ಬಳ್ಳಾರಿ: ಇಬ್ಬರು ನಕಲಿ ವೈದ್ಯರ ಬಂಧನ

ಸಂಡೂರು ತಹಸೀಲ್ದಾರ್ ರಶ್ಮಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ಸಂಡೂರು ತಾಲೂಕಿನ ವಿವಿಧೆಡೆ ಮಂಗಳವಾರ ಕಾರ್ಯಾಚರಣೆ ನಡೆಸಿ ಮೂವರು ಜನ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಅವರು ನಡೆಸುತ್ತಿದ್ದ ಕ್ಲಿನಿಕ್ ಗಳನ್ನು ಜಪ್ತಿ ಮಾಡಿದ್ದಾರೆ.
ಬಳ್ಳಾರಿ: ಇಬ್ಬರು ನಕಲಿ ವೈದ್ಯರ ಬಂಧನ

ಬಳ್ಳಾರಿ: ಸಂಡೂರು ತಹಸೀಲ್ದಾರ್ ರಶ್ಮಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ಸಂಡೂರು ತಾಲೂಕಿನ ವಿವಿಧೆಡೆ ಮಂಗಳವಾರ ಕಾರ್ಯಾಚರಣೆ ನಡೆಸಿ ಮೂವರು ಜನ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಅವರು ನಡೆಸುತ್ತಿದ್ದ ಕ್ಲಿನಿಕ್ ಗಳನ್ನು ಜಪ್ತಿ ಮಾಡಿದ್ದಾರೆ.

ಕಾಳಿಂಗೇರಿಯಲ್ಲಿ ಅವಿಷೇಕ್ ಎನ್ನುವ ಆರ್.ಎಂ.ಪಿ ಡಾಕ್ಟರ್ ಪಶ್ಚಿಮ ಬಂಗಾಳದ ನಕಲಿ ಪ್ರಮಾಣಪತ್ರ ಮತ್ತು ನಕಲಿ ಐಡಿ ಕಾರ್ಡ್ ಇಟ್ಟುಕೊಂಡು ‌ಜನರಿಗೆ‌ ಚಿಕಿತ್ಸೆ ನೀಡುತ್ತಿದ್ದ. ಸ್ಟೀರಾಯ್ಡ್ ಬಳಸುತ್ತಿದ್ದ ಜತೆಗೆ ಓವರ್ ಡೋಸ್ ನೀಡುತ್ತಿರುವುದು ತನಿಖೆ ವೇಳೆ ಕಂಡುಬಂದಿದೆ ಎಂದು ತಹಸೀಲ್ದಾರ್ ರಶ್ಮಿ ತಿಳಿಸಿದರು.

ಚೋರನೂರು ಹೋಬಳಿ ವ್ಯಾಪ್ತಿಯ ಅಂಕಮ್ಮನಾಳದಲ್ಲಿ ಕ್ಲಿನಿಕ್ ತೆರೆದು ನಕಲಿ ಪ್ರಮಾಣಪತ್ರ ಮತ್ತು ನಕಲಿ ಐಡಿ ಇಟ್ಟುಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದ. ಬಸವರಾಜ್ ಮತ್ತು ಜಾಫರ್ ಅಲಿ ಎನ್ನುವವರಲ್ಲಿ ಕರ್ನಾಟಕ ಮೆಡಿಕಲ್ ಅಸೋಸಿಯೇಶನ್ ಸಂಬಂಧಿಸಿದ ಯಾವುದೇ ಪ್ರಮಾಣಪತ್ರ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಲಭ್ಯವಿರಲಿಲ್ಲ. ಇವರು ಕೂಡ ಸ್ಟೀರಾಯ್ಡ್ ಬಳಸುತ್ತಿರುವುದು ಮತ್ತು ಓವರ್ ಡೋಸ್ ನೀಡುತ್ತಿರುವುದು ಕಂಡುಬಂದಿದೆ. ಬಂಧಿತರನ್ನು ಕೂಡ್ಲಿಗಿ ಪೊಲೀಸ್ ಠಾಣೆಯ ಪೊಲೀಸರ ವಶಕ್ಕೆ ನೀಡುವಾಗ ಜಾಫರ್ ಅಲಿ ಎನ್ನುವವರು ತಪ್ಪಿಸಿಕೊಂಡಿದ್ದು,ಪೊಲೀಸರು ಬಂಧನಕ್ಕೆ ‌ಜಾಲ‌ ಬೀಸಿದ್ದಾರೆ. ಉಳಿದ ಇಬ್ಬರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com