ವ್ಯಾಪಕವಾಗುತ್ತಿರುವ ಕೊರೋನಾ: ರಾಜ್ಯದಲ್ಲಿ ಮತ್ತೆ ನಾಲ್ವರಲ್ಲಿ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 388ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗುತ್ತಿದ್ದು, ಭಾನುವಾರ ಮತ್ತೆ ನಾಲ್ವರಲ್ಲಿ ವೈರಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 388ಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗುತ್ತಿದ್ದು, ಭಾನುವಾರ ಮತ್ತೆ ನಾಲ್ವರಲ್ಲಿ ವೈರಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 388ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆವರೆಗೆ ನಾಲ್ವರಲ್ಲಿ ವೈರಸ್ ಪತ್ತೆಯಾಗಿದ್ದು, ಇದರಂತೆ 388 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, 14 ಮಂದಿ ಸಾವನ್ನಪ್ಪಿದ್ದು, 105 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. 

ಪ್ರಸ್ತುತ ಪತ್ತೆಯಾಗಿರುವ ನಾಲ್ಕು ಸೋಂಕು ಪ್ರಕರಣಗಳೂ ಕೂಡ ಮೈಸೂರು ನಗರದಲ್ಲಿಯೇ ಕಂಡು ಬಂದಿದ್ದು, ಇದರಲ್ಲಿ ಎರಡ ಪ್ರಕರಣಗಳು ನಂಜನಗೂಡಿನಿಂದ ವರದಿಯಾಲಿದೆ. ಈ ಬೆಳವಣಿಗೆ ಮೈಸೂರು ಜನತೆಯಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಮೈಸೂರಿನ ಇಬ್ಬರು ನವದೆಹಲಿಗೆ ಪ್ರಯಾಣ ಮಾಡಿದ ಹಿಸ್ಟರಿ ಹೊಂದಿದ್ದು, ಉಳಿದ ಇಬ್ಬರು ನಂಜನಗೂಡಿನ ಔಷಧ ಕಾರ್ಖಾನೆಗೆ ಸಂಬಂಧಿಸಿದವರಾಗಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com