ಆಹಾರ ಧಾನ್ಯ
ಆಹಾರ ಧಾನ್ಯ

ಬಾಗಲಕೋಟೆ: ಗೋವಾದಲ್ಲಿನ ತವರಿನ ಜನತೆಗಾಗಿ ಮಿಡಿಯಿತು ಮನ

ಕೇಂದ್ರ ಸರ್ಕಾರ ಲಾಕ್‌ಡೌನ್ ಸೂತ್ರಕ್ಕೆ ಒಳಗಾಗಿ ಉದ್ಯೋಗ, ಆಹಾರವಿಲ್ಲದೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರವ್ಯಾಪ್ತಿಯ ಕೂಲಿ ಕಾರ್ಮಿಕರು ಗೋವೆಯಲ್ಲಿ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ.

ಬಾಗಲಕೋಟೆ: ಕೇಂದ್ರ ಸರ್ಕಾರ ಲಾಕ್‌ಡೌನ್ ಸೂತ್ರಕ್ಕೆ ಒಳಗಾಗಿ ಉದ್ಯೋಗ, ಆಹಾರವಿಲ್ಲದೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರವ್ಯಾಪ್ತಿಯ ಕೂಲಿ ಕಾರ್ಮಿಕರು ಗೋವೆಯಲ್ಲಿ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ.

ಮಾರಕ ಕೊರೋನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದಾಗ, ಮಂಗಳೂರು, ಕೇರಳ, ಮುಂಬಯಿ, ಪುಣೆ ಮತ್ತು ಗೋವಾಕ್ಕೆ ಗುಳೇ ಹೋಗಿದ್ದ ಜನರಲ್ಲಿ ಬಹುತೇಕರು ಹೇಗೋ ಬಂದು ಊರು ಸೇರಿಕೊಂಡಿದ್ದಾರೆ. ಕೆಲವಷ್ಟು ಜನ ಇಲ್ಲಿಗೆ ಬಂದು ಕ್ವಾರಂಟೈನ್ ಆಗಿದ್ದಾರೆ.

ಇಷ್ಟಾಗಿಯೂ ಗೋವೆಯಲ್ಲಿ ಇನ್ನೂ ೫೦೦ಕ್ಕೂ ಅಧಿಕ ಕುಟುಂಬಗಳು ಅಲ್ಲಿಯೇ ಉಳಿದಿಕೊಂಡಿವೆ. ಆ ಕುಟುಂಬಗಳೆಲ್ಲ ಉದ್ಯೋಗ, ಆಹಾರವಿಲ್ಲದೆ ತೊಂದರೆಯಲ್ಲಿ ಬದುಕುತ್ತಿವೆ. ಜೀವನ ಸಾಗಿಸುವುದೇ ಕಷ್ಟವಾಗಿದ್ದು, ಊರಿಗೆ ಬಾರದ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೆ, ಆಹಾರ ಸಮಸ್ಯೆ ಎದುರಿಸುತ್ತಿರುವವರಿಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು, ನಾನಾ ಸಂಘಸಂಸ್ಥೆಗಳು ಊಟ, ಆಹಾರ,ಧಾನ್ಯ, ಹಾಲು,ಹಣ್ಣು ಪೂರೈಕೆ ಮಾಡುತ್ತಿವೆ. ಆದರೆ ದೂರದ ಗೋವಾದಲ್ಲಿರುವ ನಮ್ಮವರನ್ನು ಕಾಳಜಿ ಮಾಡುವವರಾರು ಎನ್ನುವ ಪ್ರಶ್ನೆ ಎದುರಾಗುತ್ತಲೇ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರು ಗೋವೆಯಲ್ಲಿರುವ ೫೦೦ ಕುಟುಂಬಗಳನ್ನು ಆಹಾರ ಸಮಸ್ಯೆಯಿಂದ ಪಾರು ಮಾಡಲು ಇಲ್ಲಿಂದಲೇ ಆಹಾರ ಸಾಮಾಗ್ರಿಗಳ ಕಿಟ್ ಸಿದ್ದಪಡಿಸಿ ಗೋವೆಗೆ ಕಳುಹಿಸಿಕೊಟ್ಟಿದ್ದಾರೆ.

ಗೋವಾದಲ್ಲಿರುವ ಇಲ್ಲಿನ ೫೧೦ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಸಿದ್ದ ಪಡಿಸಿ, ಅವುಗಳನ್ನು ಲಾರಿ ಮೂಲಕ ಕಳುಹಿಸಲಾಗಿದ್ದು, ಅಲ್ಲಿರುವ ನಮ್ಮವರ ಕುಟುಂಬಗಳನ್ನು ಗುರುತಿಸಿ ಹಂಚಿಕೆ ಮಾಡಲು ಇಲ್ಲಿಂದಲೇ ಶಾಸಕರ ಬೆಂಬಲಿಗರ ಪಡೆ ಹೋಗಿದೆ.

ಗೋವೆಯಲ್ಲಿ ತೀವ್ರ ಸಂಕಷ್ಟದಲ್ಲಿರುವ ತವರಿನ ಮಕ್ಕಳಿಗಾಗಿ ಕಳುಹಿಸಿರುವ ಆಹಾರದ ಕಿಟ್‌ಗಳು ತಲುಪುತ್ತಿದ್ದಂತೆ ಅಲ್ಲಿನ ಮನಗಳು ಸದ್ಯಕ್ಕೆ ಆಹಾರ ಸಮಸ್ಯೆಯಿಂದ ಪಾರಾದಲ್ಲಿ ಅಷ್ಟರ ಮಟ್ಟಿಗೆ ಶಾಸಕರು ಹಾಗೂ ಅವರ ಬೆಂಬಲಿಗರು ಪಟ್ಟ ಪ್ರಯತ್ನ ಸಾರ್ಥಕವಾಗಲಿದೆ. ಕೆಲ ದಿನಗಳ ಮಟ್ಟಿಗಾದರೂ ಆ ಕುಟುಂಬಗಳ ಬದಕಿನ ಜಟಕಾ ಬಂಡು ಉರುಳಲಿದೆ.

-ವಿಠ್ಠಲ ಆರ್. ಬಲಕುಂದಿ

Related Stories

No stories found.

Advertisement

X
Kannada Prabha
www.kannadaprabha.com