ಏಪ್ರಿಲ್ 5: ರಾಜ್ಯದಲ್ಲಿ ಆ 9 ನಿಮಿಷ ವಿದ್ಯುತ್ ಬಳಕೆಯಲ್ಲಿ 1200 ಮೆಗಾ ವ್ಯಾಟ್ ಇಳಿಕೆ!

ಕೊರೋನಾ ವಿರುದ್ಧದ ಹೋರಾಟದ ಸಲುವಾಗಿ ಪ್ರಧಾನಿ ನರೇಂದರ ಮೋದಿ ಕರೆ ಕೊಟ್ಟಿದ್ದ ದೀಪ ಬೆಳಗುವ ಕಾರ್ಯಕ್ರಮದಿಂದಾಗಿ 1200 ಮೆಗಾ ವ್ಯಾಟ್ ವಿದ್ಯುತ್ ಬಳಕೆ ಕಡಿಮೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ವಿರುದ್ಧದ ಹೋರಾಟದ ಸಲುವಾಗಿ ಪ್ರಧಾನಿ ನರೇಂದರ ಮೋದಿ ಕರೆ ಕೊಟ್ಟಿದ್ದ ದೀಪ ಬೆಳಗುವ ಕಾರ್ಯಕ್ರಮದಿಂದಾಗಿ  1200 ಮೆಗಾ ವ್ಯಾಟ್ ವಿದ್ಯುತ್ ಬಳಕೆ ಕಡಿಮೆಯಾಗಿದೆ.

ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಗಳಲ್ಲಿ ವಿದ್ಯುತ್ ಆಫ್ ಮಾಡಿದ್ದರಿಂದ ಇಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಕೆ ಕಡಿಮೆಯಾಗಿದೆ ಎಂದು ಇಂಧನ ಇಲಾಖೆ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದ್ದಾರೆ.

ನಾವು ಅಂದಾಜು ಮಾಡಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಕಡಿಮೆಯಾಗಿದೆ. ಸುಮಾರು 7000 ಮೆಗಾ ವ್ಯಾಟ್ ವಿದ್ಯುತ್ ಉಳಿತಾಯವಾಗುತ್ತದೆ ಎಂದು ಯೋಜಿಸಲಾಗಿತ್ತು ಆದರೆ ಕೇವಲ 700-800 ಮೆಗಾ ವ್ಯಾಟ್ ಮಾತ್ರ ಕಡಿಮೆಯಾಗಿರುವುದು ಇಂಧನ ಇಲಾಖೆಗೆ ಅಚ್ಚರಿ ಮೂಡಿಸಿದೆ.

ಸಾಮಾನ್ಯವಾಗಿ ಪ್ರತಿದಿನ ರಾಜ್ಯದ ಜನರ ವಿದ್ಯುತ್ ಬಳಕೆ,7257 ಮೆಗಾ ವ್ಯಾಟ್ ಇರುತ್ತಿತ್ತು, ಆದರೆ 9 ನಿಮಿಷ ಲೈಟ್ ಆಫ್ ಮಾಡಿದ್ದಕ್ಕೆ 6,121 ಮೆಗಾ ವ್ಯಾಟ್ ಗೆ ಇಳಿದಿದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com