ಬಿ ಎಸ್ ಯಡಿಯೂರಪ್ಪ ಮುಸ್ಲಿಂ ಪರ ಹೇಳಿಕೆ: ಟ್ವಿಟ್ಟರ್ ನಲ್ಲಿ ಪರ-ವಿರೋಧ ಜಟಾಪಟಿ

ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ನಾಡಿನ ದೊರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಪರ ವಿರೋಧ ಅಭಿಪ್ರಾಯಗಳು, ಟ್ವೀಟ್ ವಾರ್ ಗಳು, ಹ್ಯಾಶ್ ಟಾಗ್ ಕಂಡುಬಂದವು.
ಬಿ ಎಸ್ ಯಡಿಯೂರಪ್ಪ ಮುಸ್ಲಿಂ ಪರ ಹೇಳಿಕೆ: ಟ್ವಿಟ್ಟರ್ ನಲ್ಲಿ ಪರ-ವಿರೋಧ ಜಟಾಪಟಿ

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ನಾಡಿನ ದೊರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಪರ ವಿರೋಧ ಅಭಿಪ್ರಾಯಗಳು, ಟ್ವೀಟ್ ವಾರ್ ಗಳು, ಹ್ಯಾಶ್ ಟಾಗ್ ಕಂಡುಬಂದವು.

ಕೋವಿಡ್-19 ರೋಗಾಣು ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ವಿರುದ್ಧ ಅಪಪ್ರಚಾರ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ಮಾಡಿದ ನಂತರ ಹಲವರು ಸಿಎಂ ವಿರುದ್ಧ ಹರಿಹಾಯ್ದರು.

ಮುಸಲ್ಮಾನರನ್ನು ಓಲೈಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು #WeLostHopeBSY ಎಂದು ಹ್ಯಾಶ್ ಟಾಗ್ ಬಳಸಿ ಸೋಷಿಯಲ್ ಮೀಡಿಯಾದಲ್ಲಿ ಯಡಿಯೂರಪ್ಪ ವಿರುದ್ಧ ಸಿಟ್ಟು, ಆಕ್ರೋಶಗಳನ್ನು ಹೊರಹಾಕಿದರು. ಸಮಾಜದ ಇನ್ನೊಂದು ವರ್ಗದ ಮಂದಿ #WeStandWithBSY ಎಂದು ಹ್ಯಾಶ್ ಟಾಗ್ ಕೊಟ್ಟು ಬಿಎಸ್ ವೈಯನ್ನು ಬೆಂಬಲಿಸಿದ್ದು ಕಂಡುಬಂತು.

ಇಲ್ಲಿ ಆಸಕ್ತಿಕರ ವಿಷಯವೆಂದರೆ ಬಹುತೇಕ ಮಂದಿ ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದವರು ಬಿಜೆಪಿ, ಆರ್ ಎಸ್ಎಸ್ ಮತ್ತು ಪ್ರಧಾನಿ ಮೋದಿ ಬೆಂಬಲಿಗರು. ಇನ್ನೊಂದೆಡೆ ಬಿಜೆಪಿ, ಆರ್ ಎಸ್ಎಸ್, ಪ್ರಧಾನಿಯನ್ನು ವಿರೋಧಿಸುವವರು ಈ ವಿಷಯದಲ್ಲಿ ನಿನ್ನೆ ಯಡಿಯೂರಪ್ಪನವರಿಗೆ ಬೆಂಬಲ ಸೂಚಿಸಿದ್ದಾರೆ. #WeLostHopeBSYನಲ್ಲಿ ನಿನ್ನೆ ಮಧ್ಯರಾತ್ರಿ 1.20 ನಿಮಿಷಕ್ಕೆ ಆರಂಭವಾದ ಈ ಟ್ವೀಟ್ ಗೆ ಬಿಜೆಪಿ ಬೆಂಬಲಿಗರು ಬೆಂಬಲ ಸೂಚಿಸಿದ್ದು ಕರ್ನಾಟಕ ಮುಖ್ಯಮಂತ್ರಿಯನ್ನು ಬದಲಿಸುವಂತೆ ಹೇಳಿದ್ದಾರೆ. ಇಲ್ಲಿ ಬಹುತೇಕ ಟ್ವೀಟ್ ಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಉಲ್ಲೇಖಿಸಿ ಇದ್ದವು. ಬೆಳಗ್ಗೆ 10 ಗಂಟೆ ಹೊತ್ತಿಗೆ ಬಿಎಸ್ ವೈಯನ್ನು ಬೆಂಬಲಿಸಿ ಟ್ವೀಟ್ ಗಳು ಬರಲಾರಂಭಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com