ಗಂಗಾವತಿ: ಕಣ್ಣ ಮುಂದೆ ನೋಟುಗಳಿದ್ದರೂ ಮುಟ್ಟಲು ಜನ ಹಿಂದೇಟು; ಇದು ಕೊರೊನಾ ಕಲಿಸಿದ ಪಾಠ!

ಈ ಮೊದಲು ರಸ್ತೆಯಲ್ಲಿ ಯಾರದ್ದೊ ನೋಟು ಬಿದ್ದಿದ್ದರೆ ಆಚೀಚೆ ನೋಡಿ ಯಾರ ಗಮನಕ್ಕೂ ಬಂದಿಲ್ಲ ಎಂಬುವುದನ್ನು ಖಾತ್ರಿ ಪಡಿಸಿಕೊಂಡು ಲಬಕ್ ಅಂತಾ ಜನ ಜೇಬಿಗೆ ಹಾಕುತ್ತಿದ್ದರು. ಆದರೆ ಇದೀಗ ರಸ್ತೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತು ಕಂಡರೂ ಅದು ನಮ್ಮದಲ್ಲ ಎಂಬಂತೆ ಜನ ಸತ್ಯ, ಪ್ರಾಮಾಣಿಕತೆಯಿಂದ ವರ್ತಿಸುತ್ತಿದ್ದಾರೆ.
ಗಂಗಾವತಿ: ಕಣ್ಣ ಮುಂದೆ ನೋಟುಗಳಿದ್ದರೂ ಮುಟ್ಟಲು ಜನ ಹಿಂದೇಟು; ಇದು ಕೊರೊನಾ ಕಲಿಸಿದ ಪಾಠ!
ಗಂಗಾವತಿ: ಕಣ್ಣ ಮುಂದೆ ನೋಟುಗಳಿದ್ದರೂ ಮುಟ್ಟಲು ಜನ ಹಿಂದೇಟು; ಇದು ಕೊರೊನಾ ಕಲಿಸಿದ ಪಾಠ!

ಗಂಗಾವತಿ: ಈ ಮೊದಲು ರಸ್ತೆಯಲ್ಲಿ ಯಾರದ್ದೊ ನೋಟು ಬಿದ್ದಿದ್ದರೆ ಆಚೀಚೆ ನೋಡಿ ಯಾರ ಗಮನಕ್ಕೂ ಬಂದಿಲ್ಲ ಎಂಬುವುದನ್ನು ಖಾತ್ರಿ ಪಡಿಸಿಕೊಂಡು ಲಬಕ್ ಅಂತಾ ಜನ ಜೇಬಿಗೆ ಹಾಕುತ್ತಿದ್ದರು. ಆದರೆ ಇದೀಗ ರಸ್ತೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತು ಕಂಡರೂ ಅದು ನಮ್ಮದಲ್ಲ ಎಂಬಂತೆ ಜನ ಸತ್ಯ, ಪ್ರಾಮಾಣಿಕತೆಯಿಂದ ವರ್ತಿಸುತ್ತಿದ್ದಾರೆ.

ಇದಕ್ಕೆ ಕಾರಣ, ಕೊರೊನಾ ಎಂಬ ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿ ಕಲಿಸಿದ ಪಾಠ. ಯಾರೋ ಅಪರಿಚಿತರು ಹಣ ಬಿಸಾಡಿ ಹೋಗಿದ್ದರು. ಆದರೆ ಅದನ್ನು ನೋಡಿದ ಯಾರೊಬ್ಬರು ತೆಗೆದುಕೊಳ್ಳುವ ಸಹಾಸ ಮಾಡಲಿಲ್ಲ. ತೆಗೆದುಕೊಳ್ಳುವುದು ಒಂದು ಕಡೆ ಇರಲಿ, ನೋಟುಗಳನ್ನು ನೋಡಿದ ಜನ ಒಂದು ಕ್ಷಣ ನಡುಗಿ ಹೋದ ಘಟನೆ ನಗರದ ಹೇರೂರು ಓಣಿಯಲ್ಲಿ ನಡೆದಿದೆ. ನಗರದ ಹೇರೂರು ಓಣಿಯಲ್ಲಿ ಅಪರಿಚಿತ ವ್ಯಕ್ತಿಗಳು ಹತ್ತು ರೂಪಾಯಿ ಮುಖ ಬೆಲೆಯ ಒಂದಿಷ್ಟು ನೋಟುಗಳನ್ನು ಎಸೆದು ಹೋಗಿರುವ ಘಟನೆ ನಡೆದಿದೆ. ಘಟನೆಯಿಂದಾಗಿ ಇಡೀ ಒಣಿಯ ಜನ ಕೆಲಕಾಲ ಆತಂಕ್ಕೀಡಾದ ಘಟನೆ ನಡೆಯಿತು. ಬಸಣ್ಣ ವೃತ್ತದ ಸಮೀಪ ಇರುವ ಮುಖ್ಯ ರಸ್ತೆಯಿಂದ ರಾಯರ ಮಠ ಹಾಗೂ ಅಗಸರ ಓಣಿಗೆ ಸಂಪರ್ಕ ಕಲ್ಪಿಸುವ ಹೇರೂರು ಓಣಿಯಲ್ಲಿ ಈ ಘಟನೆ ನಡೆದಿದೆ. ಕನ್ನಡಪರ ಸಂಘಟನೆಯ ಮುಖಂಡ ಚಂದ್ರಶೇಖರ ಶೆಟ್ಟಿ ಎಂಬುವವರ ಮನೆಯ ಮುಂದೆ ನೋಟುಗಳನ್ನು ಎಸೆಯಲಾಗಿತ್ತು. ಕೊರೊನಾದ ವೈರಸ್ ಸೋಂಕಿತರು ಮುಟ್ಟುವ ಪ್ರತಿ ವಸ್ತುವಿನ ಮೇಲೂ ವೈರಾಣುಗಳು ಇರುತ್ತವೆ ಎಂಬ ಭೀತಿಯಿಂದಾಗಿ ಯಾರೊಬ್ಬರು ನೋಟನ್ನು ಮುಟ್ಟಲು ಮುಂದಾಗಲಿಲ್ಲ. 

ಕೊನೆಗೆ ನಗರಠಾಣೆಯ ಅಪರಾಧ ವಿಭಾಗ ಪಿಎಸ್ಐ ಶಹನಾಜ್ ಬೇಗಂ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಆರಂಭದಲ್ಲಿ ಅವರೂ ನೋಟನ್ನು ಮುಟ್ಟಲು ಹಿಂದೇಟು ಹಾಕಿದರು. ಬಳಿಕ ಮೇಲಧಿಕಾರಿಗಳ ಗಮನಕ್ಕೆ ತಂದು ನೋಟನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಿದರು.

ವರದಿ: ಶ್ರೀನಿವಾಸ್ ಎಂ.ಜೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com