ಬೆಂಗಳೂರು: ಮಾನವೀಯತೆ ಮೆರೆದ ಮುಖ್ಯಪೇದೆಗೆ ನಗದು ಪುರಸ್ಕಾರ

ಲಾಕ್'ಡೌನ್ ಪರಿಣಾಮ ಔಷಧ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಕ್ಯಾನ್ಸರ್ ರೋಗಿಯೊಬ್ಬರ ನೋವಿಗೆ ಸ್ಪಂದಿಸಿದ ಮುಖ್ಯ ಪೇದೆಯೊಬ್ಬರು ತಾವೇ ಸ್ವತಃ 960 ಕಿಮೀ ದ್ವಿಚಕ್ರ ವಾಹನದಲ್ಲಿ ತೆರಳಿ ರೋಗಿಗೆ ಔಷಧಿ ತಲುಪಿಸಿದ ವಿಷಯ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು, ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಎಸ್ ಕುಮಾರಸ್ವಾಮಿ
ಎಸ್ ಕುಮಾರಸ್ವಾಮಿ

ಬೆಂಗಳೂರು: ಲಾಕ್'ಡೌನ್ ಪರಿಣಾಮ ಔಷಧ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಕ್ಯಾನ್ಸರ್ ರೋಗಿಯೊಬ್ಬರ ನೋವಿಗೆ ಸ್ಪಂದಿಸಿದ ಮುಖ್ಯ ಪೇದೆಯೊಬ್ಬರು ತಾವೇ ಸ್ವತಃ 960 ಕಿಮೀ ದ್ವಿಚಕ್ರ ವಾಹನದಲ್ಲಿ ತೆರಳಿ ರೋಗಿಗೆ ಔಷಧಿ ತಲುಪಿಸಿದ ವಿಷಯ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು, ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಅದೋಕ್ಷ್ ಶಾಸ್ತ್ತಿ ಎಂಬ ವ್ಯಕ್ತಿ ತಮ್ಮ ಸ್ನೇಹಿತರು  ಹಾಗೂ ಸಂಬಂಧಿಗಳಿಂದ ಹಣ ಸಂಗ್ರಹಿಸಿ ಶುಕ್ರವಾರ ಸಂಜೆ ಮುಖ್ಯ ಪೇದೆ ಎಸ್.ಕುಮಾರಸ್ವಾಮಿ ಅವರಿಗೆ 46 ಸಾವಿರ ನೀಡಿದ್ದಾರೆ, 

ಇಂಥಹ ಕಠಿಣ ಪರಿಸ್ಥಿತಿಯಲ್ಲಿ ಇಂತಹ ಸುದ್ದಿಗಳು ನಿಜವಾಗಲೂ ಮನಸ್ಸು ತಟ್ಟುತ್ತವೆ. ಅಷ್ಟು ದೂರ ಬೈಕ್ ನಲ್ಲಿ ಕ್ರಮಿಸಿ ಔಷಧ ತಂದುಕೊಟ್ಟಿರುವದು ಶ್ಲಾಘನೀಯ ವಿಷಯ.

ಅದು ಅಪರಿಚಿತರೊಬ್ಬರಿಗಾಗಿ ಸಾವಿರ ಕಿಮೀ ಕ್ರಮಿಸುವುದು ಸಣ್ಣ ವಿಷಯವಲ್ಲ, ಹಾಗಾಗಿ ನನಗೆ ಮತ್ತು ನನ್ನ ಸ್ನೇಹಿತರಿಗೆ ಅವರಿಗೆ ಸಾಯ ಮಾಡಬೇಕು ಎನಿಸಿತು ಎಂದು ಅದೋಕ್ಷ್ ಹೇಳಿದ್ದಾರೆ.

ಇನ್ ಫೆಂಟ್ರಿ ರಸ್ತೆಯಲ್ಲಿರುವ ಖಾಸಗಿ ಕಂಪನಿಯ ವಕೀಲರಾಗಿ ಅದೋಕ್ಷ್ ಶಾಸ್ತ್ರಿ ಕೆಲಸ ಮಾಡುತ್ತಿದ್ದಾರೆ, ಈ ಬೆಳವಣಿಗೆಯಿಂದ ಪೇದೆ ಕುಮಾರಸ್ವಾಮಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ, ನಾನು ಯಾವುದೇ ನಿರೀಕ್ಷೆಯಿಲ್ಲದೇ ಕೆಲಸ ಮಾಡಿದ್ದೇನೆ, ತಮಗೆ ಧನ್ಯವಾದ ಎಂದು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com