ಲಾಕ್ ಡೌನ್ ಮಧ್ಯೆ ಹಸಿದ ಹೊಟ್ಟೆ ತುಂಬಿಸುತ್ತಿರುವ ಕಾರ್ಯಕರ್ತರಿವರು!

ಕಳೆದೊಂದು ವಾರದಿಂದ Our National Welfare Trust ಅಡಿಯಲ್ಲಿ 6 ಮಂದಿ ಕಾರ್ಯಕರ್ತರು ಬೆಂಗಳೂರಿನ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಕೊರೋನಾ ರೋಗಿಗಳನ್ನು ನೋಡಿಕೊಳ್ಳುತ್ತಿರುವವರಿಗೆ ಆಸ್ಪತ್ರೆಗಳಿಗೆ ಹೋಗಿ ಆಹಾರ ಒದಗಿಸುತ್ತಿದ್ದಾರೆ.
ಲಾಕ್ ಡೌನ್ ಮಧ್ಯೆ ಹಸಿದ ಹೊಟ್ಟೆ ತುಂಬಿಸುತ್ತಿರುವ ಕಾರ್ಯಕರ್ತರಿವರು!

ಬೆಂಗಳೂರು: ಕಳೆದೊಂದು ವಾರದಿಂದ Our National Welfare Trust ಅಡಿಯಲ್ಲಿ 6 ಮಂದಿ ಕಾರ್ಯಕರ್ತರು ಬೆಂಗಳೂರಿನ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಕೊರೋನಾ ರೋಗಿಗಳನ್ನು ನೋಡಿಕೊಳ್ಳುತ್ತಿರುವವರಿಗೆ ಆಸ್ಪತ್ರೆಗಳಿಗೆ ಹೋಗಿ ಆಹಾರ ಒದಗಿಸುತ್ತಿದ್ದಾರೆ.

ಪ್ರಾಯೋಗಿಕವಾಗಿ ಆರಂಭಿಸಲಾದ ಈ ಕೆಲಸ ಇಂದು ಹಲವರ ಹೊಟ್ಟೆ ತುಂಬಿಸುತ್ತಿದೆ. ಅನೇಕ ನಿರ್ಗತಿಕರಿಗೆ ಈ ಕಾರ್ಯಕರ್ತರು ಊಟ, ತಿಂಡಿ ಒದಗಿಸುತ್ತಿದ್ದಾರೆ.

ಕೆಲವು ಆಸ್ಪತ್ರೆಗಳಲ್ಲಿ ಕ್ಯಾಂಟೀನ್ ಬಂದ್ ಆಗಿರುವುದರಿಂದ ರೋಗಿಗಳಿಗೆ ಆಹಾರ ಒದಗಿಸುವವರು ಬೇಕಾಗುತ್ತದೆ. ಊಟ ತಿಂಡಿ ಮಾಡಲು ಎಲ್ಲಿಗೆ ಹೋಗುವುದು, ಹೊರಗಡೆ ಎಲ್ಲವೂ ಬಂದ್ ಎಂದು ಹಸಿವೆಯಿಂದ ಬಳಲುತ್ತಿರುತ್ತಾರೆ. ಇನ್ನು ಹಲವರಿಗೆ ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವುದು ಹೇಗೆ ಎಂದು ಗೊತ್ತಿಲ್ಲ. ಇನ್ನು ಕೆಲವರಲ್ಲಿ ಹಣ ಇರುವುದಿಲ್ಲ. ಇಂಥ ಕಡೆಗಳಿಗೆ ಹೋಗಿ ಆಹಾರ ನೀಡುತ್ತೇವೆ ಎನ್ನುತ್ತಾರೆ ಐಟಿ ಕನ್ಸಲ್ಟೆಂಟ್ ಮತ್ತು ಕಾರ್ಯಕರ್ತ ಗುಂಪಿನ ಸದಸ್ಯ ಮೊಹಮ್ಮದ್ ಖಾಲಿದ್.

ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲದೆ ಕ್ವೀನ್ಸ್ ರಸ್ತೆಯ ಶಿಫಾ ಆಸ್ಪತ್ರೆಗೆ ಆಹಾರ ನೀಡಿದ್ದೇವೆ. ಅಲ್ಲಿರುವವರೆಗೆ ಬಹಳ ಸಹಾಯವಾಗಿದೆ. ನಗರದ ಕಿದ್ವಾಯಿ, ಬೌರಿಂಗ್, ವಿಕ್ಟೋರಿಯಾ ಮೊದಲಾದ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ನೀಡಿದ್ದೇವೆ ಎಂದರು.

500 ಪ್ಯಾಕೆಟ್ ದಾಲ್ ಅನ್ನ, ಪುಲಾವ್ ನ್ನು ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆ ಇರುವವರಿಗೆ ನೀಡುತ್ತಿದ್ದು ಇದಕ್ಕೆ ಗುತ್ತಿಗೆದಾರರೊಬ್ಬರಿಗೆ ದಿನಂಪ್ರತಿ 15 ಸಾವಿರ ರೂಪಾಯಿ ದರ ವಿಧಿಸುತ್ತಾರೆ. ಈ ಕಾರ್ಯಕರ್ತರೇ ಗುತ್ತಿಗೆದಾರರಿಗೆ ಹಣ ನೀಡುತ್ತಾರಂತೆ.

ಲಾಕ್ ಡೌನ್ ಮುಗಿಯುವವರೆಗೆ ಮುಂದುವರಿಸಿಕೊಂಡು ಹೋಗಬೇಕೆಂದುಕೊಂಡಿದ್ದೇವೆ. ಪೊಲೀಸರಿಂದ ವಾಹನ ಪಾಸ್ ಸಿಕ್ಕಿದ್ದು ಇದರಿಂದ ಆಸ್ಪತ್ರೆಗಳಿಗೆ ಹೋಗಿ ಆಹಾರ ನೀಡಲು ಸುಲಭವಾಗುತ್ತದೆ. ಆಸ್ಪತ್ರೆಗಳಲ್ಲದೆ ದಿನಗೂಲಿ ನೌಕರರು, ಕೊಳಗೇರಿ ಪ್ರದೇಶದಲ್ಲಿರುವವರಿಗೆ ಸಹ ಆಹಾರ ಒದಗಿಸುತ್ತೇವೆ ಎಂದು ಖಾಲಿದ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com