ಕೊವಿಡ್-19: ರಾಜ್ಯದಲ್ಲಿ ಮತ್ತೆ 12 ಹೊಸ ಪ್ರಕರಣ ಪತ್ತೆ, ಕೊರೋನಾ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆ

ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಮವಾರ ಮತ್ತೆ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಮವಾರ ಮತ್ತೆ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 163ಕ್ಕೇರಿಕೆಯಾಗಿದೆ.

ಬೆಂಗಳೂರಿನ 32 ವರ್ಷದ ಯುವಕ, ಕೇರಳದ 62 ವರ್ಷದ ಮಹಿಳೆ, ಮೈಸೂರಿನ 7 ಮಂದಿಯಲ್ಲಿ ಮತ್ತು ಬಾಗಲಕೋಟೆಯಲ್ಲಿ ಇಬ್ಬರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ.

ಬೆಂಗಳೂರಿನಲ್ಲಿ ಪತ್ತೆಯಾದ 152ನೇ ಸೋಂಕಿತ ವ್ಯಕ್ತಿ ಸೋಂಕಿತ 43 ಮತ್ತು 44 ಸೋಂಕಿತ ದಂಪತಿಯ ಪುತ್ರನಾಗಿದ್ದು, 153ನೇ ಸೋಂಕಿತ ಕೇರಳ ಮೂಲದ 62 ವರ್ಷದ ವ್ಯಕ್ತಿಯಾಗಿದ್ದಾರೆ. ಈ ವ್ಯಕ್ತಿ ಜರ್ಮನಿಯಿಂದ ಬಂದಿದ್ದ ಸೋಂಕಿತ 106ರೊಂದಿಗೆ ಸಂಪರ್ಕ ಹೊಂದಿದ್ದರು.

154ನೇ ಸೋಂಕಿತ ವ್ಯಕ್ತಿ ಮೈಸೂರು ಮೂಲದವರಾಗಿದ್ದು, ಸೋಂಕಿತ 104ನೇ ವ್ಯಕ್ತಿಯ ಸಹೋದರರಾಗಿದ್ದಾರೆ. 155ನೇ ಸೋಂಕಿತ ವ್ಯಕ್ತಿ ಸಹ ಮೈಸೂರು ಮೂಲದವರಾಗಿದ್ದು, ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸೋಂಕಿತ 156 ಮತ್ತು 157ನೇ ವ್ಯಕ್ತಿ ಸಹ ಮೈಸೂರು ಮೂಲದವರಾಗಿದ್ದು, ದೆಹಲಿಗೆ ಪ್ರಯಾಣ ಬೆಳೆಸಿದ್ದರು. 158ನೇ ಸೋಂಕಿತ ವ್ಯಕ್ತಿಯ ಮಾಹಿತಿ ಇನ್ನು ಲಭ್ಯವಾಗಿಲ್ಲ. 159ನೇ ವ್ಯಕ್ತಿ ಮೈಸೂರಿನವರಾಗಿದ್ದು, ಫಾರ್ಮಾ ಕಂಪನಿಯ ಕಾರ್ಮಿಕನೊಂದಿಗೆ ಸಂಪರ್ಕ ಹೊಂದಿದ್ದರು. 160ನೇ ಸೋಂಕಿತ ವ್ಯಕ್ತಿ ಸಹ ಮೈಸೂರಿನವರಾಗಿದ್ದು, ದುಬೈ ಪ್ರಯಾಣ ಬೆಳೆಸಿದ್ದಾರೆ.

161ನೇ ಸೋಂಕಿತ ವ್ಯಕ್ತಿ ಬಾಲಕೋಟೆಯವರಾಗಿದ್ದು, ಸೋಂಕಿತ 125ನೇ ವ್ಯಕ್ತಿಯ ಪತ್ನಿಯಾಗಿದ್ದಾರೆ. 162ನೇ ಸೋಂಕಿತ 54 ವರ್ಷದ ವ್ಯಕ್ತಿ ಸಹ ಬಾಗಲಕೋಟೆಯವರಾಗಿದ್ದು, ಸೋಂಕಿತ 125ನೇ ವ್ಯಕ್ತಿಯ ಸಹೋದರರಾಗಿದ್ದಾರೆ.

163ನೇ ಸೋಂಕಿತ 43 ವರ್ಷದ ವ್ಯಕ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾಗಿದ್ದು, ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಿಲ್ಲ.

ಇದರೊಂದಿಗೆ ಸರ್ಕಾರ ಹಾಸನದ ವೈದ್ಯಕೀಯ ಸಂಸ್ಥೆ, ಮೈಸೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಂಗಳೂರಿನ ಕಮಾಂಡ್ ಆಸ್ಪತ್ರೆ, ವೈದ್ಯಕೀಯ ವಿಜ್ಞಾನಮತ್ತು ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ಸೂಕ್ಷ್ಮಾಣು ರೋಗ ಸಂಸ್ಥೆ, ಕಲಬುರಗಿ, ಬಳ್ಳಾರಿ, ಬೆಂಗಳೂರಿನ ನಿಮ್ಹಾನ್ಸ್ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗಳಲ್ಲಿ 10 ಪ್ರಯೋಗಾಲಯಗಳನ್ನು ಕೋವಿಡ್-19 ಪರೀಕ್ಷೆಗಾಗಿ ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com