ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರ ಗುರ್ತಿಕೆಗೆ ಹೈ-ಟೆಕ್ ಮೊರೆ ಹೋದ ಆರೋಗ್ಯ ಇಲಾಖೆ

ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಬಲತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದರ ಜೊತೆ ಜೊತೆಗೆ ರಾಜ್ಯ ಸರ್ಕಾರ ಕೂಡ ವೈರಸ್ ವಿರುದ್ಧ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನೂ ಹೆಚ್ಚಿಸುತ್ತಲೇ ಇದೆ. ಸೋಂಕಿಗೊಳಗಾದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರನ್ನು ಗುರ್ತಿಸುವ ಸಲುವಾಗಿ ಸರ್ಕಾರ ಹೈ-ಟೆಕ್ ಮೊರೆ ಹೋಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಬಲತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದರ ಜೊತೆ ಜೊತೆಗೆ ರಾಜ್ಯ ಸರ್ಕಾರ ಕೂಡ ವೈರಸ್ ವಿರುದ್ಧ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನೂ ಹೆಚ್ಚಿಸುತ್ತಲೇ ಇದೆ. ಸೋಂಕಿಗೊಳಗಾದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರನ್ನು ಗುರ್ತಿಸುವ ಸಲುವಾಗಿ ಸರ್ಕಾರ ಹೈ-ಟೆಕ್ ಮೊರೆ ಹೋಗಿದೆ. 

ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಗುರ್ತಿಸಲು ಹೊಸ ಆ್ಯಪ್'ವೊಂದನ್ನು ಇದೀಗ ವಿನ್ಯಾಸಗೊಳಿಸಲಾಗುತ್ತಿದ್ದು, ಆ್ಯಪ್ ಬಿಡುಗಡೆಗೊಂಡ ಬಳಿಕ ಈ ಕುರಿತು ಮತ್ತಷ್ಟು ಮಾಹಿತಿ ನೀಡುವುದಾಗಿ ಅಧಿಕಾರಿಘಳು ಮಾಹಿತಿ ನೀಡಿದ್ದಾರೆ. 

ಆ್ಯಪ್ ಬಿಡುಗಡೆಯಾದ ಬಳಿಕ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಗುರ್ತಿಸುವುದು ಮತ್ತಷ್ಟು ತೀವ್ರ ಹಾಗೂ ವೇಗವಾಗಲಿದೆ. ಬಳಿಕ ಸಂಪರ್ಕ ಹೊಂದಿರುವವರನ್ನು 24 ಗಂಟೆಯಿಂದ 48 ಗಂಟೆಗಳೊಳಗಾಗಿ ಫೀವರ್ ಕ್ಲಿನಿಕ್'ಗೆ ಕರೆತಂದು ತಪಾಸಣೆ ನಡೆಸಲಾಗುತ್ತದೆ ಎಂದು ಐಎಎಸ್ ಅಧಿಕಾರಿ ಮುನೀಶ್ ಮೌಡ್ಗಿಲ್ ಅವರು ಹೇಳಿದ್ದಾರೆ. 

ರಾಜ್ಯ ಹಾಗೂ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರೇ ಈ ಕಾರ್ಯವನ್ನು ಮಾಡಲಿದ್ದಾರೆ. ಹೆಚ್ಐವಿ ಹಾಗೂ ಟಿಬಿ ರೋಗಗಳ ಗುರ್ತಿಸುವ ಅನುಭವ ಇವರಲ್ಲಿದ್ದು, ಈ ಕಾರ್ಯಕ್ಕೆ ಅವರ ಅನುಭವ ಸಹಾಯಕವಾಗುತ್ತದೆ. ಸೋಂಕಿತರ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚುವ ಕಲೆ ಅವರಲ್ಲಿದೆ. 

ರಾಜ್ಯದಲ್ಲಿ 3000 ಮಂದಿ ಸೋಂಕಿತರ ಸಂಪರ್ಕ ಹೊಂದಿದ್ದವರನ್ನು ಹುಡುಕುವುದರಲ್ಲಿ ಕಾರ್ಯನಿರತರಾಗಿದ್ದು, ಇದರಲ್ಲಿ 1000 ಮಂದಿ ಬೆಂಗಳೂರಿನಲ್ಲಿದ್ದಾರೆ. ಆ್ಯಪ್ ಮೂಲಕ ಸೋಂಕಿತ ವ್ಯಕ್ತಿಯೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದವರನ್ನು ಶೀಘ್ರಗತಿಯಲ್ಲಿ ಹಾಗೂ ವೇಗವಾಗಿ ಕಂಡು ಹಿಡಿಯಬಹುದು. ಬೆಂಗಳೂರಿನಲ್ಲಿರುವ ಸೋಂಕಿತನೊಂದಿಗೆ ಮಂಗಳೂರು ವ್ಯಕ್ತಿ ಸಂಪರ್ಕದಲ್ಲಿದ್ದರೂ ಆ್ಯಪ್ ಮೂಲಕ ಕಂಡು ಹಿಡಿಯಬಹುದು. ಈ ಕುರಿತ ಎಲ್ಲಾ ವರದಿಗಳು ಕೇಂದ್ರ ಹಾಗೂ ಎಲ್ಲಾ ಅಧಿಕಾರಿಗಳಿಗೂ ಲಭ್ಯವಾಗಲಿದೆ. ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯಲ್ಲಿ ಜ್ವರ, ಶೀತ, ಕೆಮ್ಮು, ಉಸಿರಾಟದ ಸಮಸ್ಯೆ ಕಂಡು ಬಂದಿದ್ದೇ ಆದಲ್ಲಿ ಕೂಡಲೇ ಅವರನ್ನು ಫೀವರ್ ಕ್ಲಿನಿಕ್'ಗೆ ಕರೆದೊಯ್ಯಲಾಗುತ್ತದೆ. ಬಳಿಕ ತಪಾಸಣೆ ನಡೆಸುವ ವೈದ್ಯರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆಂದು ಮೌಡ್ಗಿಲ್ ಅವರು ತಿಳಿಸಿದ್ದಾರೆ. 

ಪ್ರಸ್ತುತ ರಾಜ್ಯದಲ್ಲಿ ಸೋಂಕಿತರೊಂದಿಗೆ  ನೇರ ಸಂಪರ್ಕ ಹೊಂದಿರುವ 3,669 ಮಂದಿ ಹಾಗೂ ಪರೋಕ್ಷ ಸಂಪರ್ಗ ಹೊಂದಿರುವ 7,892 ಮಂದಿಯ ಮೇಲೆ ಆರೋಗ್ಯ ಇಲಾಖೆ ಕಣ್ಗಾವಲಿರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com