ಕರ್ಫ್ಯೂ ಪಾಸ್ ದುರುಪಯೋಗ, ಮದ್ಯ ಮಾರಾಟ: ರಾಜಕಾರಣಿಗೆ ಕೊರೋನ ಸೋಂಕು: ಆದರೂ ಬಿದ್ದಿಲ್ಲ ಕೇಸ್!

ಕರ್ಫ್ಯೂ ಪಾಸ್ ದುರುಪಯೋಗಪಡಿಸಿಕೊಂಡು ಮದ್ಯ ಮಾರಾಟ ಮಾಡುತ್ತಿದ್ದ ಪಂಜಾಬ್ ನ ರಾಜಕಾರಣಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ. 
ಕರ್ಫ್ಯೂ ಪಾಸ್ ದುರುಪಯೋಗ, ಮದ್ಯ ಮಾರಾಟ: ರಾಜಕಾರಣಿಗೆ ಕೊರೋನ ಸೋಂಕು: ಆದರೂ ಬಿದ್ದಿಲ್ಲ ಕೇಸ್!
ಕರ್ಫ್ಯೂ ಪಾಸ್ ದುರುಪಯೋಗ, ಮದ್ಯ ಮಾರಾಟ: ರಾಜಕಾರಣಿಗೆ ಕೊರೋನ ಸೋಂಕು: ಆದರೂ ಬಿದ್ದಿಲ್ಲ ಕೇಸ್!

ಪಾಟಿಯಾಲ: ಕರ್ಫ್ಯೂ ಪಾಸ್ ದುರುಪಯೋಗಪಡಿಸಿಕೊಂಡು ಮದ್ಯ ಮಾರಾಟ ಮಾಡುತ್ತಿದ್ದ ಪಂಜಾಬ್ ನ ರಾಜಕಾರಣಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ. ಕಮ್ಯುನಿಟಿ ಕಿಚನ್ ನ ಹೆಸರಿನಲ್ಲಿ ಜಿಲ್ಲಾಡಳಿತದಿಂದ ಪಾಸ್ ತೆಗೆದುಕೊಂಡಿದ್ದ ರಾಜಕಾರಣಿ ಅದನ್ನು ಪುಸ್ತಕ ಮಾರಾಟ ಹಾಗೂ ಮದ್ಯ ಮಾರಾಟಕಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದರು. ಪರಿಣಾಮ ಈಗ ಈ ರಾಜಕಾರಣಿಯ ಜೊತೆ ಇತರ ಮೂವರಿಗೂ ಸಹ ಸೋಂಕು ತಗುಲಿದೆ. 

ಪಟಿಯಾಲದ ನಿವಾಸಿಯಾಗಿರುವ ಈ ರಾಜಕಾರಣಿ, ಕಮ್ಯುನಿಟಿ ಕಿಚನ್ ಮೂಲಕ ಬಡ ಹಾಗೂ ಅಗತ್ಯವಿರುವವರಿಗೆ ಆಹಾರ ಪೂರೈಕೆ ಮಾಡುತ್ತಿದ್ದರು. ಇದರ ಮರೆಯಲ್ಲಿಯೇ ಮದ್ಯ ಮಾರಾಟ ಹಾಗೂ ಪುಸ್ತಕ ಅಂಗಡಿ ನಡೆಸುತ್ತಿರುವ ಸ್ನೇಹಿತರ ಪುಸ್ತಕಗಳನ್ನೂ ಮಾರಾಟ ಮಾಡುತ್ತಿದ್ದರು. ಈ ರಾಜಕಾರಣಿ ಹಾಗೂ ಆತನ ಇಬ್ಬರು ಸಹಚರರಿಗೆ ಈಗ ಕೊರೋನಾ ಸೋಂಕು ದೃಢಪಟ್ಟಿದೆ. ಆತನೊಂದಿಗೆ ಪಟಿಯಾಲದಲ್ಲಿ ಸಂಪರ್ಕ ಹೊಂದಿದ್ದ 15 ಮಂದಿಗೆ ಸೋಂಕು ತಗುಲಿದೆ. ಆದರೆ ಆತನ ರಾಜಕೀಯ ಪ್ರಭಾವದಿಂದಾಗಿ ಈವರೆಗೂ ಪ್ರಕರಣ ದಾಖಲಿಸಲಾಗಿಲ್ಲ. 

ಇದಷ್ಟೇ ಅಲ್ಲದೇ ಪಾಸ್ ಗಳನ್ನು ಹಲವರು ದುರುಪಯೋಗಪಡಿಸಿಕೊಳ್ಳುತ್ತಿರುವುದು ವರದಿಯಾಗಿದ್ದು, ವಿಐಪಿಗಳನ್ನು ನಿಯಂತ್ರಿಸುವುದೇ ಪಂಜಾಬ್ ಪೊಲೀಸರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com