ಹಸಿದ ಹೊಟ್ಟೆಗೆ ಅನ್ನ ನೀಡಿ ಎನ್ನುತ್ತಿರುವ ಕಾರ್ಮಿಕರು: 8 ಸಾವಿರ ಕೋಟಿ ಹಣವಿದ್ದರೂ ಬಳಸದೆ ಕೈಕಟ್ಟಿ ಕುಳಿತ ಇಲಾಖೆ

ಕಾರ್ಮಿಕ ಇಲಾಖೆಯಲ್ಲಿ ಸುಮಾರು 8 ಸಾವಿರ ಕೋಟಿ ಹಣವಿದ್ದರೂ ಅದನ್ನು ಬಳಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಕೈಕಸಟ್ಟಿ ಕುಳಿತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಸುಮಾರು 8 ಸಾವಿರ ಕೋಟಿ ಹಣವಿದ್ದರೂ ಅದನ್ನು ಬಳಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಕೈಕಟ್ಟಿ ಕುಳಿತಿದೆ. ಹಸಿವಿನಿಂದ ಕಂಗೆಟ್ಟಿರುವ ಕಾರ್ಮಿಕರಿಗೆ ಈ ಹಣವನ್ನು ಬಳಸಿಕೊಳ್ಳಲು ಹಲವು ಕಾನೂನಾತ್ಮಕ ತೊಡಕುಗಳು ಅಡ್ಡಿಯಾಗಿವೆ.

ಲಾಕ್ ಡೌನ್ ಪರಿಸ್ಥಿತಿಯಲ್ಲಿ ಹಸಿದವರಿಗೆ ಈ ಹಣವನ್ನು ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಹಲವು ಮಂದಿ ಜ್ಞಾಪಿಸುತ್ತಿದ್ದರೂ ಏನು ಮಾಡಲಾಗದ ಸ್ಥಿತಿಯಲ್ಲಿದೆ. ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ಕೆಲಸಗಾರರು ಭವಿಷ್ಯದಲ್ಲಿ ಆಹಾರ ಸಮಸ್ಯೆ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆಯಿದೆ.

ಅನ್ನ ನೀಡಿ ಎಂದು ಹಸಿದ ಕಾರ್ಮಿಕರು ಕೂಗುತ್ತಿದ್ದರೂ ಅದನ್ನು ಬಳಸಲು ಸಾಧ್ಯವಾಗುತ್ತಿಲ್ಲ, ಇಂಥಹ ಕಠಿಣ ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ಅಸಾಹಯಕತೆ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಇಲಾಖೆಯು ವಿವಿಧ ಬ್ಯಾಂಕುಗಳಲ್ಲಿ ಅಪಾರ ಠೇವಣಿಯನ್ನು ಹೊಂದಿದೆ. ಸಾಮಾಜಿಕ ಕಾರ್ಯಕರ್ತರು ಮತ್ತು ಸಂಬಂಧಪಟ್ಟವರು ಈ 8,000 ಕೋಟಿ ರೂ.ಗಳನ್ನು ಕಾರ್ಮಿಕರ ಪರಿಹಾರಕ್ಕಾಗಿ ಬಳಸುವಂತೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ 2-3 ಕೋಟಿ ರೂ.ಕಾರ್ಮಿಕರಿದ್ದು  ದಿನದಿಂದ ದಿನಕ್ಕೆ,  ತಿಂಗಳಿಂದ ತಿಂಗಳಿಗೆ ಆಹಾರ ಸಮಸ್ಯೆ ಹೆಚ್ಚಾಗುತ್ತಿದೆ.  ಅವರಿಗೆ ಏನು ಮಾಜಬೇಕು ಏನು ಮಾಡಬಾರದು, ಯಾರನ್ನು ಕೇಳಬೇಕು ಎಂಬ ಅರಿವಿಲ್ಲ, ಸರ್ಕಾರ ನೀಡುತ್ತಿರುವ ಆಹಾರ ಈ ಕಾರ್ಮಿಕರಿಗೆ ಸಾಕಾಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ಕಾರ್ಮಿಕನಿಗೆ 5 ಸಾವಿರ ರು ನೀಡಬೇಕು ಎಂದು ಮಾಜಿ ಎಂಎಲ್ ಸಿ  ರಮೇಶ್ ಬಾಬು ಹೇಳಿದ್ದಾರೆ.

ಇಂಥಹ ಹತಾಶ ಸಮಯದಲ್ಲಿ  ಹಸಿದ ಕಾರ್ಮಿಕರಿಗೆ ಕಾನೂನು ನಿಯಮಗಳಿಂದಾಗಿ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ, ಆದರೆ ನಿಯಮಗಳನ್ನು ಜಾರಿಗೆ ತರುವುದು ಒಳ್ಳೆಯ ಉದ್ದೇಶಕ್ಕಾಗಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಕಾರ್ಮಿಕರಿಗೆ ಸರಿಯಾದ ಸಹಾಯ ನೀಡುವಂತೆ ಸಂಸತ್ತಿನಲ್ಲಿ ನಾನು ದನಿ ಎತ್ತುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಶಿವರಾಮ್ ಹೆಬ್ಬಾರ್ ನಿಯಮಗಳನ್ನು ಬಿಟ್ಟು ನಾವು ಈ ಹಣವನ್ನು ಬಳಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಕಟ್ಟಡ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ ಅಂತವರಿಗೆ ನಮ್ಮ ಸಹಾಯ ನೀಡುತ್ತೇವೆ, ಎರಡು ಕಂತಿನಲ್ಲಿ 1 ಸಾವಿರ ರೂ ಹಣವನ್ನು ಅವ ರಿಗೆ ನೀಡುತ್ತಿದ್ದೇವೆ, ಆದರೆ ಬೇರೆ ಕಾರ್ಮಿಕರಿಗೆ ಇದು ಅನ್ವಯಿಸುವುದಿಲ್ಲ ಎಂದು ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಕೇಂದ್ರ ನಿಯಂತ್ರಣ ಕೊಠಡಿಗೆ ತನ್ನ ಸಿಬ್ಬಂದಿಯನ್ನು ಸಂಪರ್ಕಿಸಲು ವೈರ್‌ಲೆಸ್ ಸೆಟ್‌ಗಳಿಗಾಗಿ ಕಾರ್ಮಿಕ ಇಲಾಖೆಯ ಸಲ್ಲಿಸಿದ್ದ ಅರ್ಜಿಯನ್ನು ಪೊಲೀಸರು ತಿರಸ್ಕರಿಸಿದ್ದಾರೆ. 

“ಪೊಲೀಸ್ ವೈರ್‌ಲೆಸ್ ಉಪಕರಣಗಳು ಮತ್ತು ನೆಟ್‌ವರ್ಕ್‌ಗಳನ್ನು ಬಳಸುವ ವಿನಂತಿಯು ಭಾರತೀಯ ಟೆಲಿಗ್ರಾಫ್ ಕಾಯ್ದೆಯನ್ನು ಉಲ್ಲಂಘಿಸುತ್ತದೆ,  ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com