ಲಾಕ್ ಡೌನ್ ಸಮಯದಲ್ಲಿ ರೈತ ವಲಯವನ್ನು ಕಾಪಾಡಲು ಕ್ರಮ ಕೈಗೊಳ್ಳಿ: ತಜ್ಞರ ಅಭಿಮತ

ಕೊರೋನಾ ವೈರಸ್ ತಡೆಗೆ ಎರಡನೇ ಸುತ್ತಿನ ಲಾಕ್ ಡೌನ್ ಗೆ ಕರ್ನಾಟಕ ಸೇರಿದಂತೆ ಇಡೀ ದೇಶ ಸಜ್ಜಾಗುತ್ತಿದ್ದು ಈ ಹೊತ್ತಿನಲ್ಲಿ ರೈತ ವಲಯ ತೀವ್ರ ಸಂಕಷ್ಟದಲ್ಲಿದೆ. ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿದೆ.
ಲಾಕ್ ಡೌನ್ ಸಮಯದಲ್ಲಿ ರೈತ ವಲಯವನ್ನು ಕಾಪಾಡಲು ಕ್ರಮ ಕೈಗೊಳ್ಳಿ: ತಜ್ಞರ ಅಭಿಮತ

ಬೆಂಗಳೂರು:ಕೊರೋನಾ ವೈರಸ್ ತಡೆಗೆ ಎರಡನೇ ಸುತ್ತಿನ ಲಾಕ್ ಡೌನ್ ಗೆ ಕರ್ನಾಟಕ ಸೇರಿದಂತೆ ಇಡೀ ದೇಶ ಸಜ್ಜಾಗುತ್ತಿದ್ದು ಈ ಹೊತ್ತಿನಲ್ಲಿ ರೈತ ವಲಯ ತೀವ್ರ ಸಂಕಷ್ಟದಲ್ಲಿದೆ. ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿದೆ.

ರೈತರ ಉತ್ಪನ್ನಗಳಿಗೆ ಸಾಗಣೆ ಸೌಲಭ್ಯ ಮತ್ತು ರೈತರ ಕೃಷಿ ಚಟುವಟಿಕೆಗಳಿಗೆ ವಿನಾಯ್ತಿ ನೀಡಿದರಷ್ಟೇ ಸಾಲದು, ದೀರ್ಘಾವಧಿಯಲ್ಲಿ ರೈತರ ಸಹಾಯಕ್ಕೆ ಸರ್ಕಾರ ಬೇರೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ರಾಜ್ಯದಲ್ಲಿ ಇನ್ನು ಮೇ 3ರವರೆಗೆ ಲಾಕ್ ಡೌನ್ ಯಾವ ರೀತಿ ಜಾರಿಗೆ ಬರಬೇಕು ಎಂದು ಇಂದು ಬಿ ಎಸ್ ಯಡಿಯೂರಪ್ಪ ನೇತೃತ್ವದ ಸಂಪುಟ ರೂಪುರೇಷೆ ಮಾಡಲಿದೆ. ಲಾಕ್ ಡೌನ್ ನಿಂದ ರೈತರ ಚಟುವಟಿಕೆಗಳಿಗೆ ತೊಂದರೆಯಾಗಬಾರದು ಎಂದು ಸರ್ಕಾರ ಹಲವು ಕ್ರಮಕ್ಕೆ ಮುಂದಾಗಿದೆ. ರೈತ ವಲಯವನ್ನು ತಳಮಟ್ಟದಿಂದ ಉತ್ತೇಜಿಸುವ ಅಗತ್ಯವಿದೆ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ವಿನಾಯ್ತಿ ನೀಡುವುದು ಸಾಕಾಗುವುದಿಲ್ಲ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ ಟಿಎನ್ ಪ್ರಕಾಶ್ ಕಮ್ಮರಡಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com