗತ್ಯವಾಗಿ ಬೀದಿಗೆ ಬರುವ ವಾಹನಗಳು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. 

ಯುವಕರಿಗೆ ಅನುಮತಿ ನೀಡಿರುವ ಪೊಲೀಸರು, ಜನರು ಅವರ ಮಾತನ್ನು ಕೇಳುವ ಸಲುವಾಗಿ ಪೊಲೀಸ್ ಜಾಕೆಟ್ ಗಳನ್ನು ವಿತರಿಸಿದ್ದಾರೆ. ಇದೀಗ ಈ ಯುವಕರು ಪ್ರತೀನಿತ್ಯ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. 

ಕೋಲ್ಸ್ ಪಾರ್ಕ್ ಸಿಗ್ನಲ್ ನಲ್ಲಿರುವ ಕೆಲ ಯುವಕರು ಮಾಸ್ಕ್ ಹಾಗೂ ಪೊಲೀಸ್ ಜಾಕೆಟ್ ಗಳನ್ನು ಧರಿಸಿದ್ದು, ರಸ್ತೆಯಲ್ಲಿ ಬರುವ ಕಾರುಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪರೀಶೀಲಿಸಿ, ರಸ್ತೆಗಿಳಿದಿರುವ ಕಾರಣಗಳನ್ನು ಕೇಳುತ್ತಿರುವುದು ಕಂಡು ಬಂದಿದೆ. ವಾಹನದಲ್ಲಿ ಬರುವವರನ್ನು ಪರಿಶೀಲಿಸುವ ಈ ಯುವಕರು, ಪಾಸ್ ಇರುವಂತಹ ವಾಹನ ಸವಾರರನ್ನು ಚಲಿಸಲು ಬಿಡುತ್ತಿದ್ದಾರೆ. ಪಾಸ್ ಇಲ್ಲದವರಿಗೆ ಎಚ್ಚರಿಕೆ ನೀಡಿ ಹಿಂತಿರುವಂತೆ ತಿಳಿಸುತ್ತಿದ್ದಾರೆ. ಅಲ್ಲದೆ, ಇದೇ ವೇಳೆ ಜನರಲ್ಲಿ ವೈರಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. 

ಯುವಕರ ತಂಡದಲ್ಲಿ ಒಬ್ಬನಾಗಿರುವ ಭಾಸ್ಕರ್ ಡಾನ್ ಎಂಬುವವರು ಮಾತನಾಡಿ, ಲಾಕ್ ಡೌನ್ ಆದೇಶವಿದ್ದರೂ, ಹಲವು ಜನರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಇದನ್ನು ಗಮನಿಸಿ ನಾವು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದೆವು. ಇದೀಗ ನಾವೇ ತಂಡವನ್ನು ರಚನೆ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಸ್ಥಳೀಯ ನಿವಾಸಿಗಳೇ ಆಗಿರುವುದರಿಂದ ಕೆಲವರು ನಮ್ಮ ಮಾತನ್ನು ಕೇಳುತ್ತಿದ್ದಾರೆಂದು ಹೇಳಿದ್ದಾರೆ. 

ರಾಜನ್ ಎಂಬುವವರು ಮಾತನಾಡಿ, ಕಾರಣವಿಲ್ಲದೆ ರಸ್ತೆಗೆ ಬರುವ ಜನರ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದೇವೆ. ಬಳಿಕ ಪೊಲೀಸರೇ ಅವರ ವಾಹನವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಕೆಲವರಂತೂ ತುರ್ತುಪರಿಸ್ಥಿತಿ ಎಂದು ಹೇಳಿಕೊಂಡು ಬರುತ್ತಾರೆ. ಸಾಕಷ್ಟು ಪ್ರಕರಣಗಳು ನಕಲಿಯಾಗಿರುತ್ತವೆ. ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದರೂ, ಪಕ್ಕಕ್ಕೆ ಸರಿಸಿ ವಾಹನ ಚಲಾಯಿಸುತ್ತಿದ್ದಾರೆ. ಅಂತಹವನ್ನು ಕಂಡು ನಾವು ಇಂತಹ ಕೆಲಸ ಮಾಡದಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆಂದು ತಿಳಿಸಿದ್ದಾರೆ. 

ಈ ಬಗ್ಗೆ ಭಾರತಿನಗರ ಪೊಲೀಸ್ ಠಾಣೆಯ ಪೊಲೀಸರು ಮಾತನಾಡಿ, ಯುವಕರು ನಮಗೆ ಸಹಾಯ ಮಾಡುತ್ತಿದ್ದಾರೆ. ಜನರಲ್ಲಿ ಸ್ವಯಂಪ್ರೇರಿತರಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕಾರ್ಯಗಳು ಬಹಳ ಸಂತೋಷವನ್ನು ತರಿಸುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com