ಬೆಂಗಳೂರು: ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪರಾಧಿಗೆ ಪೊಲೀಸರಿಂದ ಗುಂಡೇಟು
ನಗರದ ಸುಬ್ರಮಣ್ಯಪುರದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪರಾಧಿಯ ಮೇಲೆ ದಕ್ಷಿಣ ವಿಭಾಗದ ಪೊಲೀಸರು ಗುರುವಾರ ಮುಂಜಾನೆ ಗುಂಡು ಹಾರಿಸಿದ್ದಾರೆ.
Published: 16th April 2020 10:05 PM | Last Updated: 16th April 2020 10:05 PM | A+A A-

ಬೆಂಗಳೂರು: ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪರಾಧಿಗೆ ಪೊಲೀಸರಿಂದ ಗುಂಡೇಟು
ಬೆಂಗಳೂರು: ನಗರದ ಸುಬ್ರಮಣ್ಯಪುರದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪರಾಧಿಯ ಮೇಲೆ ದಕ್ಷಿಣ ವಿಭಾಗದ ಪೊಲೀಸರು ಗುರುವಾರ ಮುಂಜಾನೆ ಗುಂಡು ಹಾರಿಸಿದ್ದಾರೆ.
ಪೊಲೀಸರ ಗುಂಡೇಟಿನಿಂದ ಗಾಯಗೊಂಡವನನ್ನು ಹನುಮಂತ ನಗರ ನಿವಾಸಿ ಸಂಜಯ್ ಅಲಿಯಾಸ್ ಚಿಕಪ್ಪಿ (27) ಎಂದು ಗುರುತಿಸಲಾಗಿದೆ.
ರಾಜಿಯಾಗಲು ಎರಡು ಎದುರಾಳಿ ಗುಂಪುಗಳು ಭಾನುವಾರ ಸೇರಿದ್ದಾಗ ಮತ್ತೊಬ್ಬ ಕ್ರಿಮಿನಲ್ ಮುಕುಂದ್ ಮತ್ತು ಅವನ ಸ್ನೇಹಿತ ಮನೋಜ್ ನನ್ನು ಹತ್ಯೆ ಮಾಡಲಾಗಿತ್ತು.
ಕೊಲೆ ತನಿಖೆಗಾಗಿ ಡಿಸಿಪಿ ರೋಹಿಣಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿತ್ತು. ಬಂಧಿತರು ನೀಡಿದ ಸುಳಿವನ್ನು ಆಧರಿಸಿ ಕುಮಾರಸ್ವಾಮಿ ಲೇಔಟ್ ದೇಶರ ಕೆರೆ ಬಳಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಬಂಧಿಸಲು ಕೋಣನಕುಂಟೆ ಠಾಣೆಯ ಧರ್ಮೇಂದ್ರ ಅವರ ತಂಡ ಕಾರ್ಯಾಚರಣೆ ಕೈಗೊಂಡಿತ್ತು.
ತನ್ನನ್ನು ಬಂಧಿಸಲು ಬಂದ ಸುಬ್ರಹ್ಮಣ್ಯಪುರ ಪೆÇಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಮಧು ಅವರಿಗೆ ಚಿಕ್ಕಪ್ಪಿ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ.ಈ ಸಂದರ್ಭದಲ್ಲಿ ಇನ್ಸ್‍ಪೆಕ್ಟರ್ ಧರ್ಮೇಂದ್ರ ಅವರು ಶರಣಾಗುವಂತೆ ಸೂಚಿಸಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಆರೋಪಿ ಪರಾರಿಯಾಗಲು ಯತ್ನಿಸಿದಾಗ ಆತ್ಮ ರಕ್ಷಣೆಗಾಗಿ ಆತನ ಬಲಗಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.
ಗಾಯಗೊಂಡಿರುವ ಪಿಎಸ್‍ಐ ಮಧು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಕೊಲೆ ಆರೋಪಿ ಚಿಕ್ಕಪ್ಪಿಯನ್ನು ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.