ಬಳ್ಳಾರಿ: ಲಾಕ್ ಡೌನ್ ಮಜಾ, ನದಿಯಲ್ಲಿ ಮುಳುಗಿ ಮೂವರ ದುರ್ಮರಣ

ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆಯಲ್ಲಿ ಸರಣಿ ರಜೆ ಇದ್ದ ಕಾರಣ ಮನೆಯಲ್ಲಿದ್ದ ಮೂವರು ಈಜಿನ ಮಜ ನೋಡಲು ಹೋಗಿ ದುರ್ಣರಣಕ್ಕೀಡಾಗಿದ್ದಾರೆ.

Published: 17th April 2020 08:34 PM  |   Last Updated: 17th April 2020 08:53 PM   |  A+A-


ಬಳ್ಲಾರಿ: ಲಾಕ್ ಡೌನ್ ಮಜಾ, ನದಿಯಲ್ಲಿ ಮುಳುಗಿ ಮೂವರ ದುರ್ಮರಣ

Posted By : raghavendra
Source : UNI

ಹಡಗಲಿ: ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆಯಲ್ಲಿ ಸರಣಿ ರಜೆ ಇದ್ದ ಕಾರಣ ಮನೆಯಲ್ಲಿದ್ದ ಮೂವರು ಈಜಿನ ಮಜ ನೋಡಲು ಹೋಗಿ ದುರ್ಣರಣಕ್ಕೀಡಾಗಿದ್ದಾರೆ.

ತುಂಗಾಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐವರ ಪೈಕಿ ಮೂವರು ಕಾರ್ಮಿಕರು ಕೊಚ್ಚಿ ಹೋಗಿದ್ದಾರೆ. ಇಬ್ಬರು ಈಜಿ ದಡ ಸೇರಿದ್ದಾರೆ. ನೀರುಪಾಲಾದವರನ್ನು ಸೋವೇನಹಳ್ಳಿ ಗ್ರಾಮದ ನಿವಾಸಿ ಕೋಗಳಿ ಮಾರುತಿ (23), ಮಲ್ಲಿನಕೆರೆ ಸುರೇಶ (25) ಹಾಗೂ ಹಂಪಸಾಗರ ಗ್ರಾಮದ ಪಿ.ಫಕರುದ್ದೀನ್ (25) ಎಂದು ಗುರುತಿಸಲಾಗಿದೆ. ಇವರಲ್ಲಿ ಮಲ್ಲಿನಕೆರೆ ಸುರೇಶ ಜಿಂದಾಲ್ ಸಂಸ್ಥೆಯ ನೌಕರನಾಗಿದ್ದರೆ ಇನ್ನಿಬ್ಬರು ಕೂಲಿ ಕಾರ್ಮಿಕರಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಬಳಿ‌ ದುರ್ಘಟನೆ ವರದಿಯಾಗಿದೆ. ಮೃತದೇಹಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದ್ದು ಘಟನೆ ಸಂಬಂಧ  ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp