ಕೇರಳದ ಕಾಸರಗೋಡು ಜಿಲ್ಲೆ ಕೊರೋನಾ ವೈರಸ್ ನ್ನು ಸಮರ್ಥವಾಗಿ ಎದುರಿಸಿದ್ದು ಹೇಗೆ?

ಕೇರಳ ರಾಜ್ಯದ ಮಂಗಳೂರು ಗಡಿಯಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಶಂಕಿತ ಪ್ರಕರಣ ವರದಿಯಾಗಿದ್ದು ಜನವರಿ 31ರಂದು. ನಂತರ ಜಿಲ್ಲೆಯಲ್ಲಿ ನಿಯಂತ್ರಣ ಮಾಡಲು ಸಾಧ್ಯವಿಲ್ಲದ ರೀತಿಯಲ್ಲಿ ವ್ಯಾಪಿಸಿತು. ಒಂದು-ಒಂದೂವರೆ ತಿಂಗಳಲ್ಲಿಯೇ ಹಲವು ಮಂದಿಯಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಹುಟ್ಟಿಸಿತ್ತು.
ರಿಜಿತ್ ಕೃಷ್ಣನ್ ತಮ್ಮ ಸಿಬ್ಬಂದಿಯೊಂದಿಗೆ(ಎಡ ತುದಿಯಲ್ಲಿರುವವರು)
ರಿಜಿತ್ ಕೃಷ್ಣನ್ ತಮ್ಮ ಸಿಬ್ಬಂದಿಯೊಂದಿಗೆ(ಎಡ ತುದಿಯಲ್ಲಿರುವವರು)

ಕಾಸರಗೋಡು: ಕೇರಳ ರಾಜ್ಯದ ಮಂಗಳೂರು ಗಡಿಯಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಶಂಕಿತ ಪ್ರಕರಣ ವರದಿಯಾಗಿದ್ದು ಜನವರಿ 31ರಂದು. ನಂತರ ಜಿಲ್ಲೆಯಲ್ಲಿ ನಿಯಂತ್ರಣ ಮಾಡಲು ಸಾಧ್ಯವಿಲ್ಲದ ರೀತಿಯಲ್ಲಿ ವ್ಯಾಪಿಸಿತು. ಒಂದು-ಒಂದೂವರೆ ತಿಂಗಳಲ್ಲಿಯೇ ಹಲವು ಮಂದಿಯಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಹುಟ್ಟಿಸಿತ್ತು.

ಕೊರೋನಾ ಸೋಂಕು ಮೊದಲ ಬಾರಿಗೆ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಸಮಯದಲ್ಲಿಯೇ ನಮ್ಮ ಸಿಬ್ಬಂದಿಗೆ ಸೋಂಕು ನಿಯಂತ್ರಣ ಮತ್ತು ಕ್ಷಿಪ್ರ ಪ್ರತಿಕ್ರಿಯೆಯಲ್ಲಿ ರಿಫ್ರೆಶ್ ಕೋರ್ಸ್ ನೀಡಲಾಯಿತು. ವೈಯಕ್ತಿಕ ಸುರಕ್ಷಾ ಸಾಧನ(ಪಿಪಿಇ)ಕಿಟ್ ಗಳನ್ನು ಹೇಗೆ ಬಳಸಬೇಕು, ಏನು ಮಾಡಬಾರದು, ಏನು ಮಾಡಬೇಕು ಎಂಬ ಬಗ್ಗೆ ಆಂಬ್ಯುಲೆನ್ಸ್ ಚಾಲಕರಿಗೆ ಸಹ ತಿಳಿಸಿಹೇಳಲಾಯಿತು ಎಂದು ನಿಲಯ ವೈದ್ಯಕೀಯ ಅಧಿಕಾರಿ ರಿಜಿತ್ ಕೃಷ್ಣನ್ ಹೇಳುತ್ತಾರೆ. ಈ ಯುವ ವೈದ್ಯರೇ ಜಿಲ್ಲಾಸ್ಪತ್ರೆಯನ್ನು ಕೊರೋನಾ ಚಿಕಿತ್ಸೆಗೆ ಸರ್ವ ರೀತಿಯಲ್ಲಿ ಸನ್ನದ್ಧ ಮಾಡಿದ್ದವರು.

ಕಾಞಂಗಾಡಿನ ಜಿಲ್ಲಾಸ್ಪತ್ರೆ: ಕಾಸರಗೋಡಿನ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದು ಕಾಞಂಗಾಡಿನ ಜಿಲ್ಲಾಸ್ಪತ್ರೆಯಲ್ಲಿ. ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗೆ ಆಸ್ಪತ್ರೆಯನ್ನು ದಿನಕ್ಕೆ ಮೂರು ಬಾರಿ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿತ್ತು. ಕೊರೋನಾ ಸೋಂಕಿನ ವಿರುದ್ಧ ಹೋರಾಡಿದ ವೀರರು ಇವರು ಎನ್ನುತ್ತಾರೆ ರಿಜಿತ್ ಕೃಷ್ಣನ್.

ಸರಿಯಾದ ಸಿದ್ಧತೆ ಮಾಡಿಕೊಂಡಿದ್ದರಿಂದ ರಾಜ್ಯದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕು ಸಂಖ್ಯೆ 155ಕ್ಕೆ ಕಾಸರಗೋಡಿನಲ್ಲಿ ಏರಿಕೆಯಾಗಿದ್ದರೂ ಕೂಡ ಈ ಸಿಬ್ಬಂದಿ ಆತಂಕಗೊಂಡಿರಲಿಲ್ಲ. ಶಂಕಿತರನ್ನು 105 ಬೆಡ್ ಗಳ ವ್ಯವಸ್ಥೆ ಹೊಂದಿರುವ ಎರಡು ಆಸ್ಪತ್ರೆಗಳಿಗೆ ಕಳುಹಿಸಿದೆವು. ನಮ್ಮ ದಾದಿಯರನ್ನು ಅಲ್ಲಿ ನೇಮಿಸಲಾಯಿತು. ಕಾಸರಗೋಡಿನಲ್ಲಿ ವೈದ್ಯಕೀಯ ಕಾಲೇಜು ಇಲ್ಲ, ಎನ್ ಕ್ಯುಎಎಸ್ ಪ್ರಮಾಣಪತ್ರವನ್ನು ಹೊಂದಿರುವ ಕೇರಳದ ಏಕೈಕ ಜಿಲ್ಲಾಸ್ಪತ್ರೆ ಇದಾಗಿದ್ದು ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳುವಲ್ಲಿ ವಿಶೇಷ ಸೇವೆಯನ್ನು ನೀಡುವುದು ಅನಿವಾರ್ಯವಾಗಿತ್ತು.ಹೀಗಾಗಿ ಏಕಾಂತ ಪಾವತಿ ವಾರ್ಡನ್ನು ಕೋವಿಡ್-19 ವಾರ್ಡ್ ಆಗಿ ಪರಿವರ್ತಿಸಲಾಯಿತು. ಸ್ವಚ್ಛಗೊಳಿಸುವ ಸಿಬ್ಬಂದಿಯನ್ನು ಅಲ್ಲಿ ಶುಚಿಗೊಳಿಸುವುದಕ್ಕೆ ಮಾತ್ರ ನೇಮಿಸಲಾಯಿತು. ಹೀಗೆ ನಿಧಾನವಾಗಿ ಕೊರೋನಾ ನಿಯಂತ್ರಣಕ್ಕೆ ಬಂತು ಎನ್ನುತ್ತಾರೆ ರಿಜಿತ್ ಕೃಷ್ಣನ್.

ಮಂಗಳೂರಿಗೆ ಹೋಗಲು ಸಾಧ್ಯವಾಗದ ರೋಗಿಗಳಿಗೆ ಲಾಕ್ ಡೌನ್ ಸಮಯದಲ್ಲಿ ಆಸ್ಪತ್ರೆಯು ಕೀಮೋಥೆರಪಿ ಸೇವೆಯನ್ನು ಸಹ ಹೆಚ್ಚಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com