ಲಾಕ್‌ಡೌನ್ ಉಲ್ಲಂಘಿಸಿ ಅಪ್ರಾಪ್ತ ಮಗನಿಗೆ ಕಾರು ಚಾಲನೆ ಹೇಳಿಕೊಡುತ್ತಿದ್ದ ಪೋಷಕರಿಗೆ ರವಿ ಡಿ. ಚನ್ನಣ್ಣನವರ್ ​ಕ್ಲಾಸ್

ಕೊರೊನಾ ಸೋಂಕು ನಿಯಂತ್ರಣಕ್ಕೆ ಕಡಿವಾಣ ಹಾಕಲು ಘೋಷಿಸಿರುವ ಲಾಕ್​ಡೌನ್​ ನಿಯಮ‌‌ ಉಲ್ಲಂಘಿಸಿ ಮನೆಯಿಂದ ಹೊರಬಂದು ಅಪ್ರಾಪ್ತ ಮಗನಿಗೆ ಕಾರು ಚಾಲನೆ ಹೇಳಿಕೊಡುತ್ತಿದ್ದ ಪೋಷಕರಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ​ ಕ್ಲಾಸ್​ ತೆಗೆದುಕೊಂಡಿದ್ದಾರೆ.
ಲಾಕ್‌ಡೌನ್ ಉಲ್ಲಂಘಿಸಿ ಅಪ್ರಾಪ್ತ ಮಗನಿಗೆ ಕಾರು ಚಾಲನೆ ಹೇಳಿಕೊಡುತ್ತಿದ್ದ ಪೋಷಕರಿಗೆ ರವಿ ಡಿ. ಚನ್ನಣ್ಣನವರ್ ​ಕ್ಲಾಸ್

ದೊಡ್ಡಬಳ್ಳಾಪುರ: ಕೊರೊನಾ ಸೋಂಕು ನಿಯಂತ್ರಣಕ್ಕೆ ಕಡಿವಾಣ ಹಾಕಲು ಘೋಷಿಸಿರುವ ಲಾಕ್​ಡೌನ್​ ನಿಯಮ‌‌ ಉಲ್ಲಂಘಿಸಿ ಮನೆಯಿಂದ ಹೊರಬಂದು ಅಪ್ರಾಪ್ತ ಮಗನಿಗೆ ಕಾರು ಚಾಲನೆ ಹೇಳಿಕೊಡುತ್ತಿದ್ದ ಪೋಷಕರಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ​ ಕ್ಲಾಸ್​ ತೆಗೆದುಕೊಂಡಿದ್ದಾರೆ.

ದೊಡ್ಡಬಳ್ಳಾಪುರ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಪೋಷಕರು ಅಪ್ರಾಪ್ತ ಮಗನಿಗೆ ಡ್ರೈವಿಂಗ್​ ಹೇಳಿ ಕೊಡುತ್ತಿದ್ದುದನ್ನು ಗಮನಿಸಿದ ಎಸ್ಪಿ ರವಿ ಡಿ ಚನ್ನಣ್ಣನವರ್ ನಡು ರಸ್ತೆಯಲ್ಲಿ ಕಾರು ತಡೆದು ತಂದೆ-ತಾಯಿಗೆ ತರಾಟೆ ತೆಗೆದುಕೊಂಡಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ಮನೆಯಲ್ಲಿರದೇ ಹೊರಗೆ ಬಂದದ್ದು ತಪ್ಪು. ಅದರಲ್ಲೂ ಅಪ್ರಾಪ್ತ ಮಗನಿಗೆ ಕಾರು ಡ್ರೈವಿಂಗ್ ಹೇಳಿ ಕೊಡುತ್ತಿರುವುದು ಕಾನೂನುಬಾಹಿರ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಕರಣ ದಾಖಲಿಸಿ ಕಾರನ್ನು ವಶಕ್ಕೆ ಪಡೆಯುವಂತೆ ಸಿಬ್ಬಂದಿಗೆ ಸೂಚನೆ ನೀಡಿರುವ ಅವರು ಲಾಕ್ ಡೌನ್ ಮುಗಿಯುವವರೆಗೂ ಕಾರು ವಾಪಸ್ಸು ನೀಡುವುದಿಲ್ಲ‌ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com