ಲಾಕ್ ಡೌನ್: ರೈತರ ಸಂಕಷ್ಟಕ್ಕೆ ನೆರವಾದ ದಿನೇಶ್ ಗುಂಡೂರಾವ್, ರೈತರಿಂದ 100 ಕ್ವಿಂಟಾಲ್ ತರಕಾರಿ ಖರೀದಿ

ಕೊರೋನಾವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಹೇರಿರುವ ಲಾಕ್ ಡೌನ್ ನಿಂದಾಗಿ ರೈತಉ ಸಂಕಷ್ಟದಲ್ಲಿದ್ದಾರೆ. ಇದನ್ನು ಪರಿಗಣಿಸಿ ಕಾಂಗ್ರೆಸ್ ನಾಯಕ  ದಿನೇಶ್​​ ಗುಂಡೂರಾವ್​​ ರೈತರಂದ 100 ಕ್ವಿಂಟಾಲ್​​​ ತರಕಾರಿ ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಿದ್ದಾರೆ. ಕರ್ನಾಕಟ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​ ಅವರ ಈ ಕೆಲಸ ಅನೇಕರ ಮೆಚ್ಚುಗೆಗ
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ಕೊರೋನಾವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಹೇರಿರುವ ಲಾಕ್ ಡೌನ್ ನಿಂದಾಗಿ ರೈತಉ ಸಂಕಷ್ಟದಲ್ಲಿದ್ದಾರೆ. ಇದನ್ನು ಪರಿಗಣಿಸಿ ಕಾಂಗ್ರೆಸ್ ನಾಯಕ  ದಿನೇಶ್​​ ಗುಂಡೂರಾವ್​​ ರೈತರಂದ 100 ಕ್ವಿಂಟಾಲ್​​​ ತರಕಾರಿ ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಿದ್ದಾರೆ. ಕರ್ನಾಕಟ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​ ಅವರ ಈ ಕೆಲಸ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. 

ಬುಧವಾರ ತನ್ನ ಸ್ನೇಹಿತರೊಂದಿಗೆ ದೇವನಹಳ್ಳಿಯ ತಾಲೂಕಿನ ಹಳ್ಳಿತಯೊಂದಕ್ಕೆ ಭೇಟಿ ಕೊಟ್ಟ ದಿನೇಶ್ ಗುಂಡೂರಾವ್ ಇಲ್ಲಿನ ರೈತರ ತೋಟದಲ್ಲಿ ಕೆಲ ಸಮಯ ಸುತ್ತಾಡಿದ ಕಾಂಗ್ರೆಸ್ ನಾಯಕ ರೈತರಿಂದ ಮಾರು 100 ಕ್ವಿಂಟಾಲ್​​​ ತರಕಾರಿಯನ್ನು ಖರೀದಿದ್ದಾರೆ.

2.5 ಟನ್​​​ ತೊಂಡೆಕಾಯಿ,  2.5 ಟನ್​​​ ಟೊಮೋಟೋ, 2.2 ಟನ್​​ನಷ್ಟು ಈರುಳ್ಳಿ ಹಾಗೂ 1.2 ಟನ್​​, ಕ್ಯಾರೇಟ್​ 1.2 ಟನ್​​​, 25 ಕೆ.ಜಿ ಬದನೆಕಾಯಿ  ಮತ್ತು 250 ಕೆಜಿ ಸೋರೆಕಾಯಿಯನ್ನು ಖರೀದಿಸಿದ್ದಾರೆ.

ಈ ಸಂಬಂಧ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿಕೊಂಡಿದ್ದು ತಾನು ಖರೀದಿಸಿದ ಈ ತರಕಾರಿಗಳನ್ನು ಕ್ಷೇತ್ರದ ಬಡವರಿಗೆ ಉಚಿತವಾಗಿ ಹಂಚುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com