ಕಾರ್ಮಿಕರಿಗೆ, ಆಟೋ ಚಾಲಕರಿಗೆ ಆಟೋ ಅಣ್ಣನಿಂದ ಪ್ರತಿನಿತ್ಯ ಆಹಾರ, ಪಡಿತರ ವಿತರಣೆ

ಕೊರೋನಾ  ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ನಿಟ್ಟಿನಲ್ಲಿ ಆದರ್ಶ ಆಟೋ ಚಾಲಕರ ಯೂನಿಯನ್ ಮತ್ತು ನಾಗರಿಕ ಮುಖಂಡ ಸಿ ಸಂಪತ್ ಅಗತ್ಯವಿರವವರಿಗೆ ಆಹಾರ ಮತ್ತು ಪಡಿತರ ವಿತರಣೆ ಮಾಡುತ್ತಿದ್ದಾರೆ.
ಆಹಾರ ಪಟ್ಟಣ ಸಂಗ್ರಹಿಸುತ್ತಿರುವ ಸಂಪತ್
ಆಹಾರ ಪಟ್ಟಣ ಸಂಗ್ರಹಿಸುತ್ತಿರುವ ಸಂಪತ್

ಬೆಂಗಳೂರು: ಕೊರೋನಾ  ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ನಿಟ್ಟಿನಲ್ಲಿ ಆದರ್ಶ ಆಟೋ ಚಾಲಕರ ಯೂನಿಯನ್ ಮತ್ತು ನಾಗರಿಕ ಮುಖಂಡ ಸಿ ಸಂಪತ್ ಅಗತ್ಯವಿರವವರಿಗೆ ಆಹಾರ ಮತ್ತು ಪಡಿತರ ವಿತರಣೆ ಮಾಡುತ್ತಿದ್ದಾರೆ.

ದೈನಂದಿನ ಆಹಾರಕ್ಕಾಗಿ ಪರದಾಡುತ್ತಿರುವವರ ಜೊತೆಗೆ ವಲಸಿಗ  ಕಾರ್ಮಿಕರಿಗೂ ಸಹ ಸಹಾಯ ಮಾಡುತ್ತಿದ್ದಾರೆ.

ಯಶವಂತಪುರ ಎಪಿಎಂಸಿ ಯಾರ್ಡ್ ನಲ್ಲಿ ಪಡಿತರ ಆಹಾರ ಸಂಗ್ರಹಿಸಿ,ಕಳೆದ ನಾಲ್ಕು ದಿನಗಳಿಂದ ದಿನಕ್ಕೆ ಎರಡು ಬಾರಿ ಆಹಾರ ಸಂಗ್ರಹಿಸಿ ಅಗತ್ಯವಿರುವವರಿಗೆ ನೀಡುತ್ತಿದ್ದಾರೆ.

5 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ, 1ಕೆಜಿ ಸಕ್ಕರೆ,  ಅಡುಗೆ ಎಣ್ಣೆ, ಅರಿಶಿನ ಪುಡಿ, ಸಾಂಬಾರ್ ಪೌಡರ್, ಮತ್ತು 1ಪ್ಯಾಕೆಟ್ ಬಿಸ್ಕಿಟ್ ಪ್ಯಾಕ್ ಮಾಡಿ ಎಸ್ ಕೆ ಗಾರ್ಡನ್, ಪುಲಕೇಶಿ ನಗರದ ಮನ ಮನೆಗಳಿಗೆ ತೆರಳಿ ಹಂಚುತ್ತಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ಸಾಧ್ಯವಿಲ್ಲ, ಹೀಗಾಗಿ ನನ್ನ ಆಟೋದಲ್ಲಿ ಆಹಾರ ಪದಾರ್ಥ ತಂದು ಮನೆ ಮನೆಗಳಿಗೆ ತಂದು ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಸರಕುಗಳನ್ನು ಸ್ವೀಕರಿಸುವವರಿಗೆ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ನೀಡಲಾಗುತ್ತದೆ. ಸಂಪತ್ ರೈಸ್ ಬಾತ್, ಬ್ರಿಂಜಾಲ್ ರೈಸ್ ಪುಳಿಯೊಗರೆ, ವೆಜ್ ಬಿರಿಯಾನಿಯನ್ನು ಬಿಬಿಎಂಪಿಯಿಂದ ಸಂಗ್ರಹಿಸಿ ಹಸಿದವರಿಗೆ ನೀಡುತ್ತಿದ್ದಾರೆ.

ಆದರ್ಶ ಯೂನಿಯನ್ ನ 14 ಸಾವಿರ ಆಟೋ ಚಾಲಕರಿಗೆ ಆಹಾರ ಮತ್ತು ಪಡಿತರ ನೀಡಿದ್ದು, ಯಶವಂತಪುರದಲ್ಲಿನ ಕಲ್ಯಾಣಮಂಟಪದಲ್ಲಿ ಪ್ಯಾಕ್ ಮಾಡಿಟ್ಟು ಅಲ್ಲಿಂದ ಪೌರಕಾರ್ಮಿಕರು, ಶೂ ಹೊಲಿಯುವವರು,ಪೇಂಟರ್ಸ್, ಕಾರ್ಪೆಂಟರ್ಸ್, ಎಲೆಕ್ಟ್ರಿಶಿಯನ್ಸ್ ನೀಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com