ಅರೆ ವೈದ್ಯಕೀಯ ವಿದ್ಯಾರ್ಥಿಗಳಿಂದ ಕೋವಿಡ್ 19 ವಾರಿಯರ್ ಆಗಿ ಕಾರ್ಯ ನಿರ್ವಹಿಸಲು ಮತ್ತೊಮ್ಮೆ ನೋಂದಣಿಗೆ ಅವಕಾಶ

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ನಿಯಂತ್ರಣ ಕಾರ್ಯದಲ್ಲಿ ಆರೋಗ್ಯ ಯೋಧರಾಗಿ ಸೇವೆ ಸಲ್ಲಿಸಲು ಕರ್ನಾಟಕ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ವಿವಿಧ ಕೋರ್ಸ್‍ಗಳ ಸುಮಾರು 5  ಸಾವಿರಕ್ಕೂ ಅಧಿಕ ಅರೆ ವೈದ್ಯಕೀಯ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ನೋಂದಣಿ ಮಾಡಿಕೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ನಿಯಂತ್ರಣ ಕಾರ್ಯದಲ್ಲಿ ಆರೋಗ್ಯ ಯೋಧರಾಗಿ ಸೇವೆ ಸಲ್ಲಿಸಲು ಕರ್ನಾಟಕ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ವಿವಿಧ ಕೋರ್ಸ್‍ಗಳ ಸುಮಾರು 5  ಸಾವಿರಕ್ಕೂ ಅಧಿಕ ಅರೆ ವೈದ್ಯಕೀಯ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ನೋಂದಣಿ ಮಾಡಿಕೊಂಡಿದ್ದಾರೆ. 

ಇದೀಗ ಮತ್ತೊಂದು ಸುತ್ತಿನ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಸೋಂಕು ತಡೆಗಟ್ಟಲು ಎಲ್ಲಾ ಅರೆ ವೈದ್ಯಕೀಯ ವಿದ್ಯಾರ್ಥಿಗಳು ದೇಶ ಕಾಯುವ ಯೋಧರಂತೆ ಸಮರಕ್ಕೆ ಸಿದ್ದವಾಗಬೇಕು ಹಾಗೂ ಸದರಿ ಕೆಲಸದಲ್ಲಿ ತಮ್ಮ ಸೇವೆಗೆ ಸರ್ಕಾರವು ಯಾವುದೇ ಸಮಯದಲ್ಲಿ  ಬೇಕಾದರೂ ಕರೆ ನೀಡಬಹುದಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಆನ್‍ಲೈನ್ (pmb.campusuite.in/COVID19/ENROLL.aspx) ಮೂಲಕ ಏಪ್ರಿಲ್ 4 ರೊಳಗೆ ಸ್ವಯಂ ಪ್ರೇರಿತರಾಗಿ ನೋಂದಣಿ ಮಾಡಿಕೊಳ್ಳಲು ಪ್ರಾಧಿಕಾರದ ವತಿಯಿಂದ ಅವಕಾಶ  ನೀಡಲಾಗಿತ್ತು.

ಅದರಂತೆ ಇಲ್ಲಿಯ ತನಕ ರಾಜ್ಯದ ವಿವಿದ ಕಾಲೇಜುಗಳಿಂದ ಸುಮಾರು 5 ಸಾವಿರಕ್ಕೂ ಅಧಿಕ ಅರೆ ವೈದ್ಯಕೀಯ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ನೋಂದಣಿ ಮಾಡಿಕೊಂಡಿದ್ದು, ತಾವೆಲ್ಲರೂ ಕೊರೊನಾ ವೈರಾಣು ವಿರುದ್ಧ ಸೇವೆಗೆ ಸಿದ್ದರಿದ್ದವೆಂದು ತಿಳಿಸಿರುತ್ತಾರೆ. ಉಳಿದ  ವಿದ್ಯಾರ್ಥಿಗಳೂ ಕೂಡ ನೋಂದಾವಣೆ ಮಾಡಿಕೊಳ್ಳುವಂತೆ ಮತ್ತೊಮ್ಮೆ ಮನವಿ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com