ರಾಜ್ಯದ ವಿವಿಧೆಡೆ ಕೃಷಿ ವಿಚಕ್ಷಣಾ ದಳದ ಮಿಂಚಿನ ಕಾರ್ಯಾಚರಣೆ: ಅಕ್ರಮ ಮೆಕ್ಕೆಜೋಳ ದಾಸ್ತಾನು ವಶ

ಕೃಷಿ ವಿಚಕ್ಷಣಾ ದಳ ಹಾಗೂ ಜಿಲ್ಲಾ‌ಕೃಷಿ ನಿರ್ದೇಶಕರ ತಂಡ ರಾಜ್ಯದ ವಿವಿಧೆಡೆ ಇಂದು ಮಿಂಚಿನ ಜಂಟಿ ಕಾರ್ಯಾಚರಣೆ ನಡೆಸಿದ್ದು ಹಲವೆಡೆ ಅಕ್ರಮ ಮೆಕ್ಕೆಜೋಳ ದಾಸ್ತಾನು ವಶಪಡಿಸಿಕೊಂಡಿದೆ.
ಮೆಕ್ಕೆಜೋಳ
ಮೆಕ್ಕೆಜೋಳ

ಬಳ್ಳಾರಿ: ಕೃಷಿ ವಿಚಕ್ಷಣಾ ದಳ ಹಾಗೂ ಜಿಲ್ಲಾ‌ಕೃಷಿ ನಿರ್ದೇಶಕರ ತಂಡ ರಾಜ್ಯದ ವಿವಿಧೆಡೆ ಇಂದು ಮಿಂಚಿನ ಜಂಟಿ ಕಾರ್ಯಾಚರಣೆ ನಡೆಸಿದ್ದು ಹಲವೆಡೆ ಅಕ್ರಮ ಮೆಕ್ಕೆಜೋಳ ದಾಸ್ತಾನು ವಶಪಡಿಸಿಕೊಂಡಿದೆ.

ಏ.21 ರಂದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಲಿಂಗನಾಯಕನಹಳ್ಳಿಯಲ್ಲಿ ಅಂದಾಜು 5 ಲಕ್ಷ ರೂ. ಮೌಲ್ಯದ , 31 ಕಿಂಟ್ವಾಲ್ ಹಾಗೂ ಹಿರೇಕೆರೂರು ತಾಲ್ಲೂಕಿನ ಶಿರಗುಂಟಿ ಗ್ರಾಮದಲ್ಲಿ 4.5 ಲಕ್ಷದ ಮೌಲ್ಯದ 35 ಕಿಂಟ್ವಾಲ್ ಮೆಕ್ಕೆಜೋಳ ಬಿಡಿ ಬೀಜ ದಾಸ್ತಾನು ಬೀಜಗಳನ್ನು  ವಶಪಡಿಸಿಕೊಂಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ, ಶಿಡ್ಲಗಟ್ಟ, ಗುಡಿಬಂಡೆ, ಬಾಗೇಪಲ್ಲಿ ತಾಲ್ಲೂಕುಗಳಿಗೆ ರಾಜ್ಯದ ಕೃಷಿ ಇಲಾಖೆಯ ವಿಜಿಲೆನ್ಸ್ ತಂಡ ಹಾಗೂ ಜಿಲ್ಲೆಯ ಕೃಷಿ ಅಧಿಕಾರಿಗಳು ಏಕಕಾಲಕ್ಕೆ ಕೃಷಿ ಪರಿಕರಗಳ ಮಾರಾಟಗಾರರ ಮಳಿಗೆಗಳಿಗೆ ಭೇಟಿ ನೀಡಿ ಅವಧಿ ಮುಗಿದ ಕೀಟನಾಶಕಗಳನ್ನು  ಮಾರಾಟ‌ ಮಾಡದಂತೆ ನೊಟೀಸ್ ನೀಡಿದ್ದಾರೆ.

ಹಾವೇರಿ ಜಿಲ್ಲೆ, ರಟ್ಟಿಹಳ್ಳಿ ತಾಲೂಕಿನ ಸೃಷ್ಟಿ ಆಗ್ರೋ ಕೇಂದ್ರ ಮಾರಾಟ ಪರವಾನಿಗೆಗಳ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ನೋಟೀಸ್ ನೀಡಲಾಗಿದೆ. ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ ವಿನಾಯಕ ಕೃಷಿ ಕೇಂದ್ರದಲ್ಲಿ ಅವಧಿ ಮುಗಿದ ಕೀಟನಾಶಗಳು, ಬೀಜಗಳನ್ನು  ಇಟ್ಟಿದರಿಂದ ಅಂಗಡಿಯನ್ನು ಜಪ್ತಿ ಮಾಡಲಾಗಿದೆ. ರಾಣೆಬೇನ್ನೂರಿನ ಹರ್ಷಿತ ಹೈಬ್ರೀಡ್ ಸಿಡ್ಸ್ ಮಳಿಗೆಯಲ್ಲಿ ಅಗತ್ಯ ದಾಖಲೆ ಇಲ್ಲದ ಕಾರಣ ಅಂಗಡಿಯನ್ನು ಜಪ್ತಿ ಮಾಡಲಾಗಿದೆ. 

ಉಳಿದ ನಾಲ್ಕು ಕೃಷಿ ಪರಿಕರ ಮಾರಾಟಗಾರರಿಗೆ ಅಗತ್ಯ ದಾಖಲೆ ಇಲ್ಲದ ಕಾರಣ ನೊಟೀಸ್ ‌ನೀಡಲಾಗಿದ್ದು ವರದಿಯನ್ನು ಕೃಷಿ ಇಲಾಖೆ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com