ಬೆಂಗಳೂರು: ಮನೆಯಲ್ಲೇ ಗುಡ್ ಫ್ರೈಡೆ ಆಚರಿಸಲು ಆರ್ಚ್ ಬಿಷಪ್ ಮನವಿ

ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಗುಡ್ ಫ್ರೈಡೆಯನ್ನು ಮನೆಯಲ್ಲಿಯೇ ಆಚರಿಸುವಂತೆ ಆರ್ಚ್ ಬಿಷಪ್ ಡಾ.ಪೀಟರ್ ಮಾಚಾಡೋ ಅವರು ಕ್ರೈಸ್ತ ಬಾಂಧವರಲ್ಲಿ ಮನವಿ ಮಾಡಿದ್ದಾರೆ

Published: 07th April 2020 05:38 PM  |   Last Updated: 07th April 2020 05:38 PM   |  A+A-


Archbishop_peter_Machado1

ಆರ್ಚ್ ಬಿಷಪ್ ಡಾ.ಪೀಟರ್ ಮಾಚಾಡೋ

Posted By : nagaraja
Source : UNI

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಗುಡ್ ಫ್ರೈಡೆಯನ್ನು ಮನೆಯಲ್ಲಿಯೇ ಆಚರಿಸುವಂತೆ ಆರ್ಚ್ ಬಿಷಪ್ ಡಾ.ಪೀಟರ್ ಮಾಚಾಡೋ ಅವರು ಕ್ರೈಸ್ತ ಬಾಂಧವರಲ್ಲಿ ಮನವಿ ಮಾಡಿದ್ದಾರೆ

ಏ.10ರಂದು ಗುಡ್ ಫ್ರೈಡೆ ಇರುವ ಹಿನ್ನೆಲೆಯಲ್ಲಿ ಮಂಗಳವಾರ ಜಯಮಹಲ್‌ನ ನಿವಾಸದಲ್ಲಿ ಆರ್ಚ್ ಬಿಷಪ್ ಡಾ.ಪೀಟರ್ ಮಾಚಾಡೋ ಅವರನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು ಭೇಟಿ ಮಾಡಿ ಚರ್ಚ್‌ನಲ್ಲಿ ಜನತೆ ಸೇರದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.

ಆಯುಕ್ತರ ಮನವಿಗೆ ಸ್ಪಂದಿಸಿದ ಆರ್ಚ್ ಬಿಷಪ್ ಅವರು, ಲಾಕ್‌ಡೌನ್ ಜಾರಿಯಾದಾಗಿನಿಂದ ಯಾವ ಚರ್ಚ್‌ಗಳ ಬಾಗಿಲು ತೆರೆದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯವಾಗಿರುವುದರಿಂದ ಗುಡ್ ಫ್ರೈಡ್ ದಿನ ಕೂಡ ಯಾವ ಚರ್ಚ್‌ಗಳ ಬಾಗಿಲು ತೆಗೆಯುವುದಿಲ್ಲ ಎಂದು ಭರವಸೆ ನೀಡಿದರು.

ಇನ್ನು, ಗುಡ್ ಫ್ರೈಡ್ ದಿನದಂದು ಹಬ್ಬ ಆಚರಣೆ ಮಾಡುವ ವಿಧಾನವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಿದ್ದೇವೆ. ಅದನ್ನು ನೋಡಿ ಬಾಂಧವರು ಮನೆಯಲ್ಲಿಯೇ ಕುಟುಂಬಸ್ಥರೊಂದಿಗೆ ಗುಡ್ ಫ್ರೈಡ್ ಆಚರಿಸಿ ಪ್ರಾರ್ಥನೆ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಅಂದು ನಗರ ಸೇರಿ ರಾಜ್ಯದ ಯಾವುದೇ ಭಾಗದ ಚರ್ಚ್ ಬಾಗಿಲು ತೆರೆಯುವುದಿಲ್ಲ. ಈಗಾಗಲೇ ಕ್ರೈಸ್ತ ಬಾಂಧವರಲ್ಲಿ ಮನವಿ ಮನೆಯಲ್ಲಿಯೇ ಹಬ್ಬ ಆಚರಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

Stay up to date on all the latest ರಾಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp