ಮುಸಲ್ಮಾನರ ವಿರುದ್ಧ ದ್ವೇಷ ಹೇಳಿಕೆ: ದುಬೈಯಲ್ಲಿ ಹಾವೇರಿ ಮೂಲದ ರಾಕೇಶ್ ಬಂಧನ, ಆತಂಕದಲ್ಲಿ ಕುಟುಂಬಸ್ಥರು

ದುಬೈಯಲ್ಲಿ ಬಂಧನಕ್ಕೊಳಗಾಗಿರುವ ಹಾವೇರಿ ಮೂಲದ ರಾಕೇಶ್ ಕಿತ್ತೂರುಮಠ ಅವರ ಕುಟುಂಬಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ. ಬಂಧನದ ಸುದ್ದಿ ಬಂದ ನಂತರ  ರಾಣೆಬೆನ್ನೂರಿನಲ್ಲಿರುವ ರಾಕೇಶ್ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಸಂಪರ್ಕವೇ ಸಿಕ್ಕಿಲ್ಲ.
ಹಾವೇರಿಯ ರಾಕೇಶ್
ಹಾವೇರಿಯ ರಾಕೇಶ್

ಹುಬ್ಬಳ್ಳಿ/ಹಾವೇರಿ: ದುಬೈಯಲ್ಲಿ ಬಂಧನಕ್ಕೊಳಗಾಗಿರುವ ಹಾವೇರಿ ಮೂಲದ ರಾಕೇಶ್ ಕಿತ್ತೂರುಮಠ ಅವರ ಕುಟುಂಬಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ. ಬಂಧನದ ಸುದ್ದಿ ಬಂದ ನಂತರ  ರಾಣೆಬೆನ್ನೂರಿನಲ್ಲಿರುವ ರಾಕೇಶ್ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಅವರ ಸಂಪರ್ಕವೇ ಸಿಕ್ಕಿಲ್ಲ.

ಕಳೆದ ಏಪ್ರಿಲ್ 10ರಂದು ರಾಕೇಶ್ ಮುಸ್ಲಿಂ ಸಮುದಾಯ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ದುಬೈಯಲ್ಲಿ ಕಂಪೆನಿ ಅವರನ್ನು ಕೆಲಸದಿಂದ ತೆಗೆದುಹಾಕಿತ್ತು. ಹಾವೇರಿಯಲ್ಲಿ ಐಟಿಐ ವಿದ್ಯಾಭ್ಯಾಸ ಮುಗಿಸಿ ರಾಕೇಶ್ ಬೆಂಗಳೂರಿನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡಿದ ನಂತರ ದುಬೈಗೆ ಹೋಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.

ರಾಕೇಶ್ ಕುಟುಂಬಸ್ಥರು ರಾಣೆಬೆನ್ನೂರಿನ ಕುನಬೇವು ಎಂಬಲ್ಲಿ ನೆಲೆಸಿದ್ದಾರೆ. ರಾಕೇಶ್ ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅವರ ಬಂಧನದ ಸುದ್ದಿ ಹೊರಬರುತ್ತಿದ್ದಂತೆ ಹೆಂಡತಿ-ಮಕ್ಕಳು ಸಂಬಂಧಿಕರ ಮನೆ ಸೇರಿದ್ದಾರೆ. ಉಳಿದ ಕುಟುಂಬ ಸದಸ್ಯರು ಮತ್ತೊಬ್ಬ ಸಂಬಂಧಿಕರ ಮನೆಗೆ ಹೋಗಿದ್ದಾರೆ.

ಕಂಪೆನಿಯಿಂದ ಕೆಲಸದಿಂದ ತೆಗೆದುಹಾಕಿದ ನಂತರ ರಾಕೇಶ್ ಸೋಷಿಯಲ್ ಮೀಡಿಯಾ ಮೂಲಕ ತನ್ನನ್ನು ಕಾಪಾಡುವಂತೆ ಭಾರತದಲ್ಲಿ ಹಲವು ರಾಜಕೀಯ ಮುಖಂಡರನ್ನು ಕೇಳಿಕೊಂಡಿದ್ದರು. ದುಬೈ ಪೊಲೀಸರು ನನ್ನನ್ನು ಬಂಧಿಸಬಹುದು, ನನ್ನನ್ನು ಕಾಪಾಡಿ, ನಾನು ನನ್ನ ಉಳಿದ ಜೀವನವನ್ನು ಕುಟುಂಬಸ್ಥರ ಜೊತೆ ಕಳೆಯಬೇಕು. ನನ್ನ ಕಡೆಯಿಂದ ತಪ್ಪು ಆಗಿದೆ. ಕ್ಷಮೆ ನೀಡಿ ನನ್ನನ್ನು ವಾಪಸ್ ಭಾರತಕ್ಕೆ ಕರೆಸಿಕೊಳ್ಳಿ ಎಂದು ರಾಕೇಶ್ ಬೇಡಿಕೊಂಡಿದ್ದು ವ್ಯಾಪಕ ಸುದ್ದಿಯಾಗಿತ್ತು.

ರಾಕೇಶ್ ಅವರನ್ನು ದುಬೈ ಪೊಲೀಸರು ಬಂಧಿಸಿದ್ದಾರೆಯೇ, ಇಲ್ಲವೇ ಎಂಬುದು ಇದುವರೆಗೆ ಸ್ಪಷ್ಟವಾಗಿ ತಿಳಿದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com