3 ಲಕ್ಷ ಪಿಪಿಇ ಕಿಟ್ ಖರೀದಿಗೆ ರಾಜ್ಯ ಸರ್ಕಾರ ಆದೇಶ 

ಕೊರೋನಾ ಯೋಧರೆಂದು ಹೇಳಲಾಗುತ್ತಿರುವ ವೈದ್ಯರ ಸುರಕ್ಷತೆಗಾಗಿ ರಾಜ್ಯ ಸರ್ಕಾರ 3 ಲಕ್ಷ ವೈಯಕ್ತಿಕ ಸುರಕ್ಷಾ ಸಾಧನಗಳ (ಪಿಪಿಇ ಕಿಟ್) ಖರೀದಿಗೆ ಆದೇಶಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಯೋಧರೆಂದು ಹೇಳಲಾಗುತ್ತಿರುವ ವೈದ್ಯರ ಸುರಕ್ಷತೆಗಾಗಿ ರಾಜ್ಯ ಸರ್ಕಾರ 3 ಲಕ್ಷ ವೈಯಕ್ತಿಕ ಸುರಕ್ಷಾ ಸಾಧನಗಳ (ಪಿಪಿಇ ಕಿಟ್) ಖರೀದಿಗೆ ಆದೇಶಿಸಿದೆ. 

ಡಿಎಹ್'ಬಿ ಗ್ಲೋಬಲ್ 2 ಲಕ್ಷ ಹಾಗೂ ಬಿಗ್ ಫಾರ್ಮಾಸ್ಯುಟಿಕಲ್ಸ್ ಕಂಪನಿ 1 ಲಕ್ಷ ಕಿಟ್ ಗಳನ್ನು ಒದಗಿಸಲಿದೆ. ಈ ಕಿಟ್ 10 ಬಿಡಿ ಭಾಗಗಳನ್ನು ಹೊಂದಿರಲಿದೆ. ಫೇಸ್ ಮಾಸ್ಕ್, ಕನ್ನಡಕ, ಎನ್-95 ಮುಖಗವಸು, ಶಸ್ತ್ರಚಿಕಿತ್ಸೆಯ ಮುಖವಾಡಗಳು, ಕೈಗವಸುಗಳು, ಎರಡು ಪದರದ ನಿಲುವಂಗಿ, ಪಾದರಕ್ಷೆಗಳ ಕವರ್, ತ್ಯಾಜ್ಯ ಬಿಸಾಡುವ ಚೀಲ, ಪ್ಲಾಸ್ಟಿಕ್ ಏಪ್ರಾನ್ ಇರಲಿದೆ. ಭಾನುವಾರ ಮತ್ತು ಸೋಮವಾರ ತಲಾ ಒಂದು ಬ್ಯಾಚ್ ಗಳು ಬರಲಿವೆ. 

ಈ ಕಿಟ್ ಗಳನ್ನು ಐಸೋಲೇಷನ್ ವಾರ್ಡ್ ನಲ್ಲಿನ ವೈದ್ಯರು, ಶುಶ್ರುಷಕರು, ಆರೋಗ್ಯ ಸಿಬ್ಬಂದಿಗೆ ನೀಡಲಾಗುತ್ತದೆ. ಸೋಂಕು ಶಂಕಿತರನ್ನು ಪತ್ತೆ ಹಚ್ಚಲು ಕಾರ್ಯನಿರ್ವಹಿಸುತ್ತಿರುವವರಿಗೂ ಒದಗಿಸಲಾಗುತ್ತದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com