ಉಡುಪಿ: ಕೋಳಿಅಂಕದಲ್ಲಿ ಕಾನೂನುಬಾಹಿರವಾಗಿ ಜೂಜು ಕಟ್ಟಿದ್ದ ಏಳು ಜನರ ಬಂಧನ

ಜಿಲ್ಲೆಯ ಕಾವಡಿ ಮಹಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ನಡೆದಿದ್ದ ಕೋಳಿಅಂಕದಲ್ಲಿ ಕಾನೂನುಬಾಹಿರವಾಗಿ ಜೂಜಾಡುತ್ತಿದ್ದ 7 ಜನರನ್ನು ಕೋಟಾ ಪೊಲೀಸರು ಬಂಧಿಸಿ ಅವರಿಂದ 1.72 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 
ಕೋಳಿ ಕಾಳಗ
ಕೋಳಿ ಕಾಳಗ

ಉಡುಪಿ: ಜಿಲ್ಲೆಯ ಕಾವಡಿ ಮಹಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ನಡೆದಿದ್ದ ಕೋಳಿಅಂಕದಲ್ಲಿ ಕಾನೂನುಬಾಹಿರವಾಗಿ ಜೂಜಾಡುತ್ತಿದ್ದ 7 ಜನರನ್ನು ಕೋಟಾ ಪೊಲೀಸರು ಬಂಧಿಸಿ ಅವರಿಂದ 1.72 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಮಧುಕರ್ (33), ಜಯರಾಮ್ ಶೆಟ್ಟಿ (49), ಪ್ರಶಾಂತ್ (42), ರಾಘವೇಂದ್ರ (39), ಲೋಕೇಶ್ ಬಾರ್ಕೂರ್ (35), ಸುಧಾಕರ್ (39) ಮತ್ತು ಸುಕೇತ್ (29) ಎಂದು ಗುರುತಿಸಲಾಗಿದೆ. 

ನಿರ್ದಿಷ್ಟ ಮಾಹಿತಿಯಂತೆ ಪೊಲೀಸರು ಆ ಪ್ರದೇಶದ ಮೇಲೆ ದಾಳಿ ನಡೆಸಿ ಸೋಮವಾರ ಸಂಜೆ ಈ ಏಳು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 6,880 ರೂ. ನಗದು, ಎರಡು ಹುಂಜಗಳು ಹಾಗೂ ಎಂಟು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳದಿಂದ ಇಬ್ಬರು ವ್ಯಕ್ತಿಗಳು ತಮ್ಮ ವಾಹನಗಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. 

ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆಯಡಿ ಮತ್ತು ಕೋಳಿಅಂಕ ವಿರುದ್ಧ ಸುಪ್ರೀಂಕೋರ್ಟ್‍ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೋಳಿಅಂಕ ಜೂಜಾಟವಾಗಿದ್ದು, ಇದರಲ್ಲಿ ಕೋಳಿಗಳ ಕಾಲುಗಳಿಗೆ ಹರಿತ ಚಾಕುಗಳನ್ನು ಕಟ್ಟಲಾಗುತ್ತದೆ. ಕೋಳಿಗಳು ಪರಸ್ಪರ ಹೊಡದಾಡಿಕೊಳ್ಳುವಾಗ ಚಾಕುವಿನಿಂದ ತೀವ್ರವಾಗಿ ಗಾಯಗೊಂಡ ಕೋಳಿ ಸೋಲನ್ನಪ್ಪುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com