ದಿನಕ್ಕೆರಡು ಗಂಟೆಗಳಾದರೂ ಅಂಗಡಿ ತೆರೆಯಲು ಅನುಮತಿ ನೀಡಿ: ಮದ್ಯದಂಗಡಿ ಮಾಲೀಕರಿಂದ ಸಿಎಂಗೆ ಮನವಿ

ದಿನಕ್ಕೆ 2 ಗಂಟೆಗಳಷ್ಟಾದರೂ ಅಂಗಡಿ ತೆರೆಯಲು ಅನುಮತಿ ನೀಡಿ ಎಂದು ಮದ್ಯದಂಗಡಿ ಮಾಲೀಕರ ಸಂಘ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದಿನಕ್ಕೆ 2 ಗಂಟೆಗಳಷ್ಟಾದರೂ ಅಂಗಡಿ ತೆರೆಯಲು ಅನುಮತಿ ನೀಡಿ ಎಂದು ಮದ್ಯದಂಗಡಿ ಮಾಲೀಕರ ಸಂಘ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದೆ.

ಈ ಕುರಿತು ಸಿಎಂಗೆ ಪತ್ರ ಬರೆದಿರುವ  ಮದ್ಯದಂಗಡಿ ಮಾಲೀಕರು, ಗ್ರಾಹಕರು ಮದ್ಯ ಖರೀದಿ ಮಾಡಲು ದಿನಕ್ಕೆ ಎರಡು ಗಂಟೆಗಳಷ್ಟಾದರೂ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಿ. ಕೆಲವರು ಮದ್ಯದ ಅವಲಂಬಿತರಾಗಿದ್ದು, ಈಗಾಗಲೇ ಕೆಲವರು ಮದ್ಯ ಸಿಗದ್ದಕ್ಕೆ ಆತ್ಮಹತ್ಯೆ ಹಾಗೂ ಆತ್ಮಹತ್ಯೆಗೆ ಯತ್ನ ಮಾಡುತ್ತಿದ್ದಾರೆ. ನಗರದಲ್ಲಿ 60 ಅಂಗಡಿಗಳಲ್ಲಿ ಮದ್ಯ ಕಳವಾಗಿರುವ ಪ್ರಕರಣ ದಾಖಲಾಗಿದೆ. ಈ ಪರಿಸ್ಥಿತಿ ನಿಯಂತ್ರಿಸಲು ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಮದ್ಯ ಮಾರಾಟದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತದೆ. ಈಗಾಗಲೇ ಅಂಗಡಿಯಲ್ಲಿರುವ ಸಾಕಷ್ಟು ಮದ್ಯಗಳ ಗಡುವಿನ ದಿನಾಂಕ ಮುಗಿಯುತ್ತಿವೆ.  ಅವುಗಳು ಮಾರಾಟವಾಗದೇ ಹೋದರೆ, ನಷ್ಟ ಎದುರಾಗಲಿದೆ. ಅಗತ್ಯ ವಸ್ತುಗಳನ್ನು ಮಾತ್ರ ಇಳಿಸಲು ಅನುಮತಿ ನೀಡಿರುವುದರಿಂದ 50ಕ್ಕೂ ಹೆಚ್ಚು ಲಾರಿಗಳು ಸಾಗಣೆಯಲ್ಲಿ ಸಿಲುಕಿಕೊಂಡಿವೆ. ನೌಕರರಿಕೆ ವೇತನ, ತೆರಿಗೆ, ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಇತರೆ ವೆಚ್ಚಗಳನ್ನು ಭರಿಸಲು ನಮಗೆ ಕಷ್ಟವಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ಈ ಕುರಿತು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಮಾತನಾಡಿ, ಭಾರತ ಸರ್ಕಾರದ ಮಾರ್ಗಸೂಚಿಯಂತೆ ನಾವು ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com