ಕ್ವಾರಂಟೈನ್ ನಲ್ಲಿ ಲೋಪದೋಷದ ಕಾರಣ ನಂಜನಗೂಡಿನಲ್ಲಿ ಹೆಚ್ಚಾಯ್ತಾ ಸೋಂಕಿತರ ಸಂಖ್ಯೆ?

ಮೈಸೂರಿನಲ್ಲಿ ಇಂದು ಮತ್ತೆ 12 ಮಂದಿಗೆ ಕೊರೋನಾ ಪಾಸಿಟಿವ್ ಧೃಢವಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.
ಮೈಸೂರಿನ ಕೆ ಆರ್ ಸರ್ಕಲ್
ಮೈಸೂರಿನ ಕೆ ಆರ್ ಸರ್ಕಲ್

ಮೈಸೂರು: ಮೈಸೂರಿನಲ್ಲಿ ಇಂದು ಮತ್ತೆ 12 ಮಂದಿಗೆ ಕೊರೋನಾ ಪಾಸಿಟಿವ್ ಧೃಢವಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.

ನಂಜನಗೂಡು ಔಷಧ ಕಂಪನಿ ಸೋಂಕಿತರನ್ನು ಕ್ವಾರಂಟೈನ್ ನಲ್ಲಿ ಇಟ್ಟಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಿದ್ದರೇ ಅಧಿಕಾರಿಗಳ ಬೇಜಾವಾಬ್ದಾರಿ ಕ್ವಾರಂಟೈನ್ ನಿಂದಾಗಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ.

ನಂಜನಗೂಡಿನ ಫಾರ್ಮಾ ಕಂಪನಿ ಸಿಬ್ಬಂದಿಗೆ ಹೇಗೆ ಸೋಂಕು ತಗುಲಿತು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಕಂಪನಿ ಉದ್ಯೋಗಿಗಳ ಅಸಮರ್ಪಕ ಕ್ವಾರಂಟೈನ್ ನಿಯಮದಿಂದಾಗಿ ಸೋಂಕು ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ.

ಸೋಂಕಿತ ಸಿಬ್ಬಂದಿಗಗೆ ಒಂದೇ ಕೊಠಡಿ ಮತ್ತು ವಾಶ್ ರೂಂ ನೀಡಿರುವುದು ಉಲ್ಬಣವಾಗಲು ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ನಮ್ಮನ್ನು ಒಂದು ಸಂಸ್ಥೆಗೆ ಕರೆದೊಯ್ಯಲಾಯಿತು, ಅಲ್ಲಿ ನಮ್ಮದೇ ಕಂಪನಿಯ ಮತ್ತೊಬ್ಬ ಉದ್ಯೋಗಿ ಜೊತೆ ನಾನು ರೂಂ ಶೇರ್ ಮಾಡಿಕೊಂಡಿದ್ದೆ.ಕೆಲವು ದಿನಗಳ ಕಾಲ ನಾವು ಒಂದೇ ಶೌಚಾಲಯವನ್ನು ಬಳಸುತ್ತಿದ್ದೆವು, ಆತನಿಗೆ ಕೊರೋನಾ ಪಾಸಿಟಿವ್ ಬಂದಿದ್ದು ನೋಡಿ ನನಗೆ ಶಾಕ್ ಆಯ್ತು, ನನ್ನ ಕಂಪನಿಯ ಮೊದಲ ಪೇಶೆಂಟ್ ನಿಂದ ಸೋಂಕು ತಗುಲದಿದ್ದರೂ ನನ್ನ ಜೊತೆಗಿದ್ದವನಿಂದ  ಸೋಂಕು ತಗುಲಬಹುದು ಎಂದು ನಾನು ಭಯ ಪಟ್ಟಿದ್ದೆ ಎಂದು ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಪ್ರತ್ಯೇಕ ಕೋಣೆಯಲ್ಲಿರಿಸಲಾಗಿದೆ. ಆದರೆ ಕ್ವಾರಂಟೈನ್ ನಲ್ಲಿ ಸ್ಥಳದಕಲ್ಲಿ ಸುತ್ತಮುತ್ತಲಿನ ನಿವಾಸಿಗಳು ವಿರೋಧ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಜಾಗದ ಕೊರತೆಯಿಂದ ಹಲವು ಮಂದಿಯನ್ನು ಒಟ್ಟಿಗೆ ಇರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com