ಕೋವಿಡ್-19: ಮದುವೆಯನ್ನೇ ಮುಂದೂಡಿದ ಮಳವಳ್ಳಿ ಡಿವೈಎಸ್ಪಿ ಪೃಥ್ವಿ! ಸೆಲ್ಯೂಟ್ ಹೊಡೆದ ಸುಮಲತಾ

ಕೊರೋನಾ ಮಾರಿಯ ತಡೆಗಾಗಿ ಮಳವಳ್ಳಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮದುವೆಯನ್ನೇ ಮುಂದೂಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಡಿವೈಎಸ್ಪಿ ಪೃಥ್ವಿ
ಡಿವೈಎಸ್ಪಿ ಪೃಥ್ವಿ

ಮಂಡ್ಯ:  ಜೆಡಿಎಸ್ ವರಿಷ್ಠ,ಹೆಚ್.ಡಿ.ದೇವೇಗೌಡ ವಂಶದ ಕುಡಿ,ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯ ಮದುವೆ ಕೊರೋನಾ ಮಹಾಮಾರಿಯ ಅಟ್ಟಹಾಸದ ನಡುವೆಯೂ ನಿಗದಿಯಂತೆಯೇ ನಿನ್ನೆ ನಡೆದಿದೆ,ಆದರೆ ಇದಕ್ಕೆ ತದ್ವಿರುದ್ದವೆಂಬಂತೆ ಕೊರೋನಾ ಮಾರಿಯ ತಡೆಗಾಗಿ ಮಳವಳ್ಳಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮದುವೆಯನ್ನೇ ಮುಂದೂಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಪೃಥ್ವಿ ಮೂಲತಃ ದಾವಣಗೆರೆಯ ಐಆರ್ ಎಸ್ ಡಿಸಿಯಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದ್ಯಾಮಪ್ಪ ಅವರೆ ತಮ್ಮ ವಿವಾಹವನ್ನು ಮುಂದೂಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ

ಹಿನ್ನೆಲೆ; ಎಂ.ಪೃಥ್ವಿ ಮತ್ತು ದ್ಯಾಮಪ್ಪ ಅವರ ವಿವಾಹ ಏಪ್ರಿಲ್.೪ ಮತ್ತು ೫ ರಂದು ಧಾರವಾಡದ ಡಿ.ಬಿ.ಪಾಟೀಲ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಬೇಕಿತ್ತು, ಏ.೧೦ ರಂದು ಮೈಸೂರಿನ ಪೋಲೀಸ್ ಭವನದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಿಕೊಳ್ಳಲಾಗಿತ್ತು

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ದ್ಯಾಮಪ್ಪ ಮತ್ತು ಪೃಥ್ವಿರವರು ಹಸೆಮಣೆ ಏರಿ ಇಂದಿಗೆ ೧೩ ದಿನ ಆಗಿ ಸಂತೋಷದಿಂದ  ತಮ್ಮ ಬದುಕಿನ ದಾರಿಯಲ್ಲಿ ಸಾಗುವ ಹೊತ್ತಿಗೆ ಕೊರೊನಾ ಎಂಬ ಭೂತ ದೇಶದೊಳಗೆ ಕಾಲಿಟ್ಟು ಈ ಜೋಡಿಗಳ ಜೀವನದಲ್ಲಿ ಅಡ್ಡಲಾಗಿ ನಿಂತಿದೆ.

ನಿಗದಿತ ದಿನಾಂಕದಂದೆ ಸರಳವಾಗಿ ಮದುವೆ ಮಾಡಿಕೊಳ್ಳಬಹುದಿತ್ತು ಆದರೆ ಧಾರವಾಡ ಮತ್ತು ಮಳವಳ್ಳಿ ಪಟ್ಟಣದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಮದುವೆ ದಿನಾಂಕವನ್ನೆ ಮುಂದೂಡಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತಾ ತಮ್ಮ ಸೇವಾ ನಿಷ್ಟೆಯನ್ನು ಈ ಜೋಡಿಗಳು ಮೆರೆದಿದ್ದಾರೆ

ಸಂಸದೆ ಸಲ್ಯೂಟ್:
ಸಂಸತ್ ಅಧಿವೇಶನ ಮುಗಿದ ನಂತರ ೧೪ ದಿನಗಳ ಮೊದಲ ಬಾರಿಗೆ ಸಂಸದೆ ಸುಮಲತಾ ಅಂಬರೀಶ್ ಮಂಡ್ಯಕ್ಕೆ ಭೇಟಿ ನೀಡಿ ಅಲ್ಲಿಂದ ಮಳವಳ್ಳಿಗೂ ಭೇಟಿ ನೀಡಿದ್ದರು ಈ ವೇಳೆಯಲ್ಲಿ ಡಿವೈಎಸ್ಪಿ ಎಂ.ಪೃಥ್ವಿ ತಮ್ಮ ಮದುವೆ ದಿನಾಂಕವನ್ನು ಮುಂದೂಡಿರುವ ಬಗ್ಗೆ ಹೇಗೋ ಸಂಸದರಿಗೆ ವಿಚಾರ ತಿಳಿದಿದೆ

ವಿಷಯ ತಿಳಿದ ಸಂಸದೆ ಸುಮಲತಾ ತಮ್ಮ ಟ್ವಿಟ್ಟರ್,ಫೇಸ್ ಬುಕ್ ಖಾತೆಯಲ್ಲಿ ಇಂಥಾ ಧೈರ್ಯವಂತ , ದಕ್ಷ ಪ್ರಾಮಾಣಿಕ,ಮಾದರಿ ಮಹಿಳಾ ಅಧಿಕಾರಿ ಮಂಡ್ಯ ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಡಿವೈಎಸ್ಪಿ ಎಂ.ಪೃಥ್ವಿ ರವರಿಗೆ ಸೆಲ್ಯೂಟ್ ಕೂಡ ಹೊಡೆದಿದ್ದಾರೆ
ವರದಿ: ನಾಗಯ್ಯ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com