ಕೆ.ಆರ್ ಪೇಟೆ: ಕಟಾವಾಗದೆ ಉಳಿದ ತರಕಾರಿ ಖರೀದಿಸಿ ಅಗತ್ಯವಿರುವವರಿಗೆ ಉಚಿತವಾಗಿ ನೀಡುತ್ತಿರುವ ಶಿಕ್ಷಕ

ಲಾಕ್ ಡೌನ್ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ತರಕಾರಿ ಬೆಳೆಗಾರರ ಕಣ್ಣು ಕೆಂಪಾಗಿಸುವಂತೆ ಮಾಡಿದೆ. ಉತ್ತಮ ಬೆಲೆ ಸಿಗದ ಕಾರಣ ರೈತರು ತಾವು ಬೆಳೆದ ತರಕಾರಿಗಳನ್ನು ಮಾರದಿರಲು ನಿರ್ಧರಿಸಿದ್ದಾರೆ.
ತರಕಾರಿ ಹಂಚುತ್ತಿರುವ ಶಿಕ್ಷಕ ರಂಗಸ್ವಾಮಿ
ತರಕಾರಿ ಹಂಚುತ್ತಿರುವ ಶಿಕ್ಷಕ ರಂಗಸ್ವಾಮಿ

ಮಂಡ್ಯ: ಲಾಕ್ ಡೌನ್ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ತರಕಾರಿ ಬೆಳೆಗಾರರ ಕಣ್ಣು ಕೆಂಪಾಗಿಸುವಂತೆ ಮಾಡಿದೆ. ಉತ್ತಮ ಬೆಲೆ ಸಿಗದ ಕಾರಣ ರೈತರು ತಾವು ಬೆಳೆದ ತರಕಾರಿಗಳನ್ನು ಮಾರದಿರಲು ನಿರ್ಧರಿಸಿದ್ದಾರೆ.

ಬೆಲೆ ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ಕೆಲವು ರೈತರು ತಾವು ಬೆಳೆದ ಬೆಳೆಗಳನ್ನು ಕಟಾವು ಮಾಡದೇ ತಮ್ಮ ಹೊಲ ಗದ್ದೆಗಳಲ್ಲಿ ಹಾಗೆಯೇ ಬಿಟ್ಟಿದ್ದಾರೆ ತೋಟಗಾರಿಕಾ ಸಚಿವ ನಾರಾಯಣಗೌಡ ಅವರು ಜಿಲ್ಲೆಯಲ್ಲಿಯೇ ಅಪಾರ ಪ್ರಮಾಣದಲ್ಲಿ ತರಕಾರಿಗಳು ಕಟಾವಾಗದೇ ಉಳಿದಿದೆ.

ಪ್ರಾಥಮಿಕ ಶಾಲಾ ಶಿಕ್ಷಕ ಎಸ್ ರಂಗಸ್ವಾಮಿ ಎಂಬುವರು ಈ ಅಸಹಾಯಕ ರೈತರ ನೆರವಿಗೆ ಧಾವಿಸಿದ್ದಾರೆ. ಕಳೆದ ಒಂದು ವಾರದಿಂದ ಎಸ್ ರಂಗಸ್ವಾಮಿ ಈ ರೈತರಿಗೆ ಕನಿಷ್ಟ ಬೆಲೆ ನೀಡಿ ಖರೀದಿಸಿ ರಿಮೋಟ್ ಪ್ರದೇಶಗಳಲ್ಲಿರುವ ಜನತೆಗೆ ಉಚಿತವಾಗಿ ನೀಡುತ್ತಿದ್ದಾರೆ.

ರಂಗಸ್ವಾಮಿ ತಮ್ಮ ಇಬ್ಬರು ಮಕ್ಕಳು ಹಾಗೂ ಆಟೋ ಚಾಲಕ ಅಭಿಷೇಕ್ ಕುಪ್ಪಳ್ಳಿ ಅವರ ಜೊತೆಗೂಡಿ ಚಿಕ್ಕೋನಹಳ್ಳಿಯ ಶಿವಣ್ಣ ಎಂಬುವರ ಹೊಲದಲ್ಲಿ ಬೆಳೆದಿದ್ದ ಮೂರು ಟನ್ ಕುಂಬಳಕಾಯಿಯನ್ನು  1300 ಮಂದಿಗೆ ನೀಡಿದ್ದಾರೆ.

“ನಾನು ನನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಳುಹಿಸುತ್ತೇನೆ ಮತ್ತು ಅಲ್ಲಿಂದ ವ್ಯಾಪಾರಿಗಳು ಅವುಗಳನ್ನು ಮೈಸೂರಿನಂತಹ ದೂರದ ಸ್ಥಳಗಳಿಗೆ ಸಾಗಿಸುತ್ತಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ  ನಾನು ಅಸಹಾಯಕನಾಗಿದ್ದೇನೆ, ರಂಗಸ್ವಾಮಿ ಅವರು ಬಂದು ನನ್ನನ್ನು ಕೇಳಿಕೊಂಡಾಗ ಕಟಾವು ಮಾಡದೇ ಹೊಲದಲ್ಲಿ ಸುಮ್ಮನೇ ಹಾಳಾಗುವ ಬದಲು  ಅಗತ್ಯವಿರುವವರಿಗೆ ನೀಡಲು ಅವರಿಗೆ ನೀಡಿದ್ದೇನೆ ಎಂಬ ರೈತ ಪ್ರಸನ್ನ ಕುಮಾರ್ ಹೇಳಿದ್ದಾರೆ.

ಕೊರೋನಾ ವಿರುದ್ಧ ಹೋರಾಟಕ್ಕೆ ರಂಸ್ವಾಮಿ ಅವರು ಶೇ.20 ರಷ್ಟು ವೇತನ ನೀಡಿದ್ದಾರೆ. ತಹಶೀಲ್ದಾರ್ ಶಿವಮೂರ್ತಿ ತಮ್ಮ ತರಕಾರಿ ವಾಹನ ಸುಲಭವಾಗಿ ಸಾಗಿಸಲು ಅನುವು ಮಾಡಿಕೊಟ್ಟಿದ್ದಾರೆ. ತಾವು ಕೊಟ್ಟ ಕುಂಬಳಕಾಯಿನ್ನು ಉಚಿತವಾಗಿ ಪಡೆಲು ನಿರಾಕರಿಸಿದ ಮಹಿಳೆ ತಮಗೆ ನಿಂಬೆ ಹಣ್ಣಿನ ಜ್ಯೂಸ್ ಮಾಡಿಕೊಟ್ಟರು, ನನ್ನ ಪತ್ನಿ ಕೂಡ ಶಿಕ್ಷಕಿ,  ನನ್ನ ಇಬ್ಬರು ಮಕ್ಕಳು ಕೂಡ ನನ್ನಈ ಕೆಲಸಕ್ಕೆ ಸಹಾಯ ಮಾಡುತ್ತಾರೆ ಎಂದು ರಂಗಸ್ವಾಮಿ ತಿಳಿಸಿದ್ದಾರೆ.

ಟಮೊಟೋ, ಸೋರೆಕಾಯಿ, ಎಲೆಕೋಸು ಸೇರಿದಂತೆ ಹಲವು ರೀತಿ ತರಕಾರಿಗಳನ್ನು ತಾಲೂಕಿನಾದ್ಯಂತ ಬೆಳೆಯುತ್ತಿದ್ದು , ಲಾಕ್ ಡೌನ್ ನಿಂದಾಗಿ ರೈತರು ಅಸಹಾಯಕರಾಗಿದ್ದು ಸಚಿವ ನಾರಾಯಣಗೌಡ ಸಹಾಯಕ್ಕೆ ಧಾವಿಸಬೇಕು ಎಂದು ರೈತರೊಬ್ಬರು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com