ಮೈಸೂರು: ಕೋವಿಡ್-19 ಭಯದಿಂದ ರಸ್ತೆ ಮೇಲೆ ಬಿದ್ದ ನೋಟಿಗೆ ಬೆಂಕಿ ಹಚ್ಚಿ ಸುಟ್ಟ ಜನರು!

ಕೊರೋನಾ ಹಾಟ್ ಸ್ಪಾಟ್ ಗಳಲ್ಲಿ ಒಂದಾದ ಮೈಸೂರಿನಲ್ಲಿ ರಸ್ತೆ ಮೇಲೆ ಬಿದ್ದಿರುವ ನೋಟುಗಳಲ್ಲಿ ಬೆಂಕಿ ಹಚ್ಚಿ ಸುಡಲಾಗಿದೆ. ನಜರಾಬಾದಿನಲ್ಲಿ ಈ ಘಟನೆ ನಡೆದಿದೆ.
ಕೆ.ಆರ್. ಸರ್ಕಲ್ ನಲ್ಲಿ ಚಿಂದಿ ಹಾಯುವ ವ್ಯಕ್ತಿಯೊಬ್ಬ ನಡೆದು ಹೋಗುತ್ತಿರುವ ಚಿತ್ರ
ಕೆ.ಆರ್. ಸರ್ಕಲ್ ನಲ್ಲಿ ಚಿಂದಿ ಹಾಯುವ ವ್ಯಕ್ತಿಯೊಬ್ಬ ನಡೆದು ಹೋಗುತ್ತಿರುವ ಚಿತ್ರ

ಮೈಸೂರು: ಕೊರೋನಾ ಹಾಟ್ ಸ್ಪಾಟ್ ಗಳಲ್ಲಿ ಒಂದಾದ ಮೈಸೂರಿನಲ್ಲಿ ರಸ್ತೆ ಮೇಲೆ ಬಿದ್ದಿರುವ ನೋಟುಗಳಲ್ಲಿ ಬೆಂಕಿ ಹಚ್ಚಿ ಸುಡಲಾಗಿದೆ. ನಜರಾಬಾದಿನಲ್ಲಿ ಈ ಘಟನೆ ನಡೆದಿದೆ.

ರಸ್ತೆ ಮೇಲೆ ಬಿದ್ದಿದ್ದ 100 ರೂ. ನೋಡಿದ ಜನರು, ಈ ನೋಟಿಗೂ ಮಾರಕ ಕೊರೋನಾವೈರಸ್ ಸೋಂಕು ತಗುಲಿರಬಹುದೆಂದು ಭಯಭೀತಿಯಿಂದ ನೋಟಿನ ಮೇಲೆ ಸ್ಯಾಟಿಟೈಸರ್ ಸಿಂಪಡಿಸಿ ನಂತರ ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಮೆಡಿಕಲ್ ಸ್ಟೋರ್ ಮುಂಭಾಗ ರಸ್ತೆ ಮೇಲೆ ಬಿದಿದ್ದ 100 ರೂ. ನೋಟನ್ನು ನೋಡಿದ ವ್ಯಕ್ತಿಗಳಿಬ್ಬರು,  ಸೋಂಕಿತ ವ್ಯಕ್ತಿಯೊಬ್ಬರಿಗೆ ಈ ನೋಟು ಸೇರಿದ್ದು, ಇತರರಿಗೆ ಸೋಂಕನ್ನು ಹರಡುವ ಉದ್ದೇಶದಿಂದ ಈ ರೀತಿಯ ಮಾಡಿರಬಹುದೆಂದು ಅವರು  ಭಯಭೀತಿಗೊಂಡಿದ್ದಾಗಿ ಪ್ರತ್ಯೇಕ್ಷದರ್ಶಿಗಳು ಹೇಳುತ್ತಾರೆ. 

ದಿನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಿದ್ಧಿ ವಿನಾಯಕ ಮೆಡಿಕಲ್ ಸ್ಟೋರ್  ಮಾಲೀಕ ಮಂಜುನಾಥ್, ಮೆಡಿಕಲ್ ಸ್ಟೋರ್ ಮುಂಭಾಗ ಸ್ಥಳೀಯರು ಸೇರಿರುವುದನ್ನು ನೋಡಿದೆ.ಹತ್ತಿರ ಹೋಗಿ ನೋಡಿದಾಗ, ನೋಟಿನ ಮೇಲೆ ಸ್ಯಾನಿಟೈಸರ್ ಸಿಂಪಡಿಸಿ ನಂತರ ಸುದ್ದಿ ಪತ್ರಿಕೆಗಳ ಮೂಲಕ ಸುಡಲಾಯಿತು ಎಂದು ತಿಳಿಸಿದರು. 

ಇತ್ತೀಚಿಗೆ ಹೆಬ್ಬಾಳದಲ್ಲಿಯೂ ಇದೇ ರೀತಿಯ ಘಟನೆ ವರದಿಯಾಗಿತ್ತು.ರಸ್ತೆ ಮೇಲೆ ಬಿದ್ದಿರುವ ನೋಟಿನ ಹತ್ತಿರ ಹೋಗಲು ಜನರು ಭಯಭೀತಿಗೊಳ್ಳುತ್ತಿದ್ದಾರೆ. 

ಬ್ಯಾಂಕ್ ನೋಟುಗಳು ಅಥವಾ ನಾಣ್ಯಗಳ ಮೂಲಕ ಕೋವಿಡ್-19 ಕೇಸುಗಳು ವರದಿಯಾಗಿಲ್ಲ ಎಂದು ಸ್ಟಿಟ್ಜರ್ ಲ್ಯಾಂಡಿನ ಅಂತಾರಾಷ್ಟ್ರೀಯ ಇತ್ಯಾರ್ಥ ಬ್ಯಾಂಕು ಇತ್ತೀಚಿಗೆ ವಿಶ್ವದ ಎಲ್ಲಾ ಕೇಂದ್ರಿಯ ಬ್ಯಾಂಕುಗಳಿಗೆ ಸಲಹೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com