ಲಾಕ್​ಡೌನ್​ ವೇಳೆ ರೈತರ ಪರ ನಿಂತ ಸಂಸದ ಡಿಕೆ ಸುರೇಶ್​: 650 ಟನ್ ಕಲ್ಲಂಗಡಿ ಖರೀದಿ 

ಕೊರೊನಾ ಲಾಕ್​ಡೌನ್​ನಿಂದ‌ ನಷ್ಟ ಅನುಭವಿಸುತ್ತಿರುವ ರೈತರ ನೆರವಿಗೆ ಸಂಸದ ಡಿ.ಕೆ.ಸುರೇಶ್ ಧಾವಿಸಿ 18 ಎಕರೆಯಲ್ಲಿ ಬೆಳೆದಿರುವ 650 ಟನ್ ಕಲ್ಲಂಗಡಿ, ಮೂರೂವರೆ ಎಕರೆಯಲ್ಲಿನ ಬದನೆ, ಟೊಮ್ಯಾಟೊ ಖರೀದಿಸಿದ್ದಾರೆ.
ಡಿಕೆ ಸುರೇಶ್
ಡಿಕೆ ಸುರೇಶ್

ಚಾಮರಾಜನಗರ: ಕೊರೊನಾ ಲಾಕ್​ಡೌನ್​ನಿಂದ‌ ನಷ್ಟ ಅನುಭವಿಸುತ್ತಿರುವ ರೈತರ ನೆರವಿಗೆ ಸಂಸದ ಡಿ.ಕೆ.ಸುರೇಶ್ ಧಾವಿಸಿ 18 ಎಕರೆಯಲ್ಲಿ ಬೆಳೆದಿರುವ 650 ಟನ್ ಕಲ್ಲಂಗಡಿ, ಮೂರೂವರೆ ಎಕರೆಯಲ್ಲಿನ ಬದನೆ, ಟೊಮ್ಯಾಟೊ ಖರೀದಿಸಿದ್ದಾರೆ.

ಭಾನುವಾರ ಸಂಜೆ ಹನೂರು ತಾಲೂಕಿನ‌ ಹೂಗ್ಯಂ ಗ್ರಾಪಂ ವ್ಯಾಪ್ತಿಯ ನಲ್ಲೂರಿಗೆ ಭೇಟಿ ನೀಡಿದ ಸುರೇಶ್​​, ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ಹಂಚಲು 18 ಎಕರೆಯಲ್ಲಿ 4-5 ಮಂದಿ ರೈತರು ಬೆಳೆದಿರುವ ಕಲ್ಲಂಗಡಿಯನ್ನು ಖರೀದಿಸಿದ್ದಾರೆ. ಜೊತೆಗೆ 3.5 ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ, ಬದನೆ ಕಾಯಿಯನ್ನು ಖರೀದಿಸಿ ಹೂಗ್ಯಂ ಗ್ರಾಪಂ‌ ವ್ಯಾಪ್ತಿಯಲ್ಲಿ ಉಚಿತವಾಗಿ ಹಂಚುವಂತೆ ಸ್ಥಳೀಯ ಕಾರ್ಯಕರ್ತರಿಗೆ ಸೂಚಿಸಿದ್ದಾರೆ‌.

ಲಾಕ್​ಡೌನ್​ ವೇಳೆ ರೈತರ ಪರ ನಿಂತ ಡಿ.ಕೆ.ಸುರೇಶ್​ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್​​, ತರಕಾರಿ, ಹಣ್ಣು, ಹೂವು ಯಾರೂ ಕಾಪಾಡಿಕೊಳ್ಳಲಾಗಲ್ಲ. ಹೂ ಅಂತೂ ಮೂರೇ ದಿನಕ್ಕೆ ಒಣಗಿ ಹೋಗುತ್ತೆ. ಮಾರುಕಟ್ಟೆ ಕೂಡ ಉತ್ತೇಜನಕಾರಿಯಾಗಿಲ್ಲ. ಹಾಗಾಗಿ ಜನಪ್ರತಿನಿಧಿಗಳು ರೈತರಿಂದ ಖರೀದಿಸಬೇಕೆಂಬ ಉದ್ದೇಶದಿಂದ ಇದನ್ನು ಮಾಡುತ್ತಿದ್ದೇನೆ. ರೈತರಿಗೆ ಅದರಲ್ಲೂ ಯುವ ರೈತರಿಗೆ ಚೈತನ್ಯ ತುಂಬಲು ನಾನು ತರಕಾರಿ, ಹಣ್ಣು ಖರೀದಿಸುತ್ತಿದ್ದೇನೆ ಎಂದರು.

ವರದಿ ಗುಳಿಪುರ ನಂದೀಶ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com