ಸೋಂಕಿತನ ಮಾಹಿತಿ ಪಡೆಲು ಹೋಗಿದ್ದ ಪೊಲೀಸ್ ಗೆ ಕೊರೋನಾ ಪಾಸಿಟಿವ್: ಹೋಮ್ ಕ್ವಾರಂಟೈನ್

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.  ಹುಬ್ಬಳ್ಳಿಯ ಮೊದಲ ಕೊರೋನಾ ಸೋಂಕಿತನ ಸಂಪರ್ಕದಲ್ಲಿದ್ದ ಪೊಲೀಸ್ ಗೆ ಸೋಂಕು ದೃಡ ಪಟ್ಟಿದೆ. ಹೀಗಾಗಿ ಅವರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.  ಹುಬ್ಬಳ್ಳಿಯ ಮೊದಲ ಕೊರೋನಾ ಸೋಂಕಿತನ ಸಂಪರ್ಕದಲ್ಲಿದ್ದ ಪೊಲೀಸ್ ಗೆ ಸೋಂಕು ದೃಡ ಪಟ್ಟಿದೆ. ಹೀಗಾಗಿ ಅವರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ.

ಸೋಂಕಿತ ಸಿಬ್ಬಂದಿ ಜೊತೆಗೆ ಸಭೆಯಲ್ಲಿ ಐವರು ಪೊಲೀಸರು ಪಾಲ್ಗೋಂಡಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಪೊಲೀಸ್ ಸಿಬ್ಬಂದಿ ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ.

ಹುಬ್ಬಳ್ಳಿಯ ಕಮರಿಪೇಟೆ ಪ್ರದೇಸಧ ಮುಲ್ಲಾ ಓಣಿ ನಿವಾಸಿ 194ನೇ ಸೋಂಕಿತ ವ್ಯಕ್ತಿ, ಈತ ತನ್ನ ಸಹೋದರನ ಜೊತೆ ಮಾರ್ಚ್ 20 ರಂದು ದೆಹಲಿ, ಆಗ್ರಾ, ಹೈದರಾಬಾದ್ ಮತ್ತು ಮುಂಬಯಿಗೆ ತೆರಳಿದ್ದ. ವಾಪಸ್ ಬಂದ ನಂತರ ಆತ ಎಲ್ಲೆಲ್ಲಿ ಭೇಟಿ ನೀಡಿದ್ದ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ತೆರಳಿದ್ದರು.  ಆತನ ಬಳಿ ಮಾಹಿತಿ ಸಂಗ್ರಹಿಸಲು ಐವರು ಪೊಲೀಸರು ಜೀಪಿನಲ್ಲಿ ತೆರಳಿ ವಾಪಸ್ ಬಂದಿದ್ದರು.

ಕೆಲವು ದಿನಗಳ ನಂತರ ಇವರಲ್ಲಿ  ಒಬ್ಬರಿಗೆ ಕೊರೋನಾ ಪಾಸಿಟ್ವ್ ಇದ್ದು ಅವರ ಜೊತೆ ತೆರಳಿದ್ದ ಎಎಸ್ ಐ, ಮುಖ್ಯಪೇದೆ,ಹಾಗೂ ಮೂವರು ಪೇದೆಗಳು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂವರು ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿದ್ದರೇ ಇನ್ನಿಬ್ಬರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ.  ಈ ಐವರು ಸಿಬ್ಬಂದಿ ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ಸಭೆಲ್ಲಿಯೂ ಪಾಲ್ಗೊಂಡಿದ್ದರು,  ಹೀಗಾಗಿ ಕಮರಿ ಪೇಟೆ ಪೊಲೀಸ್ ಠಾಣೆ ಸಿಬ್ಬಂದಿ ಮತ್ತಷ್ಟು ಆತಂಕದಲ್ಲಿದ್ದಾರೆ.

ಕೈಗವಸುಗಳನ್ನು ಧರಿಸದೇ ಯಾವುದೇ ದಾಖಲೆಗಳನ್ನು ಮುಟ್ಟಬಾರದು,  ಪೊಲೀಸರು ದಾಖಲೆಗಳ ಛಾಯಾಚಿತ್ರಗಳನ್ನು ತೆಗೆದುಕೊಂಡು ಹಿರಿಯ ಅಧಿಕಾರಿಗಳಿಗೆ ಕಳುಹಿಸಬೇಕು. ಇದಲ್ಲದೆ, ಸ್ಯಾನಿಟೈಸರ್, ಫೇಸ್ ಮಾಸ್ಕ್ ಮತ್ತು ಕೈ ತೊಳೆಯುವುದು ಎಲ್ಲಾ ಪೊಲೀಸರಿಗೆ ಕಡ್ಡಾಯ ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಆರ್ ದಿಲೀಪ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com