ಎಲ್ಲೆಲ್ಲೂ ಕೊರೋನಾ ಸದ್ದು: ಲಾಕ್'ಡೌನ್'ನಿಂದಾಗಿ ಚಿಕಿತ್ಸೆ ದೊರಕದೆ ಪರದಾಡುತ್ತಿದ್ದಾರೆ ಇತರೆ ರೋಗಿಗಳು

ದೇಶದ ಮೂಲೆ ಮೂಲೆಯಲ್ಲೂ ಕೊರೋನಾ ವೈರಸ್ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶದ ಗಮನ ಇದೀಗ ಕೊರೋನಾ ಸೋಂಕು ಪೀಡಿತರ ಮೇಲಿದೆ. ಈ ನಡುವೆ ಲಾಕ್'ಡೌನ್ ಪರಿಣಾಮ ಚಿಕಿತ್ಸೆ ದೊರಕದೆ ಇತರೆ ರೋಗಿಗಳು ಪರದಾಡುವಂತಹ ಪರಿಸ್ಥಿತಿಗಳು ಎದುರಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶದ ಮೂಲೆ ಮೂಲೆಯಲ್ಲೂ ಕೊರೋನಾ ವೈರಸ್ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶದ ಗಮನ ಇದೀಗ ಕೊರೋನಾ ಸೋಂಕು ಪೀಡಿತರ ಮೇಲಿದೆ. ಈ ನಡುವೆ ಲಾಕ್'ಡೌನ್ ಪರಿಣಾಮ ಚಿಕಿತ್ಸೆ ದೊರಕದೆ ಇತರೆ ರೋಗಿಗಳು ಪರದಾಡುವಂತಹ ಪರಿಸ್ಥಿತಿಗಳು ಎದುರಾಗಿದೆ. 

ಈಗಾಗಲೇ ಇತರೆ ಆಸ್ಪತ್ರೆಗಳಲ್ಲಿ ಇತರೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಕೊರೋನಾಗೆ ಚಿಕಿತ್ಸೆ ನೀಡಲು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದೀಗ ಆಸ್ಪತ್ರೆಯಲ್ಲಿ ಇತರೆ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನೂ ಕೂಡ ಚಿಕಿತ್ಸೆ ನೀಡಿ, ಆಸ್ಪತ್ರೆಗಳಿಂದ ಮನೆಗೆ ಕಳುಹಿಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. 

ಈ ರೀತಿಯ ಬೆಳವಣಿಗೆಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಪ್ರತೀನಿತ್ಯ ದೇಶದಲ್ಲಿ 80,000 ತಾಯಿಯಂದಿರು ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ನಮ್ಮು ಮಧುಮೇಹ ರೋಗಕ್ಕೆ ರಾಜಧಾನಿ ಇದ್ದಂತೆ. ಸಾಕಷ್ಟು ಹೃದಯ ಸಂಬಂಧ ಕಾಯಿಲೆ ಇರುವ ಜನರಿದ್ದಾರೆ. ಸೂಕ್ತ ರೀತಿಯ ಕ್ರಮ ಕೈಗೊಳ್ಳದೇ ಹೋದರೆ, ಕೊರೋನಾ ರೀತಿಯಲ್ಲಿಯೇ ಮತ್ತಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ವೈರಸ್ ಇಲ್ಲದ ಜನರನ್ನು ನಾನು ರಕ್ಷಣೆ ಮಾಡುವ ಆಗತ್ಯವಿದೆ. ಇತರೆ ಸಮಸ್ಯೆಗಳಿರುವ ಜನರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸೆಂಟರ್ ಫಾರ್ ಕ್ರೊನಿಕಲ್ ಡಿಸೀಸ್ ಕಂಟ್ರೋಲ್ ನಿರ್ದೇಶ ಡಾ.ಪ್ರಭಾಕರ್ ಅವರು ಹೇಳಿದ್ದಾರೆ. 

ಮೂವರಲ್ಲಿ ಒಬ್ಬರಿಗೆ ಮಾತ್ರ ನಾವು ಶಸ್ತ್ರಚಿಕಿತ್ಸೆ ನಡೆಯುತ್ತಿದ್ದೇವೆ. ಸಾಕಷ್ಟು ಶಸ್ತ್ರಚಿಕಿತ್ಸೆಗಳನ್ನು ಮುಂದೂಡುತ್ತಿದ್ದೇವೆ. ಸಾರಿಗೆ ಸಮಸ್ಯೆಗಳಾಗಿರುವುದರಿಂದ ಜನರೂ ಕೂಡ ಆಸ್ಪತ್ರೆಗಳಿಗೆ ಬರುತ್ತಿಲ್ಲ ಎಂದು ಡಾ.ವಿರೆನ್ ಶೆಟ್ಟಿ ಹೇಳಿದ್ದಾರೆ. 

ಆಸ್ಪತ್ರೆಗಳಿಗೆ ಶೇ.90 ರಷ್ಟು ನಷ್ಟ ಎದುರಾಗಿದೆ.ಸ್ತನ ಹಾಗೂ ಥೈರಾಯ್ಡ್ ನಂತರ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲ. ಆದರೆ, ಕೀಮೋಥೆರಪಿ ಮತ್ತು ರೇಡಿಯೋಥೆರಪಿಯನ್ನು ಮುಂದುವರೆಸುತ್ತಿದ್ದೇವೆ. ಆಸ್ಪತ್ರೆಯಲ್ಲಿ 650 ಮಂದಿ ಒಳರೋಗಿಗಳಿದ್ದಾರೆ. ಆದರೆ, ಇದೀಗ ನಾವು ಈ ಸಂಖ್ಯೆಯನ್ನು 100ಕ್ಕೆ ಇಳಿಸಿದ್ದೇವೆ. ಆದಾಯ ಕಡಿಮೆಯಾಗಿರುವುದರಿಂದ ಇಳಿಕೆ ಮಾಡಲಾಗಿದೆ. ಈಗಾಗಲೇ ಆಸ್ಪತ್ರೆ ಸಿಬ್ಬಂದಿಗಳಿಗೆ ವೇತನ ಸಮಸ್ಯೆಗಳೂ ಕೂಡ ಎದುರಾಗಿದೆ ಎಂದಿದ್ದಾರೆ. 

ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಡಾ.ಮನೀಶ್ ರಾಯ್ ಮಾತನಾಡಿ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ನಾವೇ ಆಹಾರ ಒದಗಿಸುತ್ತಿದ್ದೇವೆ. ಟೆಲಿಕನ್ಸಲ್ಟೇಷನ್ ಗಳನ್ನೂ ತೆಗೆದುಕೊಳ್ಳುತ್ತಿದ್ದೇವೆ. ರೋಗಿಗಳ ಮನೆ ಬಾಗಿಲಿಗೇ ಔಷಧಿಗಳನ್ನು ತಲುಪಿಸುತ್ತಿದ್ದೇವೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com