'ಮಕ್ಕಳ ವಾಣಿ: ನಲಿಯೋಣ, ಕಲಿಯೋಣ' ಯುಟ್ಯೂಬ್ ಚಾನೆಲ್ ಗೆ ಸಿಎಂ ಚಾಲನೆ

ಬೇಸಿಗೆ ರಜೆ, ಲಾಕ್ ಡೌನ್ ಹಿನ್ನಲೆಯಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ಸಹಕಾರಿಯಾಗಲೆಂದೇ ಶಿಕ್ಷಣ ಇಲಾಖೆ ಪ್ರಪ್ರಥಮ ಪ್ರಯೋಗವಾಗಿ ಇಂದಿನಿಂದ ಆರಂಭಿಸಿರುವ ಮಕ್ಕಳ ಯುಟ್ಯೂಬ್ ಚಾನಲ್ ಗೆ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದರು. 
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಬೇಸಿಗೆ ರಜೆ, ಲಾಕ್ ಡೌನ್ ಹಿನ್ನಲೆಯಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ಸಹಕಾರಿಯಾಗಲೆಂದೇ ಶಿಕ್ಷಣ ಇಲಾಖೆ ಪ್ರಪ್ರಥಮ ಪ್ರಯೋಗವಾಗಿ ಇಂದಿನಿಂದ ಆರಂಭಿಸಿರುವ ಮಕ್ಕಳ ಯುಟ್ಯೂಬ್ ಚಾನಲ್ ಗೆ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದರು. 

ಪ್ರತಿ ದಿನ ಮುಂಜಾನೆ 10.30 ಗಂಟೆಗೆ ಯುಟ್ಯೂಬ್ ಚಾನೆಲ್ನಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ ಈ ಸಮಯದಲ್ಲಿ ಕಾರ್ಯಕ್ರಮಗಳ ವೀಕ್ಷಣೆ ಮಾಡಲು ಶಿಕ್ಷಕರು ಅಥವಾ ಕುಟುಂಬದ ಸ್ನೇಹಿತರ ಬಳಿ ಇಂಟರ್ ನೆಟ್ ಸಂಪರ್ಕವಿರುವ ಇರುವ ಸ್ಮಾರ್ಟ್ ಫೋನ್ಅನ್ನು ಮಕ್ಕಳಿಗೆ ನೀಡಲು ಪೋಷಕರಿಗೆ ಮನವಿ ಮಾಡಲಾಗುವುದು.

ಈ ಯುಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಲು ಉದ್ದೇಶಿಸಿರುವ ಸಾಮಗ್ರಿಗಳನ್ನು ಇತರೆ ಮಾಧ್ಯಮಗಳಾದ ರೇಡಿಯೋ/ಟಿವಿ/ಇಂಟರ್ ನೆಟ್ನಲ್ಲಿಯೂ ಪ್ರಸಾರ ಮಾಡಲುಸೂಕ್ತವಾಗಿರುವಂತೆ ರೂಪಿಸಲಾಗಿದೆ.

ರಜೆಯ ಕಾರಣ ಮನೆಯಲ್ಲಿರುವ ಮಕ್ಕಳಿಗೆ ಕತೆ, ಹಾಡು, ಚಿತ್ರ ಕಲೆ, ಸಂಗೀತ, ಕಿರು ನಾಟಕ, ಕ್ರಾಫ್ಟ್, ಒಗಟು, ಗಾದೆ, ಮ್ಯಾಜಿಕ್, ಪದಬಂಧ ಇತ್ಯಾದಿಗಳ ಮೂಲಕ ತಲುಪಿ, ಅವರನ್ನು ರಂಜಿಸಲು ಹಾಗೂ ಅವರನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿದೆ. ಈ ಮಕ್ಕಳ ಯುಟ್ಯೂಬ್ ಚಾನೆಲ್ ಗೆ ' ಮಕ್ಕಳ ವಾಣಿ: ನಲಿಯೋಣ, ಕಲಿಯೋಣ ' ಎಂದೂ ಹೆಸರಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com