ಹಾಸನ: ಮದ್ಯ ಕಳ್ಳತನಕ್ಕೆ ಹೋಗಿ ಕುಡಿದು ನಿದ್ರೆಗೆ ಜಾರಿ ಪೊಲೀಸರ ಅತಿಥಿಯಾದ ಕುಡುಕ!
ಕುಡಿಯಲು ಮದ್ಯ ಸಿಗದೇ ಬೇಸತ್ತಿದ್ದ ಕಳ್ಳನೊಬ್ಬ ಕುಡಿಯಲು ಬಾರ್‌ಗೆ ನುಗ್ಗಿದ್ದಲ್ಲದೇ ಬಾರ್‌ನಲ್ಲಿಯೇ ಕಂಠಪೂರ್ತಿ ಕುಡಿದು ಅಲ್ಲೇ ನಿದ್ದೆಗೆ ಜಾರಿ, ಕೊನೆಗೆ ಬಾರ್‌ನಲ್ಲಿಯೇ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
Published: 16th April 2020 03:48 PM | Last Updated: 16th April 2020 03:48 PM | A+A A-

ಸಾಂದರ್ಭಿಕ ಚಿತ್ರ
ಹಾಸನ: ಕುಡಿಯಲು ಮದ್ಯ ಸಿಗದೇ ಬೇಸತ್ತಿದ್ದ ಕಳ್ಳನೊಬ್ಬ ಕುಡಿಯಲು ಬಾರ್‌ಗೆ ನುಗ್ಗಿದ್ದಲ್ಲದೇ ಬಾರ್‌ನಲ್ಲಿಯೇ ಕಂಠಪೂರ್ತಿ ಕುಡಿದು ಅಲ್ಲೇ ನಿದ್ದೆಗೆ ಜಾರಿ, ಕೊನೆಗೆ ಬಾರ್‌ನಲ್ಲಿಯೇ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಹಾಸನದ ವಲ್ಲಭಾಯಿ ರಸ್ತೆಯ ರೌಡಿ ಶೀಟರ್ ರೋಹಿತ್ ಅಲಿಯಾಸ್ ಕೋಕಿ ಬಂಧಿತ ಆರೋಪಿ.
ಕುಡುಕ ಕಳ್ಳ ಕೋಕಿ ಹಾಸನದ ಸಂತೆಪೇಟೆಯ ಪ್ರಿಯದರ್ಶಿನಿ ಬಾರ್ ನಲ್ಲಿ ಕುಡಿದ ಅಮಲಿನಲ್ಲಿ ನಿದ್ರೆಗೆ ಜಾರಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯನ್ನು ಪೆನ್ಷನ್ ಮೊಹಲ್ಲಾ ಪೊಲೀಸರು ಬಂಧಿಸಿದ್ದಾರೆ.
ಎರಡು ಬಾಕ್ಸ್ ಎಣ್ಣೆ ಕದ್ದೊಯ್ಯಲು ಯತ್ನಿಸಿದ್ದ ಕೋಕಿ ಬಾರ್ ನಲ್ಲಿ ಮದ್ಯ ಸಿಕ್ಕಿದ್ದರಿಂದ ಎರಡು ಮದ್ಯದ ಬಾಕ್ಸ್ ಹೊರಲಾರದೆ ಬಾರ್ ಒಳಗೆ ನಿದ್ರೆಗೆ ಜಾರಿದ್ದ ಎನ್ನಲಾಗಿದೆ.