ಕೋವಿಡ್-19: ಚಿಕ್ಕಮಗಳೂರಿನಲ್ಲಿ ಟ್ರಕ್‍ ನಲ್ಲಿದ್ದ 22 ಎಸ್ಟೇಟ್ ಕಾರ್ಮಿಕರ ರಕ್ಷಣೆ

ಹಿರೇಮಗಳೂರು ಚೆಕ್‌ಪೋಸ್ಟ್‌ನಲ್ಲಿ ಶನಿವಾರ ಟ್ರಕ್‌ನಿಂದ 6 ಮಕ್ಕಳು ಸೇರಿದಂತೆ 22 ಎಸ್ಟೇಟ್ ಕಾರ್ಮಿಕರನ್ನು ಪೊಲೀಸರು ರಕ್ಷಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಿಕ್ಕಮಗಳೂರು: ಹಿರೇಮಗಳೂರು ಚೆಕ್‌ಪೋಸ್ಟ್‌ನಲ್ಲಿ ಶನಿವಾರ ಟ್ರಕ್‌ನಿಂದ 6 ಮಕ್ಕಳು ಸೇರಿದಂತೆ 22 ಎಸ್ಟೇಟ್ ಕಾರ್ಮಿಕರನ್ನು ಪೊಲೀಸರು ರಕ್ಷಿಸಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿರುವ ಎಸ್ಟೇಟ್ ಮಾಲೀಕ ಕಾರ್ಮಿಕರನ್ನು ತಮ್ಮ ಸ್ವಂತ ಸ್ಥಳವಾದ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಗೆ ತೆರಳುವಂತೆ ಒತ್ತಾಯಿಸಿದ್ದಾನೆ. ಅದರಂತೆ ಎಲ್ಲರನ್ನೂ ಟ್ರಕ್‌ಗೆ ಹತ್ತಿಸಿ ಭತ್ತದ ಚೀಲಗಳ ಮಧ್ಯೆ ಕೂರಿಸಲಾಗಿತ್ತು ಎಂದು ಪೊಲೀಸರು  ತಿಳಿಸಿದ್ದಾರೆ.

ಪೊಲೀಸರು ವಾಹನವನ್ನು ತಪಾಸಣೆ ನಡೆಸುವಾಗ ಜನರು ಭತ್ತದ ಚೀಲಗಳ ನಡುವೆ ಕುಳಿತುಕೊಳ್ಳುವುದನ್ನು ಗಮನಿಸಿದ್ದಾರೆ. ನಂತರ ಇವರನ್ನು ಪೊಲೀಸರು ವಿಚಾರಣೆ ನಡೆಸಲಾಗಿ, ಎಸ್ಟೇಟ್‍ನಲ್ಲಿ ಯಾವುದೇ ಕೆಲಸವಿಲ್ಲದ ಕಾರಣ ತಾವೆಲ್ಲ ತಮ್ಮ ಸ್ವಂತ ಸ್ಥಳಕ್ಕೆ  ಪ್ರಯಾಣಿಸುತ್ತಿರುವುದಾಗಿ ಹೇಳಿದ್ದಾರೆ. ಪೊಲೀಸರು ಕಾರ್ಮಿಕರನ್ನು ರಕ್ಷಿಸಿ ಟ್ರಕ್ ಮಾಲೀಕ ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಡಳಿತ ಕಾರ್ಮಿಕರೆಲ್ಲರಿಗೂ ಆಶ್ರಯ ಮತ್ತು ಆಹಾರವನ್ನು ಒದಗಿಸಿದೆ. ಚಿಕ್ಕಮಗಳೂರು ಪೊಲೀಸರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಬೇಲೂರು ಪೊಲೀಸರು ಬೇಲೂರು ತಾಲ್ಲೂಕಿನ ಬಿಕ್ಕೋಡು ಬಳಿ ಇರುವ ಪುರ ಎಸ್ಟೇಟ್ ಮಾಲೀಕರ ವಿರುದ್ಧ ಪ್ರಕರಣ  ದಾಖಲಿಸಿದ್ದಾರೆ. ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿ ಮಾಲೀಕ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಿದ್ದ. ಜಿಲ್ಲೆಯಲ್ಲಿ ಇದುವರೆಗೆ 80 ಕಾರ್ಮಿಕರನ್ನು ಪೊಲೀಸರು ರಕ್ಷಿಸಿ ಜಿಲ್ಲೆಯಲ್ಲಿ ಆಶ್ರಯ ನೀಡಲಾಗಿದೆ ಎಂದು ಹಾಸನ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ ಗೌಡ  ತಿಳಿಸಿದ್ದಾರೆ.

‘ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರನ್ನು ಹೊರಗೆ ಬಿಡದೆ ನೋಡಿಕೊಳ್ಳುವುದು ಎಸ್ಟೇಟ್ ಮಾಲೀಕರ ಜವಾಬ್ದಾರಿಯಾಗಿದೆ. ಕಾರ್ಮಿಕರಿಗೆ ಆಹಾರ ಮತ್ತು ಆಶ್ರಯ ನೀಡುವಲ್ಲಿ ಅವರಿಗೆ ಸಮಸ್ಯೆಗಳಿದ್ದರೆ ಅವರು ಜಿಲ್ಲಾಡಳಿತಕ್ಕೆ ತಿಳಿಸಬೇಕು. ಸಹಾಯ ಒದಗಿಸಲು ಅನೇಕ ವ್ಯಕ್ತಿಗಳು ಮತ್ತು  ಎನ್‍ಜಿಒಗಳಿವೆ.’ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com