ಬಳ್ಳಾರಿಯಲ್ಲಿ ಕೊರೋನಾ ಅಟ್ಟಹಾಸ: ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ, ತೀವ್ರ ಕಟ್ಟೆಚ್ಚರ!

ಗಡಿ ನಾಡು ಬಳ್ಳಾರಿಯಲ್ಲಿ ಕೊರೋನಾ ವೈರಸ್ ಅಟ್ಟಹಾಸ ತೀವ್ರಗೊಂಡಿದ್ದು,  ಗಣಿನಾಡಿನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಳ್ಳಾರಿ: ಗಡಿ ನಾಡು ಬಳ್ಳಾರಿಯಲ್ಲಿ ಕೊರೋನಾ ವೈರಸ್ ಅಟ್ಟಹಾಸ ತೀವ್ರಗೊಂಡಿದ್ದು,  ಗಣಿನಾಡಿನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಬಳ್ಳಾರಿಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 6ರಲ್ಲೇ ನಿಯಂತ್ರಣದಲ್ಲಿತ್ತು. ಇಂದು ಒಂದೇ ಕುಟುಂಬದ ಏಳು ಜನರಲ್ಲಿ ಕೊರೋನಾ ಸೋಂಕು ಕಂಡು ಬಂದಿರುವುದು ತೀವ್ರ ಆತಂಕ ಮೂಡಿಸಿದೆ. ಹೀಗಾಗಿ ತೀವ್ರ ನಿಗಾ ವಹಿಸಲಾಗಿದೆ. ಹೊಸಪೇಟೆ ನಗರದ ಒಂದೇ ಕುಟುಂಬದ ಏಳು ಜನರಲ್ಲಿ ಈ ಸೋಂಕು ಕಂಡು ಬಂದಿರುವುದರಿಂದ ಈಗ ಹೊಸಪೇಟೆ ನಗರ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ.

ಗುರುವಾರ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಹೆಚ್ಚಾಗಿದೆ. ಒಂದೇ ದಿನ ದಾಖಲೆಯ 36 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 315ಕ್ಕೇರಿತ್ತು. 

ಈ ಹಿಂದೆ ಬುಧವಾರವಷ್ಟೇ 19 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಈ ಮಧ್ಯೆ ಮಾ.9ಕ್ಕೆ ರಾಜ್ಯದಲ್ಲಿ ಮೊದಲ ಪ್ರಕರಣ ದೃಢಪಟ್ಟ 25 ದಿನಗಳ ಬಳಿಕ 150ನೇ ಸೋಂಕು ಖಚಿತಗೊಂಡಿತ್ತು. ಇದೀಗ 10 ದಿನಗಳಲ್ಲಿ ಆ ಸಂಖ್ಯೆ ದ್ವಿಗುಣಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com