ಗಂಗಾವತಿ: ಅಕ್ರಮ ನುಸುಳುಕೋರರ ತಡೆಗೆ ನದಿಯಲ್ಲಿ ದೊಡ್ಡ ಹೊಂಡ, ಕಂದಕ ಸೃಷ್ಟಿಸಿದ ಅಧಿಕಾರಿಗಳು!

ಈಗಾಗಲೆ ಕೊರೋನಾ ಪೀಡಿತರ ಹಾಟ್ ಲೀಸ್ಟ್ನಲ್ಲಿರುವ ನೆರೆಯ ಬಳ್ಳಾರಿ ಜಿಲ್ಲೆಯಿಂದ ಅಕ್ರಮವಾಗಿ ಜನ ಯಾವುದೇ ತಪಾಸಣೆಗೆ ಒಳಗಾಗದೇ ಕೊಪ್ಪಳ ಜಿಲ್ಲೆಯ ಗಡಿಯನ್ನು ಪ್ರವೇಶಿಸುತ್ತಿದ್ದಾರೆ. ಸಾಕಷ್ಟು ಚೆಕ್ ಪೋಸ್ಟ್ ಗಳಿದ್ದರೂ ಜನ ಕಣ್ತಪ್ಪಿಸಿ ಜಿಲ್ಲೆಗೆ ಪ್ರವೇಶಿಸುತ್ತಿದ್ದಾರೆ. 
ಕಂದಕ ತೋಡುತ್ತಿರುವ ಜೆಸಿಬಿ
ಕಂದಕ ತೋಡುತ್ತಿರುವ ಜೆಸಿಬಿ

ಗಂಗಾವತಿ: ಈಗಾಗಲೆ ಕೊರೋನಾ ಪೀಡಿತರ ಹಾಟ್ ಲೀಸ್ಟ್ನಲ್ಲಿರುವ ನೆರೆಯ ಬಳ್ಳಾರಿ ಜಿಲ್ಲೆಯಿಂದ ಅಕ್ರಮವಾಗಿ ಜನ ಯಾವುದೇ ತಪಾಸಣೆಗೆ ಒಳಗಾಗದೇ ಕೊಪ್ಪಳ ಜಿಲ್ಲೆಯ ಗಡಿಯನ್ನು ಪ್ರವೇಶಿಸುತ್ತಿದ್ದಾರೆ. ಸಾಕಷ್ಟು ಚೆಕ್ ಪೋಸ್ಟ್ ಗಳಿದ್ದರೂ ಜನ ಕಣ್ತಪ್ಪಿಸಿ ಜಿಲ್ಲೆಗೆ ಪ್ರವೇಶಿಸುತ್ತಿದ್ದಾರೆ. 

ಇದರಿಂದ ಕೊಪ್ಪಳ ಜಿಲ್ಲೆಯ ಜನರಿಗೆ ದೊಡ್ಡ ತಲೆನೋವಾಗಿದೆ. ಈಗ ಇದನ್ನು ತಡೆಯಲು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಬೊಂಬಾಟ್ ಐಡಿಯಾವೊಂದನ್ನು ಕಂಡು ಕೊಂಡಿದ್ದಾರೆ. ಅದೇನು ಅಂತಿರಾ ಈ ಸ್ಟೋರಿ ನೋಡಿ. 

ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯನ್ನು ತುಂಗಭದ್ರಾ ನದಿ ಇಭ್ಭಾಗಿಸಿಕೊಂಡು ರಾಯಚೂರು ತಲುಪುತ್ತದೆ. ಆದರೆ ಕೊಪ್ಪಳ ಜಿಲ್ಲೆಯ ಕಾರಟಗಿ ಮತ್ತು ಬಳ್ಳಾರಿ ಜಿಲ್ಲೆಯ ಶಿರುಗುಪ್ಪಾ ತಾಲ್ಲೂಕಿನ ಕೆಲ ಗ್ರಾಮಗಳ ಅಂತರ ಮಾತ್ರ ಅತ್ಯಂತ ಕಡಿಮೆ ಅಂದರೆ ಕೇವಲ ಎರಡೂ ಮೂರು ಕಿ.ಮೀ. ಮಾತ್ರ ಅಂತರ. ಹೀಗಾಗಿ ನದಿಯಲ್ಲಿ ಈಗ ನೀರಿನ ಪ್ರಮಾಣ ಕಡಿಮೆ ಇರುವ ಕಾರಣಕ್ಕೆ ಕಾರಟಗಿ ತಾಲ್ಲೂಕಿನ ನಂದಿಹಳ್ಳಿ-ಶಾಲಿಗೆನೂರು ಮೂಲಕ ಸಿರುಗುಪ್ಪಾ ತಾಲ್ಲೂಕಿನ ಮಣ್ಣೂರು-ಸೂಗೂರುದಿಂದ ಜನ ಕೊಪ್ಪಳ ಜಿಲ್ಲೆಯ ಗಡಿ ಪ್ರವೇಶಿಸುತ್ತಿದ್ದಾರೆ. 

ಅಕ್ರಮವಾಗಿ ಜನ ವಲಸೆ ಬರುತ್ತಿರುವುದನ್ನು ಕಂಡುಕೊಂಡ ತಾಲ್ಲೂಕು ಪಂಚಾಯಿತಿ ಇ.ಒ ಮೋಹನ್, ಕೂಡಲೆ ನದಿಯಲ್ಲಿ ಹೊಂಡ ಅಥವಾ ಬೃಹತ್ ಕಂದಕ ನಿರ್ಮಾಣ ಮಾಡಿಸುವಂತೆ ಪಂಚಾಯತ್ ಪಿಡಿಒ ಸುರೇಶ ಉಪ್ಪಾರ ಅವರಿಗೆ ಸೂಚನೆ ನೀಡಿದ್ದಾರೆ. 

ಕೂಡಲೆ ಕಾರ್ಯಾಚರಣೆಗೆ ಇಳಿದ ಪಿಡಿಒ, ನಂದಿಹಳ್ಳಿ-ಶಾಲಿಗೆನೂರು ಸಮೀಪದ ಇರುವ ನದಿಯಲ್ಲಿ ಅಳವಾದ ಗುಂಡಿಗಳನ್ನು ತೋಡಿಸಿದ್ದಾರೆ. ಇನ್ನು ಕೆಲವು ಕಡೆ ದೊಡ್ಡ ಪ್ರಮಾಣದಲ್ಲಿ ನದಿಯಲ್ಲಿ ಒಡ್ಡು ನಿರ್ಮಿಸಿ ಸುಲಭವಾಗಿ ಜನ ನುಸಳದಂತೆ ಕ್ರಮ ಕೈಗೊಂಡಿದ್ದಾರೆ. 

-ಶ್ರೀನಿವಾಸ .ಎಂ.ಜೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com