ಚಿಕ್ಕೋಡಿ: ಗಾಳಿ, ಆಲಿಕಲ್ಲು ಮಿಶ್ರೀತ ಅಬ್ಬರದ ಮಳೆ, ವಿದ್ಯುತ್ ಕಂಬ, ಮರಗಳು ಧರೆಗೆ

ಚಿಕ್ಕೋಡಿ ಭಾಗದಲ್ಲಿ ಸುಮಾರು ೧ ಗಂಟೆಗೂ ಅಧಿಕ ಗಾಳಿ, ಆಲಿಕಲ್ಲಿ ಮಿಶ್ರಿತ ಮಳೆ ಅಬ್ಬರದಿಂದ ಇಂದು ಸಂಜೆ ಸುರಿದಿದೆ.  
ಚಿಕ್ಕೋಡಿ: ಗಾಳಿ, ಆಲಿಕಲ್ಲು ಮಿಶ್ರೀತ ಅಬ್ಬರದ ಮಳೆ, ವಿದ್ಯುತ್ ಕಂಬ, ಮರಗಳು ಧರೆ
ಚಿಕ್ಕೋಡಿ: ಗಾಳಿ, ಆಲಿಕಲ್ಲು ಮಿಶ್ರೀತ ಅಬ್ಬರದ ಮಳೆ, ವಿದ್ಯುತ್ ಕಂಬ, ಮರಗಳು ಧರೆ

ಚಿಕ್ಕೋಡಿ: ಚಿಕ್ಕೋಡಿ ಭಾಗದಲ್ಲಿ ಸುಮಾರು ೧ ಗಂಟೆಗೂ ಅಧಿಕ ಗಾಳಿ, ಆಲಿಕಲ್ಲಿ ಮಿಶ್ರಿತ ಮಳೆ ಅಬ್ಬರದಿಂದ ಇಂದು ಸಂಜೆ ಸುರಿದಿದೆ. 

ಚಿಕ್ಕೋಡಿ ಭಾಗ ಅಂದರೆ‌ ಚಿಕ್ಕೋಡಿ, ರಾಯಬಾಗ ಕಾಗವಾಡ ಹಾಗೂ ಅಥಣಿ ಭಾಗದಲ್ಲೂ ಮಳೆರಾಯನ ಅರ್ಭಟ ಹೆಚ್ಚಾಗಿತ್ತು..  ಮಂಗಳವಾರ ಸುಮಾರು ೧೫ ನಿಮಿಷಕ್ಕಿಂತ ಹೆಚ್ಚಿನ ಸಮಯ ಆಲಿಕಲ್ಲಿನ ಮಳೆ ಜೋರಾಗಿ ಸುರಿದಿದೆ. ಇಂದು  ಗಾಳಿ, ಆಲಿಕಲ್ಲು ಮಿಶ್ರಿತ ಮಳೆ ಸುಮಾರು ೧ ಗಂಟೆಗಿಂತ ಅಧಿಕವಾಗಿ ಬಿದ್ದಿರುವ ಹಿನ್ನೆಲೆ  ವಿದ್ಯುತ್ ಕಂಬಗಳು ಹಾಗೂ ಮರಗಳು ಭೂಮಿಗೆ ಉರುಳಿದೆ.

ನಿನ್ನೆ ಆಲಿಕಲ್ಲಿನ ಮಳೆ ಬಿದ್ದ ಹಿನ್ನೆಲೆ ಕಬ್ಬು, ಮುಸುಕಿನ ಜೋಳ, ಇನ್ನಿತರ ಬೆಳೆಗಳುಹಾಳಾಗಿದೆ. ಇಂದಿನ ಮಳೆಯಿಂದ ರೈತ ಮತ್ತೆ ಆತಂಕಕ್ಕೆ ಒಳಗಾಗಿದ್ದಾನೆ..ಮುಸುಕಿನ ಜೋಳದ ರಾಶಿಗಳು ನೆನೆದಿದೆ. ಆದರೆ ಈಗ ನೀರಿನಲ್ಲಿ ಹೋಮ‌ಮಾಡಿದಂತೆ ರೈತರ ಸ್ಥಿತಿಯಾಗಿದೆ.

ಕಳೆದ ಒಂದು ವಾರದಿಂದ ಚಿಕ್ಕೋಡಿ ರಾಯಬಾಗ, ಕಾಗವಾಡ,  ಭಾಗದಲ್ಲಿ ಬಿಸಿಲಿನ‌ ತಾಪಮಾಣ ಹೆಚ್ಚುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com