ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ

ಮಹಾಮಾರಿ ಕೊರೋನಾ ಜಿಲ್ಲೆಯಲ್ಲೂ ತನ್ನ ವಿರಾಟರೂಪ ದರ್ಶನವನ್ನು ಮುಂದುವರಿಸಿದೆ. ಈಗಾಗಲೇ ತನ್ನ ಅಟ್ಟಹಾಸಕ್ಕೆ ವೃದ್ದರೊಬ್ಬರನ್ನು ಬಲಿ ತೆಗೆದುಕೊಂಡಿರುವ ಕೊರೋನಾ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಾರಂಭಿಸಿದೆ
ಬಾಗಲಕೋಟೆ ನಗರ
ಬಾಗಲಕೋಟೆ ನಗರ

ಬಾಗಲಕೋಟೆ: ಮಹಾಮಾರಿ ಕೊರೋನಾ ಜಿಲ್ಲೆಯಲ್ಲೂ ತನ್ನ ವಿರಾಟರೂಪ ದರ್ಶನವನ್ನು ಮುಂದುವರಿಸಿದೆ. ಈಗಾಗಲೇ ತನ್ನ ಅಟ್ಟಹಾಸಕ್ಕೆ ವೃದ್ದರೊಬ್ಬರನ್ನು ಬಲಿ ತೆಗೆದುಕೊಂಡಿರುವ ಕೊರೋನಾ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಾರಂಭಿಸಿದೆ

ಸೋಮವಾರವಷ್ಟೇ ಸೋಂಕಿನಿಂದ  ಮೃತಪಟ್ಟ ವೃದ್ದನ ಪತ್ನಿ ಮತ್ತು ಸಹೋದರನಲ್ಲಿ ಸೋಂಕು ಇದೆ ಎನ್ನುವುದು ದೃಢಪಟ್ಟಿತ್ತು. ಇಂದು ಜಿಲ್ಲೆಯಲ್ಲಿ ಮತ್ತೆ ಇಬ್ಬರಲ್ಲಿ ಸೋಂಕು ದೃಢ ಪಟ್ಟಿದೆ. ಇದರಿಂದಾಗಿ ಜಿಲ್ಲೆಯ ಸೋಂಕು ದೃಢಪಟ್ಟವರ ಸಂಖ್ಯೆ ಐದಕ್ಕೇರಿದಂತಾಗಿದೆ

ಬಾಗಲಕೋಟೆ ನಗರದ ಕುಟುಂಬವೊಂದರಲ್ಲಿ  ಕಾಣಿಸಿಕೊಂಡಿದ್ದ ಸೋಂಕು ಇದೀಗ ಪಕ್ಕದ ಮನೆಗೂ ವಿಸ್ತರಿಸಿದೆ. ಹಾಗೆ ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸಾಗಿದ್ದ ಮುಧೋಳದ ವ್ಯಕ್ತಿಯೊಬ್ಬರಲ್ಲೂ ಸೋಂಕು ದೃಢಪಟ್ಟಿದ್ದರಿಂದ ಕೊರೊನಾ ವ್ಯಾಪ್ತಿ ಹೆಚ್ಚಳವಾಗುತ್ತಿದೆ ಎನ್ನುವ ಭಯ ಜನತೆಯನ್ನು ಮತ್ತಷ್ಟು ಕಾಡಲಾರಂಭಿಸಿದೆ.

ಕೊರೋನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಯುದ್ದೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ. ಸೋಂಕಿನಿಂದ ವೃದ್ಧನೊಬ್ಬ ಮೃತಪಟ್ಟಾಗಲೇ ಆತ ವಾಸಿಸುತ್ತಿರುವ ಮನೆಯ ಸುತ್ತಲಿನ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿದೆ. ಸೂಕ್ತ ಬಂದೊಬಸ್ತ್ ವ್ಯವಸ್ಥೆ ಮಾಡಿದೆ. ಆ ಪ್ರದೇಶದಲ್ಲಿನ ಯಾರೊಬ್ಬರೂ ಮನೆ ಬಿಟ್ಟು ಹೊರಕ್ಕೆ ಬಾರದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲಿರುವ ನಿವಾಸಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದೆ. ಅಷ್ಟರ ಮಧ್ಯೆ ಇದೀಗ ಆ ಪ್ರದೇಶದಲ್ಲಿನ ಇನ್ನೊಬ್ಬರಿಗೆ ಸೋಂಕು ಹರಡಿರುವುದು ಸಾರ್ವಜನಿಕನ್ನು ನಿದ್ರೆಗೆಡುವಂತೆ ಮಾಡಿದೆ.

ಮುಧೋಳದಲ್ಲಿ ಕೊರೋನಾ ಪತ್ತೆ ಆಗಿರುವುದರಿಂದ ಅಲ್ಲಿಯೂ ಜಿಲ್ಲಾಡಳಿತ ಕಠಿಣ ಕ್ರಮಗಳಿಗೆ ಮುಂದಾಗಿದ್ದು, ಎರಡೂ ಕಡೆಗಳಲ್ಲಿನ ಜನತೆಯಲ್ಲಿ ಮತ್ತಷ್ಟು ಆತಂಕ ಹೆಚ್ಚುವಂತೆ ಮಾಡಿದೆ. ಮಂಗಳವಾರ ಸೋಂಕು ದೃಢಪಟ್ಟವರ ಸಂಪರ್ಕ ಯಾರೊಂದಿಗೆ ಇತ್ತು ಎನ್ನುವುದನ್ನು ಪತ್ತೆ ಹೆಚ್ಚಿ, ಸಂಪರ್ಕದಲ್ಲಿದ್ದವರನ್ನೆಲ್ಲ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಗೆ ಮುಂದಾಗಲಿದೆ. ಜತೆಗೆ ಜಿಲ್ಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಇನ್ನಷ್ಟು ಬೀಗಿ ಕ್ರಮಗಳತ್ತ ಹೆಜ್ಜೆ ಇಡಲಿದೆ.

 ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಜಿಲ್ಲಾದ್ಯಂತ ತೀವ್ರ ಕಳವಳಕ್ಕೆ ಕಾರಣವಾಗಿದೆ.

 ವರದಿ: ವಿಠಲ ಆರ್ ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com