ಕಾರವಾರ: ಪತಂಜಲಿ ಆಸ್ಪತ್ರೆಯ ಇಬ್ಬರು ವೈದ್ಯರು ನಾಪತ್ತೆ

ಪತಂಜಲಿ ಆಸ್ಪತ್ರೆಯಲ್ಲಿ ಕೊರೊನಾ ಪೀಡಿತರ ಚಿಕಿತ್ಸೆಗೆ ನಿಯೋಜಿಸಿದ್ದ ಇಬ್ಬರು ವೈದ್ಯರು ಕೆಲಸಕ್ಕೆ ಹಾಜರಾಗದೆ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾರವಾರ : ಪತಂಜಲಿ ಆಸ್ಪತ್ರೆಯಲ್ಲಿ ಕೊರೊನಾ ಪೀಡಿತರ ಚಿಕಿತ್ಸೆಗೆ ನಿಯೋಜಿಸಿದ್ದ ಇಬ್ಬರು ವೈದ್ಯರು ಕೆಲಸಕ್ಕೆ ಹಾಜರಾಗದೆ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. 

ಭಟ್ಕಳದ  ಎಲ್ಲಾ ಸೋಂಕಿತರನ್ನು ಕಾರವಾರದ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಜಿಲ್ಲಾಆರೋಗ್ಯ ಇಲಾಖೆಯಿಂದ ಇಬ್ಬರು ಸ್ಪೆಷಲಿಸ್ಟ್‌ಗಳು , ಆರು ವೈದ್ಯರು, ಆರು ಶುಶ್ರೂಷಕಿಯರು ಮತ್ತು ಆರು ಸಹಾಯಕರನ್ನು ನೇಮಕ ಮಾಡಲಾಗಿದ್ದು ಇವರು ದಿನದ 24 ತಾಸು ಸರದಿಯಪ್ರಕಾರ ಕಾರ್ಯ ನಿರ್ವಹಿಸಬೇಕಿದೆ. 

ಇಡೀ ಚಿಕಿತ್ಸಾ ತಂಡಕ್ಕೆ 4 ಹಂತದಲ್ಲಿ ತರಬೇತಿ ನೀಡಲಾಗಿದೆ. ತರಬೇತಿಗೆ ಎಲ್ಲರೂ ಹಾಜರಾಗಿದ್ದಾರೆ. ಆದರೆ ಪತಂಜಲಿ ಆಸ್ಪತ್ರೆಗೆ ಕೊರೊನಾ ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ಆರಂಭವಾದಾಗಿನಿಂದ ತರಬೇತಿ ಪಡೆದವರ ಪೈಕಿ ಇಬ್ಬರು ವೈದ್ಯರು ಬಂದಿಲ್ಲ. ಅಲ್ಲದೇ ಮೊಬೈಲ್‌ ಕೂಡ ಸ್ವಿಚ್‌ ಆಪ್‌ ಮಾಡಿದ್ದು  ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಎಂ. ರೋಶನ್‌ ಹೇಳಿದ್ದಾರೆ. ಈ ಸಂಬಂಧ ಜಿಲ್ಲೆಯ ನೊಡಲ್‌ ಅಧಿಕಾರಿಯು ಆಗಿರುವ ಜಿಪಂ ಸಿಇಒ ಎಂ ರೋಶನ್‌ ಅವರು ವೈದ್ಯರಿಗೆ ಕಾರಣ ಕೇಳಿ ನೊಟೀಸ್‌ ಜಾರಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com