ರೆಡ್ ಜೋನ್ ಜಿಲ್ಲೆಗಳಿಗೆ 66 ಸಾವಿರ ಟೆಸ್ಟ್ ಕಿಟ್, ಕೊವಿಡ್-19 ಪರೀಕ್ಷೆಗೆ ರೂ. 2250: ರಾಜ್ಯ ಸರ್ಕಾರ

ರಾಜ್ಯ ಸರ್ಕಾರ ಕೊವಿಡ್-19 ಪರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸುವುದಕ್ಕಾಗಿ ರೆಡ್ ಜೋನ್ ಜಿಲ್ಲೆಗಳಿಗೆ 66 ಸಾವಿರ ಟೆಸ್ಟ್ ಕಿಟ್ ಹಾಗೂ ಇದುವರೆಗೂ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗದ ಗ್ರೀನ್ ಜೋನ್ ಜಿಲ್ಲೆಗಳಿಗೆ 34 ಸಾವಿರ ಟೆಸ್ಟ್ ಕಿಟ್ ಗಳನ್ನು ಹಂಚಿಕೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ಕೊವಿಡ್-19 ಪರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸುವುದಕ್ಕಾಗಿ ರೆಡ್ ಜೋನ್ ಜಿಲ್ಲೆಗಳಿಗೆ 66 ಸಾವಿರ ಟೆಸ್ಟ್ ಕಿಟ್ ಹಾಗೂ ಇದುವರೆಗೂ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗದ ಗ್ರೀನ್ ಜೋನ್ ಜಿಲ್ಲೆಗಳಿಗೆ 34 ಸಾವಿರ ಟೆಸ್ಟ್ ಕಿಟ್ ಗಳನ್ನು ಹಂಚಿಕೆ ಮಾಡಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಸಂಬಂಧ ಇಂದು ಅಧಿಸೂಚನೆ ಹೊರಡಿಸಿದ್ದು, ಒಟ್ಟು 30 ಜಿಲ್ಲೆಗಳಿಗಾಗಿ 1 ಲಕ್ಷ ಟೆಸ್ಟ್ ಕಿಟ್ ಗಳನ್ನು ಖರೀದಿಸಿದ್ದು, ರೆಡ್ ಜೋನ್ ಜಿಲ್ಲೆಗಳಿಗೆ 66 ಸಾವಿರ ಹಾಗೂ ಹಸಿರು ವಲಯದ ಜಿಲ್ಲೆಗಳಿಗೆ 34 ಸಾವಿರ ಟೆಸ್ಟ್ ಕಿಟ್ ಗಳನ್ನು ಹಂಚಿಕೆ ಮಾಡಿದೆ.

ಈ ಮಧ್ಯೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯು ರಾಜ್ಯದಲ್ಲಿ ಹೊಸದಾಗಿ 16 ಕೊವಿಡ್-19 ಪ್ರಯೋಗಾಲಯಗಳನ್ನು(11 ಸರ್ಕಾರಿ ಹಾಗೂ 5 ಖಾಸಗಿ ಪ್ರಯೋಗಲಾಯ) ಆರಂಭಿಸಲು ಅನುಮತಿ ನೀಡಿದೆ.

ಖಾಸಗಿ ಪ್ರಯೋಗಾಲಯಗಳಲ್ಲಿ ಕೊವಿಡ್-19 ಪರೀಕ್ಷೆಗೆ 2250 ರೂಪಾಯಿ ದರ ನಿಗದಿ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com