ಲಾಕ್ ಡೌನ್: ಬಿಬಿಎಂಪಿ ಆಯುಕ್ತರಿಂದ ಮಾಂಸ ಮಾರಾಟಕ್ಕೆ ದರ ನಿಗದಿ

ಲಾಕ್ ಡೌನ್ ಅವಧಿಯಲ್ಲಿ ಜನರು ಕುರಿ, ಮೇಕೆ, ಕೋಳಿ ಮಾಂಸಗಳಿಗೆ ಹೆಚ್ಚಿನ ದರ ವಿಧಿಸಿ ಮಾರಾಟ ಮಾಡುತ್ತಿರುವ ಆರೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಮಾಂಸಕ್ಕೆ ದರ ನಿಗದಿಪಡಿಸಿದೆ
ಲಾಕ್ ಡೌನ್: ಬಿಬಿಎಂಪಿ ಆಯುಕ್ತರಿಂದ ಮಾಂಸ ಮಾರಾಟಕ್ಕೆ ದರ ನಿಗದಿ
ಲಾಕ್ ಡೌನ್: ಬಿಬಿಎಂಪಿ ಆಯುಕ್ತರಿಂದ ಮಾಂಸ ಮಾರಾಟಕ್ಕೆ ದರ ನಿಗದಿ

ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲಿ ಜನರು ಕುರಿ, ಮೇಕೆ, ಕೋಳಿ ಮಾಂಸಗಳಿಗೆ ಹೆಚ್ಚಿನ ದರ ವಿಧಿಸಿ ಮಾರಾಟ ಮಾಡುತ್ತಿರುವ ಆರೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಮಾಂಸಕ್ಕೆ ದರ ನಿಗದಿಪಡಿಸಿದೆ

ಮಾರಾಟಗಾರರು ಏಕಾಏಕಿ ಹೆಚ್ಚಿಸುತ್ತಿರುವುದರಿಂದ ಗ್ರಾಹಕರಿಗೆ ಅನಗತ್ಯ ಆರ್ಥಿಕ ಹೊರೆ ಸೃಷ್ಟಿಯಾಗಿರುತ್ತದೆ. ಗ್ರಾಹಕ ರಕ್ಷಣಾ ಕಾಯ್ದೆಯ ಅನ್ವಯ ಇದನ್ನು ನ್ಯಾಯ ಸಮ್ಮತವಲ್ಲದ ವಹಿವಾಟು ಎಂದು ಪರಿಗಣಿಸಲಾಗಿರುತ್ತದೆ. ಗ್ರಾಹಕರ ಹಿತದೃಷ್ಟಿಯಿಂದ ಮತ್ತು ಮಾಂಸ/ಮೀನು ಮುಂತಾದವುಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಬರುವುದರಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಸೀಮಿತಕ್ಕೊಳಪಟ್ಟಂತೆ ಬಿಬಿಎಂಪಿ ನಿಗದಿಪಡಿಸಿದ ದರಗಳನ್ನು ಮೀರದಂತೆ ಮಾಂಸವನ್ನು ಮಾರಾಟ ಮಾಡಬಹುದು ಎಂದು ಆಯುಕ್ತರು ಆದೇಶದಲ್ಲಿ ಸೂಚಿಸಿದ್ದಾರೆ.

ಪಾಲಿಕೆ ಸೂಚಿಸಿರುವ ದರಗಳಿಗಿಂತ ಹೆಚ್ಚಿನ ದರದಲ್ಲಿ ಮಾಂಸ ಮಾರಾಟ ಮಾಡುವವರ ವಿರುದ್ಧ 1976ರ ಕರ್ನಾಟಕ ಮುನ್ಸಿಪಲ್ ಕಾಯ್ದೆ ಅಡಿಯಲ್ಲಿ ನಿಯಮಾನುಸಾರ ಕ್ರಮ ಜರುಗಿಸುವುದಾಗಿ ಆಯುಕ್ತರು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com