ಲಾಕ್'ಡೌನ್ ವಿಸ್ತರಣೆಯಿಂದ ಕೊರೋನಾ ಸಮಸ್ಯೆ ದೂರಾಗುವುದಿಲ್ಲ: ವೀರಪ್ಪ ಮೊಯ್ಲಿ

ಕೊರೋನಾ ವೈರಸ್ ಹತ್ತಿಕ್ಕಲು ಸರ್ಕಾರ ಮತ್ತೆ ಎರಡು ವಾರಗಳ ಕಾಲ ಲಾಕ್'ಡೌನ್ ಮುಂದುವರೆಸಲು ಚಿಂತನೆ ನಡೆಸುತ್ತಿದ್ದು, ಈ ನಡುವಲ್ಲೇ ಹೇಳಿಕೆ ನೀಡಿರುವ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿಯವರು, ಲಾಕ್'ಡೌನ್ ವಿಸ್ತರಣೆಯಿಂದ ಸಮಸ್ಯೆ ದೂರಾಗುವುದಿಲ್ಲ ಎಂದು ಹೇಳಿದ್ದಾರೆ. 
ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ

ಬೆಂಗಳೂರು: ಕೊರೋನಾ ವೈರಸ್ ಹತ್ತಿಕ್ಕಲು ಸರ್ಕಾರ ಮತ್ತೆ ಎರಡು ವಾರಗಳ ಕಾಲ ಲಾಕ್'ಡೌನ್ ಮುಂದುವರೆಸಲು ಚಿಂತನೆ ನಡೆಸುತ್ತಿದ್ದು, ಈ ನಡುವಲ್ಲೇ ಹೇಳಿಕೆ ನೀಡಿರುವ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿಯವರು, ಲಾಕ್'ಡೌನ್ ವಿಸ್ತರಣೆಯಿಂದ ಸಮಸ್ಯೆ ದೂರಾಗುವುದಿಲ್ಲ ಎಂದು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲಾಕ್'ಡೌನ್ ವಿಸ್ತರಣೆ ಕುರುಡು ನಿರ್ಧಾರವಾಗುತ್ತದೆ. ಇದರಿಂದ ಯಾವುದೇ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ.  ಲಾಕ್'ಡೌನ್ ಘೋಷಣೆ ಮಾಡುವುದಕ್ಕೂ ಮುನ್ನವೇ ಅಗತ್ಯವಿರು ಜನರಿಗೆ ಆರ್ಥಿಕ ಹಾಗೂ ವೈದ್ಯಕೀಯ ಸಹಾಯಗಳನ್ನು ಮಾಡಬೇಕಿತ್ತು. ಆದರೆ, ಅದನ್ನು ಮಾಡಿಲ್ಲ. ಬಡತನ ಎದುರಿಸುತ್ತಿರುವ ಜನರಿಗೆ ಸರ್ಕಾರದ ಇಂತಹ ನಿರ್ಧಾರಗಳು ಮತ್ತಷ್ಟು ಸಂಕಷ್ಟವನ್ನು ಎದುರು ಮಾಡಲಿದೆ. ಮತ್ತಷ್ಟು ಜನರು ಭಿಕ್ಷುಕರಾಗಲಿದ್ದಾರೆಂದು ಹೇಳಿದ್ದಾರೆ. 

ಈ ನಡುವೆ ಕಾಂಗ್ರೆಸ್ ಆಡಳಿತಾರೂಢ ರಾಜ್ಯಗಳು ವೈರಸ್ ವಿರುದ್ಧ ತೆಗೆದುಕೊಳ್ಳುವ ನಿರ್ಧಾರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಛತ್ತೀಸ್ಗಢ, ಪಂಜಾಬ್, ರಾಜಸ್ತಾನ ಹಾಗೂ ಪಾಂಡಿಚೆರಿ ರಾಜ್ಯಗಳಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಸೋಂಕಿತರ ಸಂಖ್ಯೆ ಕಡಿಮೆಯಿದೆ. ಈ ರಾಜ್ಯಗಳು ಶೀಘ್ರಗತಿಯಲ್ಲಿ ವೈರಸ್ ವಿರುದ್ಧ ಕ್ರಮ ಕೈಗೊಂಡಿದ್ದವು. ಯೂನಿವರ್ಸಲ್ ಟೆಸ್ಟಿಂಗ್ ಅತ್ಯಂತ ಮುಖ್ಯವಾಗಿದೆ. ಪರೀಕ್ಷೆಗಳು ಸೆಲೆಕ್ಟಿವ್ ಆಗಿರಬಾಹದು. ಪರೀಕ್ಷೆ ಮಾಡಿಸಿಕೊಳ್ಳಬೇಕೆನ್ನುವ ಜನರಿಗೆ ಪರೀಕ್ಷೆಗೊಳಪಡಲು ಅನುಮತಿ ನೀಡಬೇಕು. 

ಕಾಂಗ್ರೆಸ್ ಅಧಿಕಾರಿ ನಡೆಸುತ್ತಿರುವ ಪಾಂಡಿಚೆರಿಯಲ್ಲಿ ಕೇವಲ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಎಲ್ಲಿಯೂ ಸಾವು ಸಂಭವಿಸಿಲ್ಲ. ರಾಹುಲ್ ಗಾಂಧಿಯವರು ಮೊದಲೇ ಎಚ್ಚರಿಕೆ ನೀಡಿದ್ದು ಇದಕ್ಕೆ ಕಾರಣವಾಗಿದೆ. ಶೀಘ್ರಗತಿಯ ಪರೀಕ್ಷೆ ಹಾಗೂ ಶೀಘ್ರಗತಿಯ ಕ್ರಮಗಳು ಸೋಂಕಿತರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಅಭಿಪ್ರಾಯ ಪಡೆದುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com