ಕಣ್ಣಿಗೆ ಕಾಣದಿರುವ ಶತ್ರು ಕೊರೋನಾ ಇಡೀ ಪ್ರಪಂಚವನ್ನೇ ನಡುಗಿಸಿದೆ: ಆಯನೂರು ಮಂಜುನಾಥ್

ಕಣ್ಣಿಗೆ ಕಾಣದಿರುವ ಶತ್ರು ಕೋವಿಡ್-19 ಇಡೀ ಪ್ರಪಂಚವನ್ನೇ ನಡುಗಿಸಿಬಿಟ್ಟಿದೆ. ವಿಶ್ವವನ್ನೇ ಬಾಧಿಸುತ್ತಿರುವ ಕೊರೊನಾ ಸೋಂಕು ತಾನಾಗೇ ಹರಡದು. ಹರಡಿಸಿದರಷ್ಟೇ ಇದು ಹರಡುತ್ತದೆ ಎಂದು ಮಾಜಿ ಸಂಸದ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಆಯನೂರು ಮಂಜುನಾಥ್ ಕಿವಿಮಾತು ಹೇಳಿದ್ದಾರೆ.
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್

ಶಿವಮೊಗ್ಗ: ಕಣ್ಣಿಗೆ ಕಾಣದಿರುವ ಶತ್ರು ಕೋವಿಡ್-19 ಇಡೀ ಪ್ರಪಂಚವನ್ನೇ ನಡುಗಿಸಿಬಿಟ್ಟಿದೆ. ವಿಶ್ವವನ್ನೇ ಬಾಧಿಸುತ್ತಿರುವ ಕೊರೊನಾ ಸೋಂಕು ತಾನಾಗೇ ಹರಡದು. ಹರಡಿಸಿದರಷ್ಟೇ ಇದು ಹರಡುತ್ತದೆ ಎಂದು ಮಾಜಿ ಸಂಸದ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಆಯನೂರು ಮಂಜುನಾಥ್ ಕಿವಿಮಾತು ಹೇಳಿದ್ದಾರೆ.

ನಗರದಲ್ಲಿ ಕಟ್ಟಡ ಕೂಲಿ ಕಾರ್ಮಿಕರಿಗಾಗಿ ಏರ್ಪಡಿಸಿದ್ದ ಕೊರೊನಾ ಜಾಗೃತಿಯನ್ನುದ್ದೇಶಿಸಿ ಮಾತನಾಡಿದ ಅವರು, ತೇವಾಂಶ ಇರುವ ದೇಹದ ಭಾಗಗಳಾದ ಕಣ್ಣು, ಕಿವಿ, ಮೂಗು, ಬಾಯಿಯನ್ನು ಆಗಾಗ ಮುಟ್ಟುಕೊಳ್ಳಬಾರದು. ಕೋವಿಡ್-19 ವೈರಸ್ ಹರಡಿಸುವುದರಿಂದ ಅದು ಹರಡುತ್ತದೆ. ಕೊರೊನಾ ಹರಡದಂತೆ ತಡೆಯಲು ಸಾಮಾಜಿಕ ಅಂತರ ಬಹಳ
ಮುಖ್ಯ. 

ನಾವು ಕರವಸ್ತ್ರದಲ್ಲಿಯೋ ಮುಖಗೌಸಿನಲ್ಲಿಯೋ ಕೆಮ್ಮಿದರೆ, ಸೀನಿದರೆ ಅದು ಅಲ್ಲಿಯೇ ಇರುತ್ತದೆ. ಕೊರೊನಾ ಕೋವಿಡ್-19 ಕ್ಕೆ ಸ್ವಂತ ಜೀವವಿಲ್ಲ. ನಾವು ಹರಡಿಸಿದರಷ್ಟೇ ಜಾಗೃತಿಯಿಲ್ಲದೆಯೋ ಅಥವಾ ನಿರ್ಲಕ್ಷ್ಯದಿಂದಲೋ ಮುನ್ನೆಚ್ಚರಿಕೆಯಿಲ್ಲದೇ ಮೈಕೈ ಮುಟ್ಟಿ ಸ್ವಚ್ಛಗೊಳಿಸದೇ ಇನ್ನೊಬ್ಬರನ್ನೋ ವಸ್ತುವನ್ನೋ ಮುಟ್ಟಿದರೆ ಅದು ಸುಲಭವಾಗಿ ಹರಡುತ್ತದೆ. ಈ ಬಗ್ಗೆ ಕೂಲಿ ಕಾರ್ಮಿಕರು,ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲರಿಗೂ‌ ಜಾಗೃತಿ ಇರುವುದು ಮುಖ್ಯ ಎಂದರು.

ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ವೈದ್ಯರಾಗಲೀ, ಆಶಾ ಕಾರ್ಯಕರ್ತೆಯರಾಗಲೀ ಬರೀ ಸಂಬಳಕ್ಕಾಗಿ ಕೆಲಸ ಮಾಡದೇ ಸೇವೆ ಕರ್ತವ್ಯವೆಂದು ತಮ್ಮ ಪ್ರಾಣವನ್ನೂ ಸಹ ಲೆಕ್ಕಿಸದೇ ದುಡಿಯುತ್ತಿದ್ದಾರೆ ಅಂತವರಿಗೆ ನಾವು ಸಹಕಾರ ನೀಡಬೇಕೆ ಹೊರತು ಹಲ್ಲೆ ಮಾಡಬಾರದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com