ಉಡುಪಿ: ಕೊರೋನಾ ವೈರಸ್ ವಿರುದ್ಧ ಸಮರ್ಥವಾಗಿ ಹೋರಾಡಲು ಸ್ಯಾಂಪಲ್ ಕಿಯೊಸ್ಕ್ ಗಳ ಸ್ಥಾಪನೆ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೋನಾ ಸೋಂಕು ನಿಯಂತ್ರಣ ಮೀರಿ ವ್ಯಾಪಿಸುತ್ತಿದ್ದರೂ ಕೂಡ ಉಡುಪಿ ಜಿಲ್ಲಾಡಳಿತ ಪರಿಸ್ಥಿತಿ ಕೈ ಮೀರಿ ಹೋಗದಂತೆ ಎಲ್ಲಾ ಮುತುವರ್ಜಿ ವಹಿಸುತ್ತಿದೆ. ಸಮುದಾಯ ಹಂತಕ್ಕೆ ಸೋಂಕು ಹಬ್ಬದಂತೆ ತಡೆಗಟ್ಟಲು ಇಡೀ ರಾಜ್ಯದಲ್ಲಿಯೇ ಅತ್ಯುತ್ತಮ ಕೊರೋನಾ ಪರೀಕ್ಷಾ ಕೇಂದ್ರಗಳನ್ನು ಹೊಂದಿದ್ದು, ಲಾಕ್ ಡೌನ್ ನ್ನು ಕೂಡ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ.
ವಾಕ್ ಇನ್ ಸ್ಯಾಂಪಲ್ ಕಿಯೊಸ್ಕ್
ವಾಕ್ ಇನ್ ಸ್ಯಾಂಪಲ್ ಕಿಯೊಸ್ಕ್

ಉಡುಪಿ:ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೋನಾ ಸೋಂಕು ನಿಯಂತ್ರಣ ಮೀರಿ ವ್ಯಾಪಿಸುತ್ತಿದ್ದರೂ ಕೂಡ ಉಡುಪಿ ಜಿಲ್ಲಾಡಳಿತ ಪರಿಸ್ಥಿತಿ ಕೈ ಮೀರಿ ಹೋಗದಂತೆ ಎಲ್ಲಾ ಮುತುವರ್ಜಿ ವಹಿಸುತ್ತಿದೆ. ಸಮುದಾಯ ಹಂತಕ್ಕೆ ಸೋಂಕು ಹಬ್ಬದಂತೆ ತಡೆಗಟ್ಟಲು ಇಡೀ ರಾಜ್ಯದಲ್ಲಿಯೇ ಅತ್ಯುತ್ತಮ ಕೊರೋನಾ ಪರೀಕ್ಷಾ ಕೇಂದ್ರಗಳನ್ನು ಹೊಂದಿದ್ದು, ಲಾಕ್ ಡೌನ್ ನ್ನು ಕೂಡ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ.

ಕೊರೋನಾ ಸೋಂಕಿತರು ಮತ್ತು ಶಂಕಿತರ ಪರೀಕ್ಷೆಗೆ ಉಡುಪಿ, ಕುಂದಾಪುರ ಮತ್ತು ಕಾರ್ಕಳ ಸರ್ಕಾರಿ ಆಸ್ಪತ್ರೆಗಳಲ್ಲಿ ವಾಕ್ ಇನ್ ಸ್ಯಾಂಪಲ್ ಕಲೆಕ್ಷನ್ ಕಿಯೊಸ್ಕ್ಸ್ ಗಳನ್ನು ನಿಯೋಜಿಸಲು ಜಿಲ್ಲಾಡಳಿತ ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ, ರೋಟರಿ ಕ್ಲಬ್ ಕುಂದಾಪುರ ಮತ್ತು ರೆಡ್ ಕ್ರಾಸ್ ಸೊಸೈಟಿ ಉಡುಪಿ ಕಿಯೊಸ್ಕ್ ನ್ನು ಸ್ಥಾಪಿಸಲು ಜಿಲ್ಲಾಡಳಿತಕ್ಕೆ ಹಣಕಾಸಿನ ನೆರವು ನೀಡಿವೆ.

ತಲಾ 55 ಸಾವಿರ ರೂಪಾಯಿ ವೆಚ್ಚದ ಎರಡು ಸ್ವ್ಯಾಬ್ ಸಂಗ್ರಹ ಕಿಯೋಸ್ಕ್ ಗಳನ್ನು ಉಡುಪಿಯಲ್ಲಿ ಭಾರತೀಯ ವೈದ್ಯಕೀಯ ಸಂಘ ನೀಡಿದೆ.ಅವುಗಳನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆ ಮತ್ತು ಡಾ ಟಿಎಂಎ ಪೈ ಆಸ್ಪತ್ರೆಗಳಲ್ಲಿ ಇರಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇಗಳ ಅವಶ್ಯಕತೆಯಿಲ್ಲದೆ ಸೋಂಕು ಶಂಕಿತರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಆದಷ್ಟು ಬೇಗನೆ ರಕ್ತ ಪರೀಕ್ಷೆ ಮಾಡಲು ಕಿಯೊಸ್ಕ್ ಗಳು ಸಹಾಯವಾಗಿದೆ. ಉಡುಪಿಯಲ್ಲಿರುವ ಎಲ್ಲಾ ನಾಲ್ಕು ಕಿಯೊಸ್ಕ್ ಗಳು ಕಾರ್ಯನಿರ್ವಹಿಸುತ್ತಿವೆ.

ಮೊನ್ನೆ ಏಪ್ರಿಲ್ 19ರ ಹೊತ್ತಿಗೆ 894 ಕೊರೋನಾ ಶಂಕಿತರನ್ನು ಪರೀಕ್ಷೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com