ಲಾಕ್‌‌ಡೌನ್ ಎಫೆಕ್ಟ್: ಒಬ್ಬನೇ ಇರಲು ಬೋರ್, ಸೂಟ್‌ಕೇಸ್‌‌ನಲ್ಲಿ ಸ್ನೇಹಿತ ಕರೆತಂದಾತ ಮಂಗಳೂರಿನಲ್ಲಿ ಪೊಲೀಸರ ಅತಿಥಿ

ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಏಪ್ರಿಲ್ 30ರವರೆಗೂ ಲಾಕ್ ಡೌನ್ ಹೇರಿದೆ. ಇದರ ನಡುವೆಯೇ ಮಂಗಳೂರಿನಲ್ಲಿ ಓರ್ವ ಭೂಪ ಮನೆಯಲ್ಲಿ ತಾನೊಬ್ಬನೇ ಇರಲು ಬೋರ್ ಆಗುತ್ತಿದೆ ಎಂದು ಹೇಳಿ ಸೂಟ್ ಕೇಸ್ ನಲ್ಲಿ  ತನ್ನ ಸ್ನೇಹಿತನನ್ನು ಕರೆತಂದು ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

Published: 12th April 2020 04:36 PM  |   Last Updated: 12th April 2020 04:36 PM   |  A+A-


friend in suitcase

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಮಂಗಳೂರು: ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಏಪ್ರಿಲ್ 30ರವರೆಗೂ ಲಾಕ್ ಡೌನ್ ಹೇರಿದೆ. ಇದರ ನಡುವೆಯೇ ಮಂಗಳೂರಿನಲ್ಲಿ ಓರ್ವ ಭೂಪ ಮನೆಯಲ್ಲಿ ತಾನೊಬ್ಬನೇ ಇರಲು ಬೋರ್ ಆಗುತ್ತಿದೆ ಎಂದು ಹೇಳಿ ಸೂಟ್ ಕೇಸ್ ನಲ್ಲಿ  ತನ್ನ ಸ್ನೇಹಿತನನ್ನು ಕರೆತಂದು ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಹೌದು.. ಪೊಲೀಸ್ ಮೂಲಗಳ ಪ್ರಕಾರ, ಮಂಗಳೂರಿನ ಆರ್ಯಸಮಾಜ ರಸ್ತೆಯಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ವ್ಯಕ್ತಿಗಳನ್ನು ಹೊರತು ಪಡಿಸಿ ಉಳಿದ ಯಾವುದೇ ವ್ಯಕ್ತಿಗಳಿಗೆ ಪ್ರವೇಶವಿಲ್ಲ. ಆದರೆ ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ವಿದ್ಯಾರ್ಥಿಗೆ ರೂಂನಲ್ಲಿ ಒಬ್ಬನೇ ಇರಲು  ಬೋರ್‌ ಆಗಿದ್ದು ತನ್ನ ಗೆಳೆಯನನ್ನು ಸೂಟ್‌ಕೇಸ್‌ನಲ್ಲಿ ಇರಿಸಿ ಅಪಾರ್ಟ್‌ಮೆಂಟ್‌ ಒಳಗೆ ಕರೆದುಕೊಂಡು ಬರಲು ಯತ್ನಿಸಿದ್ದಾನೆ.

ತನ್ನ ಗೆಳೆಯನನ್ನು ದೊಡ್ಡ ಸೂಟ್‌ಕೇಸ್‌ನಲ್ಲಿ ಇರಿಸಿ ಅಪಾರ್ಟ್‌ಮೆಂಟ್‌ ಒಳಗೆ ಕೊಂಡೊಯ್ಯುತ್ತಿದ್ದಂತೆ ಸೂಟ್‌ಕೇಸ್‌ ಅಲುಗಾಡಿದ್ದು ಅನುಮಾನ ಬಂದು  ತಪಾಸಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸೂಟ್‌ಕೇಸ್‌ ಒಳಗೆ ವ್ಯಕ್ತಿ ಇರುವುದು ಬೆಳಕಿಗೆ ಬಂದಿದ್ದು ಇಬ್ಬರನ್ನು ಕದ್ರಿ ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಲಾಗುತ್ತಿದೆ.
 

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp